ಹೆಂಡತಿ ತನ್ನ ಗಂಡನಿಗಿಂತ ಎಷ್ಟು ಚಿಕ್ಕವಳಾಗಿರಬೇಕು? ಸರಿಯಾದ ವಯಸ್ಸಿನ ವ್ಯತ್ಯಾಸ ತಿಳಿಯಿರಿ.. Wedding

Boutique asked to pay Rs 5,000 fine to woman for stitching garments improperly before wedding event
Published on

Wedding : ಮದುವೆಗೆ ಮುನ್ನ ಹುಡುಗ ಮತ್ತು ಹುಡುಗಿಯ ವಯಸ್ಸಿನ ಬಗ್ಗೆ ಮಾಹಿತಿಯನ್ನು ಎರಡೂ ಕಡೆಯವರು   ತೆಗೆದುಕೊಳ್ಳುತ್ತಾರೆ. ಪ್ರೇಮ ವಿವಾಹದಲ್ಲಿ, ಪ್ರೇಮಿಗಳು ವಯಸ್ಸನ್ನು ನೋಡುವುದಿಲ್ಲ, ಅರೇಂಜ್ಡ್​​  ಮ್ಯಾರೇಜ್​​ನಲ್ಲಿ ಈ ವಿಷಯಕ್ಕೆ ವಿಶೇಷ ಗಮನ ನೀಡಲಾಗುತ್ತದೆ. ಆಚಾರ್ಯ ಚಾಣಕ್ಯ ತಮ್ಮ ನೀತಿಗಳಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಎಷ್ಟು ವಯಸ್ಸಿನ ವ್ಯತ್ಯಾಸ ಉತ್ತಮ ಎಂದು ಹೇಳಿದ್ದಾರೆ.

ಚಾಣಕ್ಯ , ಹೆಂಡತಿ ಗಂಡನಿಗಿಂತ 3 ರಿಂದ 5 ವರ್ಷ ಚಿಕ್ಕವಳಾಗಿರಬೇಕು. ಆದ್ದರಿಂದ ಗಂಡ ಮತ್ತು ಹೆಂಡತಿಯ ನಡುವೆ ಸಮತೋಲನ, ತಿಳುವಳಿಕೆ ಮತ್ತು ಗೌರವವನ್ನು ಕಾಪಾಡಿಕೊಳ್ಳಲಾಗುತ್ತದೆ. ಚಾಣಕ್ಯ ನೀತಿಯು ಪತಿಯು ಪತ್ನಿಗಿಂತ ಹಿರಿಯರಾಗಿರಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ, ಇದರಿಂದ ಅವನು ತನ್ನ ಕುಟುಂಬ ಜೀವನವನ್ನು ತನ್ನ ಅನುಭವ, ತಾಳ್ಮೆ ಮತ್ತು ಪ್ರಬುದ್ಧತೆಯಿಂದ ನಿರ್ವಹಿಸಬಹುದು. ಪತಿ ಮತ್ತು ಪತ್ನಿಯ ನಡುವಿನ ವಯಸ್ಸಿನ ವ್ಯತ್ಯಾಸವು ತುಂಬಾ ಹೆಚ್ಚಿದ್ದರೆ, ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಬಹುದು ಎನ್ನಲಾಗಿದೆ.

ಚಾಣಕ್ಯ ಹೇಳುವಂತೆ, ವಯಸ್ಸಾದ ಪುರುಷ ಕಿರಿಯ ಹುಡುಗಿಯನ್ನು ಮದುವೆಯಾಗುವುದು ಸೂಕ್ತವಲ್ಲ ಏಕೆಂದರೆ ಅಂತಹ ವಿವಾಹಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ, ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ವ್ಯತ್ಯಾಸವು 3 ರಿಂದ 5 ವರ್ಷಗಳಾಗಿರಬೇಕು ಎಂದು ಚಾಣಕ್ಯ ಹೇಳಿದ್ದಾನೆ. ಈ ವ್ಯತ್ಯಾಸವು 5 ವರ್ಷಗಳಿಗಿಂತ ಹೆಚ್ಚು ಅಥವಾ ಕಡಿಮೆ ಇರಬಾರದು.

ಮದುವೆ ಮಾಡಿಸುವಾಗ ಯಾವಾಗಲೂ ವಧುವಿಗಿಂತ ವರನ ವಯಸ್ಸು ಹೆಚ್ಚಾಗಿರಬೇಕು ಎಂದು ಹೇಳಲಾಗುತ್ತದೆ. ಇದು ಬರೀಯ ನಂಬಿಕೆ ಅಥವಾ ಶಾಸ್ತ್ರ ಅಲ್ಲ.ವಿಜ್ಞಾನವೂ ಇದನ್ನೇ ಹೇಳುವುದು. ವಧು ವರನಿಗಿಂತ 3 ರಿಂದ 5 ವರ್ಷಗಳವರೆಗೆ ಚಿಕ್ಕವಳಾಗಿರಬೇಕು. ಇಬ್ಬರ ನಡುವಿನ ವಯಸ್ಸಿನ ಅಂತರ ಇಷ್ಟಿದ್ದರೆ ಮಾತ್ರ ಆ ದಂಪತಿಯದ್ಡಿ ಸುಂದರ ಸುಖಮಯ ಸಂಸಾರ.

ವಿಜ್ಞಾನದ ಪ್ರಕಾರ, ಹುಡುಗಿಯರು ಹುಡುಗರಿಗಿಂತ ಬೇಗ ಪ್ರಬುದ್ಧರಾಗುತ್ತಾರೆ. ಹುಡುಗಿಯರಲ್ಲಿ ಹಾರ್ಮೋನುಗಳ ಬದಲಾವಣೆಗಳು 7 ರಿಂದ 13 ವರ್ಷ ವಯಸ್ಸಿನಲ್ಲಿ ಪ್ರಾರಂಭವಾಗುತ್ತವೆ. ಆದರೆ ಹುಡುಗರಲ್ಲಿ ಈ ಬದಲಾವಣೆಗಳು 9 ರಿಂದ 15 ವರ್ಷಗಳ ನಡುವೆ ಆಗುತ್ತದೆ. ವೈದ್ಯಕೀಯ ವಿಜ್ಞಾನದ ಪ್ರಕಾರ, ಮಾನಸಿಕ ಮತ್ತು ದೈಹಿಕ ಬದಲಾವಣೆಗಳು ಮಹಿಳೆಯರ ದೇಹದಲ್ಲಿ ಮೊದಲೇ ಕಂಡುಬರುತ್ತವೆ. ಆದರೆ ಪುರುಷರಲ್ಲಿ ಈ ಬದಲಾವಣೆಗಳು ನಂತರ ಬರುತ್ತವೆ. ಆದ್ದರಿಂದ, ಮದುವೆಗೆ ಇಬ್ಬರ ವಯಸ್ಸಿನಲ್ಲೂ ವ್ಯತ್ಯಾಸವಿರಬೇಕು.

 ಭಾರತದಲ್ಲಿ, ಮದುವೆಗೆ ಹುಡುಗಿಯರ ವಯಸ್ಸು 18 ವರ್ಷಗಳು ಮತ್ತು ಹುಡುಗರಿಗೆ 21 ವರ್ಷಗಳು. ಹುಡುಗ ಮತ್ತು ಹುಡುಗಿಯ ಮಧ್ಯೆ 3 ವರ್ಷದ ಅಂತರವಿದ್ದರೆ ಅದು ಮದುವೆಗೆ ಸರಿಯಾದ ಜೋಡಿ ಎಂದು ಪರಿಗಣಿಸಲಾಗುತ್ತದೆ. ಮದುವೆಯು ದೈಹಿಕ ಬೆಳವಣಿಗೆಯ ಮೇಲೆ ಮಾತ್ರವಲ್ಲದೆ ಭಾವನಾತ್ಮಕ ಮತ್ತು ಬೌದ್ಧಿಕ ಪ್ರಬುದ್ಧತೆಯ ಮೇಲೂ ಪರಿಣಾಮ ಬೀರುತ್ತದೆ.

ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net