ಮದುವೆಯಾಗದೇ ಹೋದ್ರೆ ಇಲ್ಲಿನ ಯುವಕರಿಗೆ ವಿಚಿತ್ರ ಶಿಕ್ಷೆ!; ಈ ವಿಲಕ್ಷಣ ನಿಯಮಗಳು ಎಲ್ಲಿ, ಏಕೆ ಗೊತ್ತೆ? | Unmarried

dk-2025-03-06t164652504-67c984349c20c
Published on

Unmarried: ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಒಂದು ವಯಸ್ಸಿಗೆ ಬಂದ ಯುವಕ/ಯುವರತಿಗೆ ಮನೆಯವರು ಮದುವೆ ಮಾಡುಲು ಹಾತೋರಿಯುತ್ತಾರೆ. ಆದರೆ, ಡೆನ್ಮಾರ್ಕ್​ ದೇಶದಲ್ಲಿ 25 ವರ್ಷದೊಳಿಗೆ ಯುವಕ/ಯುವತಿ ಮದುವೆಯಾಗದಿದ್ದರೇ ಶಿಕ್ಷೆ ವಿಚಿತ್ರ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಹೌದು, ಡೆನ್ಮಾರ್ಕ್ ದೇಶದಲ್ಲಿ ಬೇರೆಯದೇ ಆದ ಪದ್ಧತಿ ಕಂಡುಬರುತ್ತದೆ. ಅಲ್ಲಿ, ಒಬ್ಬ ಹುಡುಗ ಅಥವಾ ಹುಡುಗಿ 25 ವರ್ಷ ವಯಸ್ಸಿನವರೆಗೆ ಮದುವೆಯಾಗದಿದ್ದರೆ, ಅವನ/ಅವಳ ಇಡೀ ದೇಹವನ್ನು ದಾಲ್ಚಿನ್ನಿಯಿಂದ ತೊಳೆಯಲಾಗುತ್ತದೆ. ವಯಸ್ಸು 30 ವರ್ಷವಾಗಿದ್ದರೆ, ಕರಿಮೆಣಸಿನೊಂದಿಗೆ ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತದೆ. ಇದು ಎಲ್ಲಿ ಏಕೆ ಸಂಭವಿಸುತ್ತದೆ ಎಂಬುವುದನ್ನು ನೋಡೋಣ..

ಯಾವಾಗ ಮಾಡಲಾಗುತ್ತದೆ..?

ಈ ದೇಶದಲ್ಲಿ 25 ವರ್ಷ ತುಂಬಿದ ಯುವಕ/ಯುವತಿಗೆ ಮದುವೆಯಾಗಿಲ್ಲ ಎಂದರೆ, ಅಥವಾ ವಿವಾಹವಾಗಲು ಒಪ್ಪಿಲ್ಲ ಎಂದರೆ ಅವರಿಗೆ ಈ ಪದ್ಧತಿ ಆಚರಣೆ ಮಾಡಲಾಗುತ್ತದೆ. ಇದು ಈ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಿರಳವಾಗಿ ನಡೆಯುತ್ತಿದ್ದರು. ಈ ಹಿಂದೆ ಇದು ದೊಡ್ಡ ಸಂಪ್ರದಾಯವಾಗಿತ್ತು. ಇದನ್ನು ಬಲವಂತದಿಂದ ಮಾಡುವುದಿಲ್ಲ. ಅಲ್ಲದೆ, ತಮಾಷೆಗೆ ಮಾಡಲಾಗುತ್ತದೆ. ಇದು ಇಲ್ಲಿನ ಸಾಮಾನ್ಯ ಪದ್ಧತಿ ಎಂದು ನಂಬುತ್ತಾರೆ.

ಆಚರಣೆ ಸಮಯದಲ್ಲಿ ಏನು ಮಾಡ್ತಾರೆ..?

ಅವನ/ಅವಳ ಇಡೀ ದೇಹವನ್ನು ಅಂದೆರೆ, ಕಾಲಿನ ಹೆಬ್ಬರಳಿನಿಂದ ತಲೆಯವರೆಗೂ ದಾಲ್ಚಿನ್ನಿಯಿಂದ ಚೆನ್ನಾಗಿ ಸ್ನಾನ ಮಾಡಿಸುತ್ತಾರೆ. ಈ ಸ್ನಾನ ಪ್ರಕ್ರಿಯೆಯನ್ನು ಮನೆಯಲ್ಲಿ ಮಾಡಿಸಲ್ಲ ಓಣಿ ಅಥವಾ ಬೀದಿಗಳಲ್ಲಿ ಮಾಡಿಸುತ್ತಾರೆ. ಒಂದು ವೇಳೆ ಯುವಕನಿಗೆ 30 ವರ್ಷ ತುಂಬಿದಾಗ ಕರಿಮೆಣಸಿನೊಂದಿಗೆ ಸ್ನಾನವನ್ನು ಮಾಡಿಸುತ್ತಾರೆ.

ಈ ಸಂಪ್ರದಾಯ ಏಕೆ?, ಆರಂಭ ಹೇಗೆ..?

ವರದಿಗಳ ಪ್ರಕಾರ, ಈ ಸಂಪ್ರದಾಯ ತುಂಬಾ ಹಳೆಯದು. ಕೆಲ ಶತಮಾನಗಳ ಹಿಂದೆ ಇಲ್ಲಿನ ಜನರು ಮಸಾಲೆ ಮಾರಾಟ ಮಾಡಲು ವರ್ಷಾನುಗಟ್ಟಲೇ ಬೇರೆಡೆಗೆ ತೆರಳುತ್ತಿದ್ದರು. ಇದರಿಂದ ಅವರಿಗೆ ಮದುವೆ ಲೇಟ್ ಆಗಿ ಆಗುತ್ತಿತ್ತು. ಆದ್ದರಿಂದ ಇಡೀ ದೇಹವನ್ನು ದಾಲ್ಚಿನ್ನಿಯಿಂದ ಮತ್ತು ಕರಿಮೆಣಸಿನೊಂದಿಗೆ ಸ್ನಾನ ಮಾಡಿಸಿದರೆ ಕೂಡಲೇ ಸಂಗಾತಿ ದೊರೆಯುತ್ತಾಳೆ ಎಂಬ ನಂಬಿಕೆ ಅಲ್ಲಿ ಈಗಲೂ ಇದೆ(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net