

ಮಧ್ಯಪ್ರದೇಶ: ತನ್ನ ಪತ್ನಿಯ ನಡತೆ ಸರಿ ಇಲ್ಲ ಎಂದು ಭಾವಿಸಿ, ಪತಿಯೇ ಆಕೆಯ ಮೇಲೆ ಹಲ್ಲೆ ನಡೆಸಿ, ಮೂಗು ಕತ್ತರಿಸಿರುವ (Wife nose) ಆಘಾತಕಾರಿ ಘಟನೆ ಮಧ್ಯಪ್ರದೇಶದ ಝಬುವಾನಲ್ಲಿ ಮಂಗಳವಾರ (ನ.04) ನಡೆದಿದೆ.
ಉತ್ತರ ಪ್ರದೇಶದ ಪಡಲ್ವಾ ಗ್ರಾಮದ ನಿವಾಸಿ ರಾಕೇಶ್ (23) ಆರೋಪಿ ಎಂದು ಗುರುತಿಸಲಾಗಿದೆ. ದಂಪತಿ ಗುಜುರಾತ್ನ ಸಂತರಂಪುರದಲ್ಲಿರುವ ಕಾರ್ಖಾನೆವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಪತ್ನಿಯು ಅಲ್ಲಿಯೇ ಕೆಲಸ ಮಾಡುತ್ತಿದ್ದ ಮತ್ತೊಂದು ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಳು. ಈ ಘಟನೆಯು ಅವರಿಬ್ಬರ ದಾಂಪತ್ಯದಲ್ಲಿ ಜಗಳಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ, ಗಂಡ ಮತ್ತು ಹೆಂಡತಿ ಶಾಂತರಾಮಪುರದಿಂದ ತಮ್ಮ ಗ್ರಾಮಕ್ಕೆ ಬೈಕ್ನಲ್ಲಿ ಹಿಂತಿರುಗುವ ವೇಳೆ ಈ ವಿಚಾರದ ಕುರಿತು ಪತಿ ದಾರಿಯುದ್ದಕ್ಕೂ ಜಗಳವನ್ನು ಆರಂಭಿಸಿದ್ದಾನೆ. ನಂತರ ಕೋಪಗೊಂಡು ತನ್ನ ಪರ್ಸ್ನಿಂದ ಬ್ಲೇಡ್ ತೆಗೆದುಕೊಂಡು ಆಕೆಯ ಮೂಗು ಹಾಗೂ ಬೆರೆಳುಗಳನ್ನು ಕತ್ತರಿಸಿದ್ದಾನೆ.
ಬಹಳ ರಕ್ತಸ್ರಾವದಿಂದ ನರಳುತ್ತಿದ್ದ ಪತ್ನಿಯನ್ನು ನೋಡಿದ ನಂತರ ಆಕೆಯನ್ನು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಕೆಯ ಸ್ಥಿತಿಯನ್ನು ನೋಡಿದ ವೈದ್ಯರು ಜಿಲ್ಲಾ ಆಸ್ಪತ್ರಗೆ ಕರೆದುಕೊಂಡು ಹೋಗಲು ಸೂಚನೆ ನೀಡಿದ್ದಾರೆ. ಈ ವೇಳೆಗಾಗಲೇ ಆಕೆಯ ಮೂಗನ್ನು ಪ್ರಾಣಿಗಳು ತಿಂದಿದ್ದವು ಎಂದು ವರದಿಯಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ರಾಣಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)