

ಬೆಂಗಳೂರು: ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಗೆ ಇಂದು ಮತದಾನ ಶಾಂತಿಯುತವಾಗಿ ಯಶಸ್ವಿಯಾಗಿ ಜರುಗಿತು.
ಬೆಳಗಾವಿಯಲ್ಲಿ ಸಾಧಾರಣ ಮತದಾನ ನಡೆದಿದ್ದರೇ, ಮಸ್ಕಿ ಹಾಗೂ ಬಸವಕಲ್ಯಾಣದಲ್ಲಿ ಉತ್ತಮ ಮತದಾನ ನಡೆದಿದೆ. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮತದಾನ ಜರುಗಿತು.
ರಾಜ್ಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಶೇ 54.73 ರಷ್ಟು ಮತದಾನ ನಡೆದಿದೆ. ಬಸವಕಲ್ಯಾಣದಲ್ಲಿ ಶೇ 59.57 ರಷ್ಟು ಮತದಾನ ನಡೆದಿದೆ. ಇನ್ನು ಮಸ್ಕಿಯಲ್ಲಿ ಗರಿಷ್ಠ 70.48 ರಷ್ಟು ಮತದಾನ ಜರುಗಿದೆ. ಮೇ 2 ರಂದು ಈ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ.