ಥಟ್​ ಅಂತಾ ಹೇಳಿ... ಈ ಚಿತ್ರದಲ್ಲಿರೋ ವ್ಯಕ್ತಿಗಳೆಷ್ಟು?: ನಿಮ್ಮ ಉತ್ತರ ಸರಿಯೇ? ಕ್ಲಿಕ್​ ಮಾಡಿ ನೋಡಿ!

Opticle Illussion
Published on

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರನ್ನು 'ದಿಗ್ಭ್ರಮೆ' ಮತ್ತು 'ಗೊಂದಲ'ಕ್ಕೀಡುಮಾಡಿದೆ.

ಫೋಟೋದಲ್ಲಿ ಏನಿದೆ?: ನಿಂತಿರುವ ಸ್ಕೂಟರ್​ ಮೇಲೆ ಅರ್ಧ ಮಲಗಿದಂತಿರುವ ವ್ಯಕ್ತಿ ಒಂದು ಕಾಲನ್ನು ಸೀಟಿನ ಮೇಲೆ ಇಟ್ಟಿದ್ದಾರೆ. ಆತನ ಮಂಡಿಯು ಸ್ಕೂಟರ್​ ಹ್ಯಾಂಡಲ್​ಗೆ ತಾಗಿದ್ದು, ಅದರ ಮೇಲೆ ಹೆಲ್ಮೆಟ್​ ಇದೆ. ಇನ್ನೊಂದು ಕಾಲನ್ನು ನೆಲಕ್ಕೆ ಚಾಚಿದ್ದು, ಕೈಯಲ್ಲಿ ಮೊಬೈಲ್​ ನೋಡುತ್ತಿದ್ದಾನೆ.

ಚಿತ್ರವನ್ನು ಮೊದಲ ನೋಟದಲ್ಲಿ ನೋಡಿದಾಗ ಸ್ಕೂಟರ್​ನಲ್ಲಿ ಇಬ್ಬರು ವ್ಯಕ್ತಿಗಳು ಇರುವಂತೆ ಗೋಚರವಾಗುತ್ತದೆ. ಆದರೆ, ಸೂಕ್ಷ್ಮವಾಗಿ ನೋಡಿದರೆ ವಾಸ್ತವ ಏನೆಂಬುದು ತಿಳಿಯುತ್ತದೆ. ವಾಸ್ತವಾಗಿ ಅಲ್ಲಿರುವುದು ಒಬ್ಬನೇ, ಆದರೆ ನಮಗೆ ಇಬ್ಬರು ಇರುವಂತೆ ಕಾಣುತ್ತದೆ. ಹುಡುಗಿಯೊಬ್ಬಳು ಸ್ಕೂಟರ್​ ಮೇಲೆ ಮಲಗಿರುವಂತೆಯು, ಪುರುಷ ಸ್ಕೂಟರ್​ಗೆ ಒರಗಿ ನಿಂತಿರುವಂತೆಯೂ ಕಾಣುತ್ತದೆ. ಆದರೆ, ಸೂಕ್ಷ್ಮವಾಗಿ ನೋಡಿದಾಗ ಫೋಟೋದಲ್ಲಿರುವುದು ಒಬ್ಬನೇ ವ್ಯಕ್ತಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಇನ್ನು ಈ ಫೋಟೋವನ್ನು ರೆಡಿಟ್​ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಫೋಟೋ ನೋಡಿ ನಿಜಕ್ಕೂ ನಾವು ಶಾಕ್​ ಆದೆವು. ಹುಡುಗಿ ಅಂದುಕೊಂಡೆವು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ವಾವ್​ ಮೃದುವಾದ ಕಾಲುಗಳು ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟಿಸಿದ್ದಾರೆ. ಫೋಟೋ ನೋಡಿದ ನಿಮಗೂ ಏನಾದರೂ ಅನಿಸಿದ್ದರೆ, ಕಾಮೆಂಟ್​ ಮಾಡಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net