ತಿಂದ ಆಹಾರ ಜೀರ್ಣವಾಗಲು ಎಷ್ಟು ಸಮಯ ಬೇಕು? ಎಂದಾದರೂ ಯೋಚಿಸಿದ್ದೀರಾ?; ತಿಳಿಯಿರಿ | Digest Food

dk - 2025-03-06T142752.336
Published on

Digest Food: ನಾವು ದಿನನಿತ್ಯ ಸೇವಿಸುವ ಆಹಾರ ನಮ್ಮ ಹೊಟ್ಟೆಯಲ್ಲಿ ಎಷ್ಟು ಸಮಯಬೇಕು.. ಹೊಟ್ಟೆಯೊಳಗೆ ಎಷ್ಟೊತ್ತಿರುತ್ತೆ.. ಎಂದು ಹೀಗೆ ಎಂದಾದರೂ ಯೋಚಿಸಿದ್ದೀರಾ?

ಹೌದು, ಮಾನವ ದೇಹದ ಜೀರ್ಣಾಂಗವೂ ಗಮನಾರ್ಹ ಸಂಕೀರ್ಣವಾಗಿದೆ. ನಾವು ಸೇವಿಸುವ ಆಹಾರವನ್ನು ದೇಹವು ಹೀರಿಕೊಳ್ಳುತ್ತದೆ. ಅಲ್ಲದೆ, ಬಳಸಿಕೊಳ್ಳಬಹುದಾದ ಪೋಷಕಾಂಶಗಳನ್ನು ಬಳಸಿಕೊಂಡು ಬೇಡವಾದದನ್ನು ವಿಭಿಸುವ ಕಾರ್ಯ ಮಾಡುತ್ತದೆ. ಹೀಗಾಗಿ, ತಿಂದ ಆಹಾರ ಎಷ್ಟು ಸಮಯದವರೆಗೆ ಹೊಟ್ಟೆಯಲ್ಲಿರುತ್ತೆ, ಬಳಿಕ ಮಲವಾಗಿ ಹೇಗೆ ಹೊರಗೆ ಬರುತ್ತೆ ಎನ್ನುವುದನ್ನು ತಿಳಿಯೋಣ.

ಜೀರ್ಣಕ್ರಿಯೆಯ 5 ಹಂತಗಳು ನೋಡೋಣ....

1.ಸೇವನೆ

ಮೊದಲನೆದಾಗಿ ಬಾಯಿಯಲ್ಲಿ ಆಹಾರವನ್ನು ಸೇವನೆ ಮಾಡುವುದರ ಮೂಲಕ ಆರಂಭವಾಗುವ ಜೀರ್ಣಕ್ರಿಯೆ ಹಂತ, ಆಹಾರ ಆಗೆಯುವಿಕೆ ಮತ್ತು ಲಾಲಾರಸ ಗ್ರಂಥಿಯಿಂದ ಉತ್ಪತ್ತಿಯಾಗುವ ಲಾಲಾರಸದ ಮೂಲಕ ಕಾರ್ಬೋಹೈಡ್ರೇಟ್​ ವಿಭಜನೆಯನ್ನು ಮಾಡುತ್ತದೆ.

2.ಅನ್ನನಾಳದ ಮೂಲಕ ಪ್ರಯಾಣ

ಆಹಾರ ಸೇವನೆ ಬಳಿಕ ಆಹಾರವು ಅನ್ನನಾಳದ ಮೂಲಕ ಹಾದುಹೋಗುತ್ತದೆ. ಇದು ಬಾಯಿಯಿಂದ ಹೊಟ್ಟೆಗೆ ಸಂಪರ್ಕಿಸುವ ಸ್ನಾಯುವಾಗಿದೆ. ಇಲ್ಲಿಂದ ಆಹಾರ ಹೊಟ್ಟೆಯೊಳಗೆ ಹೋಗಲು ಕೆಲ ಸೆಕೆಂಡ್​ಗಳು ತಗೆದುಕೊಳ್ಳುತ್ತೆ.

3.ಹೊಟ್ಟೆ

ಅನ್ನನಾಳದ ಮೂಲಕ ಹೊಟ್ಟೆಯೊಳಗೆ ಪ್ರವೇಶಿಸುವ ಆಹಾರ ಅಲ್ಲಿ ಗ್ಯಾಸ್ಟ್ರಿಕ್​ ರಸ ಮತ್ತು ಜೀರ್ಣಕಾರಿ ಕಿಣ್ವಗಳೊಂದಿಗೆ ಬೆರೆಯುತ್ತದೆ. ಈ ಪ್ರದೇಶದ ಅಂಗವು ಆಹಾರವನ್ನು ಜೀರ್ಣ ಮಾಡುವ ಮತ್ತು ವಿಭಜಿಸುವ ಪ್ರಮುಖ ಭಾಗವಾಗಿದೆ. ಸಾಮಾನ್ಯವಾಗಿ ಇಲ್ಲಿ 2 ರಿಂದ 4 ತಾಸುಗಳು ಕಾಲ ಆಹಾರದ ಜೀರ್ಣಕ್ರಿಯೆ ನಡೆಯುತ್ತದೆ.

4.ಸಣ್ಣ ಕರಳು

ಹೊಟ್ಟೆಯ ಜೀರ್ಣಕ್ರಿಯೆಯ ನಂತರ ಸಣ್ಣಕರುಳಿಗೆ ಆಹಾರ ಬರುತ್ತದೆ. ಇಲಿಯಮ್ ಅನ್ನು ಒಳಗೊಂಡಿರುವ ಈ ವಿಭಾಗವು ಸುಮಾರು 4 ರಿಂದ 6 ಗಂಟೆಗಳವರೆಗೆ ಇರುತ್ತದೆ. ಇಲ್ಲಿ, ಜೀರ್ಣಕಾರಿ ಕಿಣ್ವಗಳು ಮತ್ತು ಪಿತ್ತರಸವು ಚೈಮ್ ಅನ್ನು ಘಟಕ ಪೋಷಕಾಂಶಗಳಾಗಿ - ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬುಗಳಾಗಿ ವಿಭಜಿಸುತ್ತದೆ. ಇದು ರಕ್ತಪ್ರವಾಹಕ್ಕೆ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.

5. ದೊಡ್ಡ ಕರಳು

ಇನ್ನು ದೊಡ್ಡ ಕರಳು ಆಹಾರ ಜೀರ್ಣ ಮಾಡುವ ಕೊನೆ ಭಾಗವಾಗಿದೆ. ಇಲ್ಲಿ ನೀರು, ನಾರು ಮತ್ತು ಜೀರ್ಣವಾಗದ ಆಹಾರ ಕೂಡಿದ್ದು, 12 ರಿಂದ 48 ಗಂಟೆಗಳಲ್ಲಿ ಎಲ್ಲವನ್ನು ಬೇಕಾದ ಎಲ್ಲಾ ಅಂಶಳನ್ನು ಹೀರಿಕೊಂಡು ಕೊನೆಯದಾಗಿ ಮಲವಾಗಿ ರೂಪಿಸುತ್ತದೆ. ಮನುಷ್ಯನು ತಿಂದ ಆಹಾರ ಜೀರ್ಣವಾಗಿ ಹೊರಬರಲು ಇಷ್ಟೇ ಸಮಯ ಅಂತ ಇಲ್ಲ. ನಾವು ತಿಂದ ಆಹಾರ ಮೇಲೆ ಅದು ಪರಿಣಾಮ ಬಿರುತ್ತದೆ ಎನ್ನುತ್ತಾರೆ ತಜ್ಞರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net