ಸುಖಾಸುಮ್ಮನೆ ಆರೋಪ ಮಾಡಿದರೆ ಹೇಗೆ? ಡಾ.ಪರಮೇಶ್ವರ ಪ್ರಶ್ನೆ|Allegation need not be proved?

ggp1
Published on

ಬೆಂಗಳೂರು: ಅಬಕಾರಿ ಇಲಾಖೆ ಭ್ರಷ್ಟಾಚಾರ(Excise Department Corruption)ಸಾಬೀತಾಗದೇ ಪ್ರಧಾನಿ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಸುಖಾ ಸುಮ್ಮನೆ ಆರೋಪ ಮಾಡಿದರೆ ಹೇಗೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(Dr G Parameswara) ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರ ಬಗ್ಗೆ ನಾವು ಎಚ್ಚರದಿಂದಿರಬೇಕು. ಅವರು ಕೂಡ ಹಾಗೇ ಎಚ್ಚರದಿಂದ ಮಾತನಾಡಬೇಕು. ಅಬಕಾರಿ ಇಲಾಖೆ ಭ್ರಷ್ಟಾಚಾರ ಅನ್ನೋದು ಸ್ಪಷ್ಟವಾಗಬೇಕು. ಭ್ರಷ್ಟಾಚಾರ ಆಗಿದೆ ಎಂದು ಅಪಾದನೆ ಮಾಡಿದ್ದಾರೆ. ತನಿಖೆ ನಡೆದು ಆರೋಪ ಸಾಬೀತಾಗಬೇಕಲ್ಲವೆ ಎಂದು ಕೇಳಿದರು.

ಬಂಡವಾಳಗಾರರು ನಮ್ಮ ರಾಜ್ಯಕ್ಕೆ ಬರಲು ಮುಂದಾದರೆ ಕೇಂದ್ರ ಸರ್ಕಾರದಿಂದ ಯಾವ ಸವಲತ್ತು, ನಮ್ಮ ಕಡೆಯಿಂದ ಏನು ಬೆಂಬಲ ಸಿಗುವುದಿಲ್ಲ ಎನ್ನುತ್ತಾರೆ. ಈ ರೀತಿ ಆದರೆ ಒಕ್ಕೂಟ ವ್ಯವಸ್ಥೆ ಏನಾಗಬೇಕು. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೇಸರ ಹೊರ ಹಾಕಿದರು.

ಹರಿಯಾದಲ್ಲಿ ಮುೂಡಾ ಬಗ್ಗೆ ಪ್ರಸ್ತಾಪ ಮಾಡಿದ್ದರು. ಯಾವುದೇ ಸ್ಪಷ್ಟತೆ ಇಲ್ಲದೇ ಬರೀ ಚುನಾವಣಾ ಪ್ರಚಾರಕ್ಕೆ ಮಾತನಾಡುವುದು ಎಷ್ಟು ಸರಿ ಎಂದರು.

ನ್ಯಾ.ಕುನ್ಹಾ ವರದಿಯಲ್ಲಿ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿರುವ ಕುರಿತ ಪ್ರಶ್ನೆಗೆ, ನ್ಯಾ.ಕುನ್ಹಾ ಅವರು ಕೋವಿಡ್ ಹಗರಣದ ಬಗ್ಗೆ ಮಧ್ಯಂತರ ವರದಿ ನೀಡಿದ್ದಾರೆ. ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತಿಳಿಸಲಾಗಿದೆ. ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಕ್ರಮ ಆಗಿದೆ ಎನ್ನುವುದು ಗೊತ್ತಾಗಿದೆ. 14 ಕೋಟಿ ರೂ. ಅಕ್ರಮ ಅಗಿದೆ ಎಂಬುದು ತಿಳಿದಿದೆ. ಈ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಚುನಾವಣೆ ಬಂದಾಗ ಇಶ್ಯುಸ್ ಮೇಲೆ ರಾಜಕೀಯ ಆಗುತ್ತದೆ. ಆದರೆ ಈಗ ವ್ಯಯಕ್ತಿಕವಾಗಿ ನಿಂದನೆ ಮಾಡೋದು ಜಾಸ್ತಿ ಆಗಿದೆ. ಜನರೂ ಸಹ ಅದನ್ನೇ ಮಾತನಾಡುತ್ತಾರೆ. ಹಿಂದೆ ನಾವು ಕೋವಿಡ್ ಹಗರಣ ತನಿಖೆ ಮಾಡುತ್ತೇವೆ ಎಂದು ಹೇಳಿದ್ದೆವು. ಅದಕ್ಕೆ ತನಿಖೆ ಮಾಡಿಸುತ್ತಿದ್ದೇವೆ. ಅದನ್ನು ದ್ವೇಷ ರಾಜಕಾರಣ ಎಂದರೆ ಹೇಗೆ ಎಂದು ಡಾ.ಪರಮೇಶ್ವರ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net