

Refunded: ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ವ್ಯವಸ್ಥೆಯಾಗಿದ್ದು, ದೇಶದ್ಯಾಂತ ಪ್ರತಿದಿನ ರೈಲಿನಲ್ಲಿ ಬರೊಬ್ಬರಿ 2.5 ಕೋಟಿಗೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದು ಸುಮಾರು ಆಸ್ಟ್ರೇಲಿಯಾ ದೇಶದ ಜನಸಂಖ್ಯೆಗೆ ಸಮಾನವಾಗಿದೆ ಎಂದು ಹೇಳಬಹುದು.
ಹೌದು, ಭಾರತದಲ್ಲಿ ದೂರ ಮತ್ತು ಅಗ್ಗದ ಪ್ರಯಾಣವೆಂದರೆ ಅದು ರೈಲು ಪ್ರಯಾಣ.ಹೀಗಾಗಿ, ನಮ್ಮ ದೇಶದಲ್ಲಿ ಬಡವ, ಮಧ್ಯಮ ಮತ್ತು ಶ್ರೀಮಂತರಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ರೈಲು ಪ್ರಯಾಣ ಅಚ್ಚುಮೆಚ್ಚು. ಅಲ್ಲದೆ, ಅತಿ ಸುಲಭ ಮತ್ತು ಸುಖಕರ ಪ್ರಯಾಣ ಎಂದೇ ಹೇಳಬಹುದು.
ಭಾರತದ ರೈಲುಗಳಲ್ಲಿ ಪ್ರಯಾಣಿಸಬೇಕಾದರೆ ಎರಡು ವರ್ಗಗಳಿವೆ. ಅದು ಒಂದು ಕಾಯ್ದಿರಿಸಿದ(ರಿಸರ್ವೆಷನ್), ಮತ್ತೊಂದು ಕಾಯ್ದಿರಿಸದ(ಪ್ರಯಾಣ ಮಾಡಬೇಕಾದಾಗ ಟಿಕೆಟ್ ಕೊಳ್ಳುವುದು).ಆದರೆ, ನಮ್ಮಲ್ಲಿ ಅಧಿಕ ಜನರು ಕಾಯ್ದಿರಿಸಿದ ಸೀಟ್ಗಳಲ್ಲಿ ಪ್ರಯಾಣ ಮಾಡಲು ಬಯಸುತ್ತಾರೆ. ನಾವು ಟಿಕೆಟ್ ಕೊಂಡು ರೈಲಿಗೆ ಕಾಯುತ್ತಿದ್ದಾಗ ಅನೇಕ ಬಾರಿ ಟ್ರೈನ್ ವಿಳಂಬ ಮಾಡುತ್ತದೆ. ಇದರಿಂದ ನಮ್ಮ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಹೀಗಾಗಿ, ನಾವು ಅನಿವಾರ್ಯವಾಗಿ ಅಥವಾ ಕೋಪದಿಂದಲೋ ಟಿಕೆಟ್ ರದ್ದು ಮಾಡುತ್ತೇವೆ.ಆದರೆ, ರದ್ದು ಮಾಡಿದ ಬಳಿಕ ಯಾವಾಗ ನಮಗೆ ವಾಪಸ್ ಹಣ ಪಾವತಿಯಾಗಿತ್ತದೆ ಎನ್ನುವುದದನ್ನು ತಿಳಿಯೋಣ..
ರೈಲು ತಡವಾದರೆ ಎಷ್ಟು ಗಂಟೆಗಳ ಬಳಿಕ ನಮ್ಮ ಹಣ ಮರುಪಾವತಿ ಮಾಡಲಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ? ಇದಕ್ಕೆಂದೆ ಭಾರತೀಯ ರೈಲು ಇಲಾಖೆ ಅನೇಕ ನಿಮಯಗಳನ್ನು ಮಾಡಿದೆ. ಇನ್ನು ರೈಲ್ವೆ ನಿಯಮ ಪ್ರಕಾರ, ರೈಲು ಬರಲು ಮೂರು ಗಂಟೆಗಳ ಅಥವಾ ಅದಕ್ಕಿಂತ ಅಧಿಕ ಸಮಯ ವಿಳಂಬವಾದರೆ ಮರು ಪಾವತಿ ನೀಡಲಾಗುತ್ತದೆ ಎಂದು ಹೇಳಿದೆ.
ಆದರೆ, ಅದಕ್ಕೂ ಮುನ್ನ ರೈಲ್ವೆ ಇಲಾಖೆಯ ಕೆಲ ನಿಯಮ ಮತ್ತು ಷರತ್ತುಗಳು ಅನ್ವಹಿಸುತ್ತದೆ ಎಂದು ನಿಮಗೆ ಹೇಳುತ್ತಿದ್ದೇವೆ. ನೀವು ತತ್ಕಾಲ್ನಲ್ಲಿ ಟಿಕೆಟ್ ಬುಕ್ ಮಾಡಿದ್ದರೆ ಮತ್ತು ನಿಮ್ಮ ಟಿಕೆಟ್ ದೃಢೀಕರಿಸಲ್ಪಟ್ಟಿದ್ದರೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ, ಅಂತಹ ಪರಿಸ್ಥಿತಿಯಲ್ಲಿ ಟಿಕೆಟ್ ರದ್ದುಗೊಳಿಸಿದಾಗ ನಿಮಗೆ ಯಾವುದೇ ಮರುಪಾವತಿ ಸಿಗುವುದಿಲ್ಲ. ರೈಲು ವಿಳಂಬದಿಂದಾಗಿ ಟಿಕೆಟ್ ರದ್ದುಗೊಳಿಸಿದ ನಂತರ, ಮರುಪಾವತಿಗಾಗಿ ನೀವು ಟಿಡಿ ಅಂದರೆ ಟಿಕೆಟ್ ಠೇವಣಿ ರಶೀದಿಯನ್ನು ಸಲ್ಲಿಸಬೇಕು. ನೀವು ಇದನ್ನು IRCTC ಯ ಅಧಿಕೃತ ವೆಬ್ಸೈಟ್ ಅಥವಾ IRCTC ಯ ರೈಲ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದು.
ಮರುಪಾವತಿ ಸಾಮಾನ್ಯವಾಗಿ 5 ರಿಂದ 7 ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಆದಾಗ್ಯೂ, ಇದಕ್ಕಾಗಿ ಕನಿಷ್ಠ 90 ದಿನಗಳ ಸಮಯವನ್ನು ನಿಗದಿಪಡಿಸಲಾಗಿದೆ. ಈ ಸಮಯದೊಳಗೆ ಹಣ ಬರದಿದ್ದರೆ. ನಂತರ ನೀವು ಅದರ ಬಗ್ಗೆ ದೂರು ನೀಡಬಹುದು.(ಏಜೆನ್ಸೀಸ್)