

Delhi: ಚುನಾವಣೆಯಲ್ಲಿ ಬಳಸುವ ವಿದ್ಯುನ್ಮಾನ ಮತಯಂತ್ರಗಳು (EVM) ಭಾರತದ ಆಧುನಿಕ ಚುನಾವಣಾ ಪ್ರಕ್ರಿಯೆಗೆ ಆಧಾರಸ್ಥಂಬವಾಗಿದ್ದು, ಮತದಾನ ಮತ್ತು ಎಣಿಕೆಗೆ ವೇಗ ಮತ್ತು ನಿಖರತೆಯನ್ನು ತರುತ್ತವೆ ಎಂಬ ಅಭಿಪ್ರಾಯವಿದ್ದರೆ, ಇತ್ತ ವಿಪಕ್ಷಗಳು ಮತ ತಿರುಚಲು ಇದನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸುತ್ತಲೇ ಇರುತ್ತವೆ. ಇದರ ಮಧ್ಯೆ ಇವುಗಳ ಕಾರ್ಯ ಹೇಗಿರಲಿದೆ ಎನ್ನುವುದನ್ನೊಮ್ಮೆ ತಿಳಿದುಕೊಂಡು ಬರೋಣ.
ಯಾವುದೇ ಚುನಾವಣೆಯಲ್ಲಿ ಇರಲಿ, ಇವಿಎಂಗಳನ್ನು ಸಂಗ್ರಹಿಸುವ ಮತ್ತು ಸಾಗಿಸುವ ಪ್ರಕ್ರಿಯೆಯು ಭಾರತೀಯ ಚುನಾವಣಾ ಆಯೋಗ (ECI) ನಿಗದಿಪಡಿಸಿದ ನಿಯಮಗಳ ಅಡಿಯಲ್ಲಿ ನಡೆಯುತ್ತದೆ. ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಪ್ರತಿಯೊಂದು ಯಂತ್ರದ ಸುರಕ್ಷತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಗಮನ ನೀಡಿ ನಂತರ ಸ್ಥಳಾಂತರಿಸಲಾಗುತ್ತದೆ.
ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಎಲ್ಲ ಹಂತಗಳನ್ನು ವೀಕ್ಷಿಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಖಚಿತಪಡಿಸುತ್ತಾರೆ.
ಮತ ಎಣಿಕೆಯ ದಿನದವರೆಗೂ ಇವಿಎಂಗಳು ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿರುತ್ತವೆ.
ಮತ ಎಣಿಕೆಗಾಗಿ ಸ್ಟ್ರಾಂಗ್ ರೂಮ್ ತೆರೆದಾಗ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಸರ್ಕಾರಿ ವೀಕ್ಷಕರು ಹಾಜರಿರುತ್ತಾರೆ, ಇದು ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.
ಎಣಿಕೆಯ ಬಳಿಕ ಇವಿಎಂಗಳನ್ನು ಮತ್ತೆ ಸುರಕ್ಷಿತವಾಗಿ ಸಂಗ್ರಹಿಸಿ, ಇಸಿಐ ಮಾರ್ಗಸೂಚಿಗಳ ಪ್ರಕಾರ ದಾಖಲೆಗಳನ್ನು ಇಡಲಾಗುತ್ತದೆ.(ಏಜೆನ್ಸೀಸ್)