10 ಲಕ್ಷ ರೂ. ಕೊಡ್ತೀವಿ... ಬಾಬಾ ಸಿದ್ದಿಕ್ ಹತ್ಯೆ ಬೆನ್ನಲ್ಲೇ ಗ್ಯಾಂಗ್​ಸ್ಟರ್​ ಅಣ್ಣನಿಗಾಗಿ ಶುರುವಾಯ್ತು ಬಿರುಸಿನ ಶೋಧ! Reward

Lawrence Bishnoi
Published on

ನವದೆಹಲಿ: ಇತ್ತೀಚೆಗಷ್ಟೇ ಮಹಾರಾಷ್ಟ್ರದ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್​ರನ್ನು ಗುಂಡಿಕ್ಕಿ ಹತ್ಯೆಗೈದ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಆರೋಪಿಗಳು, ಇದೀಗ ಪೊಲೀಸರ ಹದ್ದಿನ ಕಣ್ಣಿಗೆ ಬಿದ್ದಿದ್ದು, ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯಿ ಅವರ ಸಹೋದರ ಅನ್ಮೋಲ್ ಬಿಷ್ಣೋಯಿಗಾಗಿ ಹೊಸ ಬಲೆಯನ್ನು ಬೀಸಿರುವ ಎನ್​ಐಎ, ಈತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ (Reward) ಘೋಷಿಸಿದೆ.

ಅನ್ಮೋಲ್ ಬಿಷ್ಣೋಯಿ ಅಲಿಯಾಸ್​ 'ಭಾನು' ಎಂದು ಕರೆಯಲ್ಪಡುವ ಅನ್ಮೋಲ್​, ನಕಲಿ ಪಾಸ್‌ಪೋರ್ಟ್‌ ಮೂಲಕ ಭಾರತದಿಂದ ಪಲಾಯನ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಕಳೆದ ವರ್ಷ ಕೀನ್ಯಾದಲ್ಲಿ ಮತ್ತು ಈ ವರ್ಷ ಕೆನಡಾದಲ್ಲಿ ಕಾಣಿಸಿಕೊಂಡಿರುವುದು ತಿಳಿದುಬಂದಿದೆ. 2022ರಲ್ಲಿ ಪಂಜಾಬ್ ಗಾಯಕ ಸಿಧು ಮೊಸ್ಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಹಿನ್ನಲೆ ಇದೀಗ ಆತನನ್ನು ಹುಡುಕುತ್ತಿರುವ ಅಧಿಕಾರಿಗಳು, ತಲೆಮರಿಸಿಕೊಂಡಿರುವ ಆರೋಪಿ ಅನ್ಮೋಲ್ ಬಿಷ್ಣೋಯಿ ಸುಳಿವು ಕೊಟ್ಟವರಿಗೆ ದೊಡ್ಡ ಬಹುಮಾನ ಘೋಷಿಸಿದ್ದಾರೆ. ಪ್ರಸ್ತುತ ಭಾನು ವಿರುದ್ಧ 18 ಪ್ರಕರಣಗಳು ದಾಖಲಾಗಿವೆ.

ಈ ಹಿಂದೆ, ಏಪ್ರಿಲ್ 14ರಂದು ನಟ ಸಲ್ಮಾನ್​ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಅನ್ಮೋಲ್​ ವಿರುದ್ಧ ಲುಕ್‌ಔಟ್ ನೋಟಿಸ್​ ಜಾರಿಗೊಳಿಸಿದ್ದಾರೆ. ಈ ಘಟನೆ ಹಿಂದಿರುವ ಕೈ ನನ್ನದೇ ಎಂಬ ಹೊಣೆಗಾರಿಕೆಯನ್ನು ಆತ ಸಾಮಾಜಿಕ ಮಾಧ್ಯಮದಲ್ಲಿ ಹೊತ್ತಿಕೊಂಡ ಕಾರಣ ಇದೀಗ ಪೊಲೀಸರು ಅನ್ಮೋಲ್​ ಸೆರೆಹಿಡಿಯಲು ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net