

Marriage apps : ಮದುವೆ ( Marriage ) ಎಂಬುದು ಒಂದು ಸುಂದರ ಅನುಭವ. ಎರಡು ಜೀವಗಳನ್ನು ಬೆಸೆಯುವ ಸುಮಧುರ ಭಾವ. ಆದರೆ, ಮೂಲಭೂತವಾದಿಗಳ ಹಿಡಿತದಲ್ಲಿರುವ ಪಾಕಿಸ್ತಾನದಲ್ಲಿ ಮದುವೆ ವಿಚಾರದಲ್ಲಿ ಸ್ವಂತ ಆಯ್ಕೆಗೆ ಪ್ರಾಮುಖ್ಯತೆಯೇ ಇಲ್ಲ. ಇಲ್ಲಿ ಸಾಂಪ್ರದಾಯಿಕ ಮದುವೆಗಷ್ಟೇ ಪ್ರಾಮುಖ್ಯತೆ. ಹೀಗಾಗಿ ಇಂಥಾ ಮದುವೆಗಳನ್ನು ಮಾಡಿಸುವಲ್ಲಿ 'ರಿಶ್ತಾ ಆಂಟೀಸ್' (Rishta Aunties) ಬಹು ಮುಖ್ಯ ಪಾತ್ರ ವಹಿಸುತ್ತದೆ. ಸರಿಯಾದ ಮ್ಯಾಚ್ಮೇಕರ್ಗಳನ್ನು ಹುಡುಕಲು ಇದು ಸಹಕಾರಿಯಾಗಿದೆ. ಆದರೆ, ಡೇಟಿಂಗ್ ಆ್ಯಪ್ಗಳ ನಿರ್ಬಂಧ ಹಾಗೂ ಹೊಸ ಮ್ಯಾರೇಜ್ ಆ್ಯಪ್ಗಳು ಜನಪ್ರಿಯತೆ ಸಾಂಪ್ರದಾಯಿಕ ರಿಶ್ತಾ ಆಂಟೀಸ್ಗೆ ಇಂದು ದೊಡ್ಡ ಸವಾಲಾಗಿ ನಿಂತಿದೆ.
ಮುಖ್ಯವಾಗಿ ಮುಸ್ಲಿಮರಿಗಾಗಿ ಸೃಷ್ಟಿಸಲಾದ ಮದುವೆ ಆ್ಯಪ್ಗಳು ಹುಡುಗಿಯರು ತಮ್ಮ ಭಾವಿ ಪತಿಯರನ್ನು ಹುಡುಕಲು ಸುಲಭವಾದ ಮಾರ್ಗವಾಗಿದೆ. ಈ ಬಗ್ಗೆ ಲಾಹೋರ್ನ (Lahore) ಟೆಕ್ಸ್ಟೈಲ್ ಡಿಸೈನರ್ ಎಝಾ ನವಾಜ್ ಅವರು ಎಎಫ್ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, ನನ್ನ ಸಹೋದ್ಯೋಗಿಯೊಬ್ಬರು ಆನ್ಲೈನ್ನಲ್ಲಿ ಪರಿಚಯ ಮಾಡಿಕೊಂಡು, ಇಂದು ಮದುವೆ ಆಗಿ ಬಹಳ ಸಂತೋಷವಾಗಿದ್ದಾರೆ ಎಂದಿದ್ದಾರೆ. ಹೀಗಾಗಿ ಪಾಕ್ನಲ್ಲಿ ಮ್ಯಾರೇಜ್ ಆ್ಯಪ್ಗಳು ಹೆಚ್ಚು ಪ್ರಚಲಿತಕ್ಕೆ ಬರುತ್ತಿವೆ.
ಇನ್ನು ರಿಶ್ತಾ ಆಂಟೀಸ್ (Rishta Aunties) ಆ್ಯಪ್ ಸಾಂಪ್ರದಾಯಿಕ ಮದುವೆ ಮಾಡಿಸುವಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಸೂಕ್ತವಾದ ವಧು ಅಥವಾ ವರವನ್ನು ಹುಡುಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ Muzz ನಂತಹ ಮ್ಯಾರೇಜ್ ಆ್ಯಪ್ಗಳು ಹೆಚ್ಚು ಮುನ್ನಲೆಗೆ ಬಂದಿದೆ. ಈ ಡಿಜಿಟಲ್ ಪ್ಲಾಟ್ಫಾರ್ಮ್ ಹಲಾಲ್ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಸಾಂಪ್ರದಾಯಿಕ ವಿವಾಹ ವ್ಯವಸ್ಥೆಗೆ ಸವಾಲು ಹಾಕಿದೆ. ಆದರೂ ವೈವಾಹಿಕ ಪ್ರಕ್ರಿಯೆಯಲ್ಲಿ ಕುಟುಂಬದ ಒಳಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಈ Muzz ಉಳಿಸಿಕೊಂಡಿರುವುದು ಅದರ ಜನಪ್ರಿಯತೆಗೆ ಕಾರಣವಾಗಿದೆ.
Muzz ನೊಂದಿಗಿನ ತಮ್ಮ ಅನುಭವವು ಸಕಾರಾತ್ಮಕವಾಗಿತ್ತು ಮತ್ತು ಮೂರು ತಿಂಗಳೊಳಗೆ ವಸೀಮ್ ಅಖ್ತರ್ ಅವರನ್ನು ವಿವಾಹವಾಗಲು ಕಾರಣವಾಯಿತು ಎಂದು ಎಝಾ ನವಾಜ್ ಹೇಳಿಕೊಂಡಿದ್ದಾರೆ. ಹೆಚ್ಚುತ್ತಿರುವ Muzz ಖ್ಯಾತಿಯಿಂದ ರಿಶ್ತಾ ಆಂಟೀಸ್ ತೊಂದರೆಯಾಗಿದ್ದು, ಅದರ ಬಹುಪಾಲ ಕೆಲಸನ್ನು ಹೊಸ ಮ್ಯಾರೇಜ್ ಆ್ಯಪ್ಗಳು ಕಸಿದುಕೊಳ್ಳುತ್ತಿದೆ.
ಇನ್ನು ಪಾಕಿಸ್ತಾನದಲ್ಲಿ ಅರೇಂಜ್ ಮ್ಯಾರೇಜ್ಗೆ ಹೆಚ್ಚು ಪ್ರಾಬಲ್ಯವಿದ್ದು, ಶೇ. 80% ರಷ್ಟು ಕುಟುಂಬಗಳ ಇಂತಹ ಆನ್ಲೈನ್ ಅಪ್ಲಿಕೇಶನ್ಗಳ ಮೇಲೆ ಅವಲಂಬಿಸಿದ್ದಾರೆ. ರಿಶ್ತಾ ಆಂಟೀಸ್ ಸೂಕ್ತವಾದ ವಧು/ವರರನ್ನು ಹುಡುಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಗಾಗ್ಗೆ ದೈಹಿಕ ನೋಟ ಮತ್ತು ಇತರ ಸಾಂಪ್ರದಾಯಿಕ ಮಾನದಂಡಗಳನ್ನು ಇದು ಕೇಂದ್ರೀಕರಿಸುತ್ತದೆ. ಆದಾಗ್ಯೂ, Muzz ನಂತಹ ಮ್ಯಾರೇಜ್ ಅಪ್ಲಿಕೇಶನ್ಗಳು ಜನಪ್ರಿಯತೆಯನ್ನು ಗಳಿಸುತ್ತಿವೆ. ಈ ಆ್ಯಪ್ಗೆ ಪಾಕಿಸ್ತಾನದಲ್ಲಿ 1.2 ಮಿಲಿಯನ್ ಬಳಕೆದಾರರಿದ್ದಾರೆ. ಈಗಾಗಲೇ 15,000ಕ್ಕೂ ಹೆಚ್ಚು ಮದುವೆಗಳನ್ನು ಸುಗಮವಾಗಿ ಮಾಡಿಸಿದೆ. ಈ ಅಪ್ಲಿಕೇಶನ್ಗಳು ಇಸ್ಲಾಮಿಕ್ ತತ್ವಗಳಿಗೆ ಬದ್ಧವಾಗಿದ್ದು, ಮಸುಕಾದ ಪ್ರೊಫೈಲ್ ಚಿತ್ರಗಳು ಮತ್ತು ಮದುವೆಯ ಪ್ರಸ್ತಾಪಗಳ ಮೇಲೆ ಸ್ಪಷ್ಟವಾದ ಗಮನವನ್ನು ನೀಡುವಂತಹ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಈ ಆ್ಯಪ್ ಪ್ರಾಮುಖ್ಯತೆ ಪಡೆದುಕೊಂಡಿದೆ. ಇನ್ನು ಭಾರಿ ಜನಪ್ರಿಯತೆಯ ಹೊರತಾಗಿಯೂ, ಡೇಟಿಂಗ್ ಅಪ್ಲಿಕೇಶನ್ಗಳ ಬ್ಯಾನ್ನಿಂದ ಭವಿಷ್ಯದಲ್ಲಿ ತಮಗಾಗುವ ತೊಂದರೆಗಳ ಭಯವನ್ನು ಸಹ ಮ್ಯಾರೇಜ್ ಆ್ಯಪ್ಗಳು ಎದುರಿಸುತ್ತಿವೆ. ಈಗಾಗಲೇ ಪಾಕಿಸ್ತಾನವು ಅನೈತಿಕ ಮತ್ತು ಅಸಭ್ಯ ವಿಚಾರವನ್ನು ಉಲ್ಲೇಖಿಸಿ ಟಿಂಡರ್, ಗ್ರೈಂಡರ್, ಟ್ಯಾಗ್ಡ್, ಸ್ಕೌಟ್ ಮತ್ತು ಸೇಹಾಯ್ ಡೇಟಿಂಗ್ ಆ್ಯಪ್ಗಳನ್ನು 2022ರ ಅಕ್ಟೋಬರ್ನಲ್ಲಿ ನಿಷೇಧಿಸಿದೆ.
ಇನ್ನು ಪಾಕಿಸ್ತಾನದಲ್ಲಿ ಮದುವೆಯ ಪರಿಕಲ್ಪನೆಯು ಸಾಂಸ್ಕೃತಿಕ ರಚನೆಯಲ್ಲಿ ಆಳವಾಗಿ ಬೇರೂರಿದೆ, ಇದನ್ನು ಸಾಮಾನ್ಯವಾಗಿ ಎರಡು ಕುಟುಂಬಗಳ ಒಕ್ಕೂಟವಾಗಿ ನೋಡಲಾಗುತ್ತದೆ. ಒಬ್ಬರ ಸ್ವಂತ ಸಂಗಾತಿಯನ್ನು ಒಬ್ಬರೇ ಆಯ್ಕೆ ಮಾಡಿಕೊಳ್ಳುವುದು ಅಂದರೆ ಪ್ರೇಮ ವಿವಾಹಗಳು ಸಾಂಪ್ರದಾಯಿಕ ಕುಟುಂಬ ರಚನೆಗಳು ಮತ್ತು ಹಿರಿಯರ ಮೇಲಿನ ಗೌರವಕ್ಕೆ ಸವಾಲಾಗಬಹುದು ಎಂದು ನಂಬಿದ್ದಾರೆ. ರಿಶ್ತಾ ಆಂಟೀಸ್ ಮದುವೆ ಮಾರುಕಟ್ಟೆಯ ಮೂಲಾಧಾರವಾಗಿಯೇ ಇಂದಿಗೂ ಉಳಿದಿದ್ದಾರೆ. ಏಕೆಂದರೆ, ಇವರು ಯುವತಿಯರಿಗೆ ಹೇಗೆ ನಡೆಯಬೇಕು, ಮಾತನಾಡಬೇಕು ಮತ್ತು ಡ್ರೆಸ್ ಮಾಡುವುದನ್ನು ಕಲಿಸುವ ಸೇವೆಗಳನ್ನು ಒದಗಿಸುತ್ತಿದೆ. ಪಾಕಿಸ್ತಾನದಲ್ಲಿ ಅನೇಕ ಮಂದಿ ಸಾಂಪ್ರದಾಯಿಕ ಮ್ಯಾಚ್ಮೇಕರ್ಗಳನ್ನು ಇಂದಿಗೂ ಫಾಲೋ ಮಾಡುತ್ತಿದ್ದು, ಮದುವೆಯ ಅಪ್ಲಿಕೇಶನ್ಗಳನ್ನು ತಿರಸ್ಕರಿಸುತ್ತಿದ್ದಾರೆ. ಆದರೂ, ಮ್ಯಾರೇಜ್ ಆ್ಯಪ್ಗಳ ಜನಪ್ರಿಯತೆ ಸವಾಗಿರುವುದಂತೂ ಸತ್ಯ. (ಏಜೆನ್ಸೀಸ್)