ಬಾಬಿ - ನೀಲಂ ಸಂಬಂಧ ಮುರಿದುಬಿದ್ದಿದ್ದೇಕೆ? ನಟಿ ಹೆದರಿದ್ದು ಧರ್ಮೇಂದ್ರಗೇನಾ?

bolywood
Published on

ಮುಂಬೈ: ಬಾಬಿ ಡಿಯೋಲ್ ಮತ್ತು ನೀಲಂ ಕೊಠಾರಿ ಬಗ್ಗೆ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಮಾತನಾಡುತ್ತಿದ್ದ ಕಾಲವೊಂದಿತ್ತು. ಇವರಿಬ್ಬರೂ ಬರೋಬ್ಬರಿ 5ವರ್ಷ ರಿಲೇಶನ್​ಶಿಪ್​ನಲ್ಲಿದ್ದು, ಇನ್ನೇನು ಮದುವೆಯಾದರು ಎಂಬ ಸದ್ದು ಎಲ್ಲೆಡೆ ಕೇಳಿಬರುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಇಬ್ಬರು ಬೇರೆಯಾಗುವ ಮೂಲಕ ಸಂಬಂಧವನ್ನು ಕೊನೆಗೊಳಿಸಿದರು…ಅದೇನೇ ಇರಲಿ, ಈ ಸಂಬಂಧ ಏಕೆ ಮುರಿದುಹೋಯಿತು ಎಂದು ಜನರು ಚರ್ಚಿಸುತ್ತಲೇ ಇದ್ದಅರೆ. ಈ ಬಗ್ಗೆ ನೀಲಂ ವರ್ಷಗಳ ನಂತರ ಮೌನ ಮುರಿದಿದ್ದಾರೆ.

ಇದನ್ನೂ ಓದಿ: ಪತ್ನಿ ಜೊತೆ ವಾಸಿಸಲಾಗದು ಎಂದಿದ್ದೇಕೆ ಸಿಂಗರ್ ಹನಿ ಸಿಂಗ್?: ವಿಚ್ಛೇದನಕ್ಕೆ ಅಸ್ತು ಎಂದ ಕೋರ್ಟ್
ನೀಲಂ ಕೊಠಾರಿ 90 ರ ದಶಕದ ಸುಂದರ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು. 1984 ರಲ್ಲಿ ಬಿಡುಗಡೆಯಾದ 'ಜವಾನಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನೀಲಮ್ ಮೊದಲ ಚಿತ್ರದಿಂದಲೇ ಜನಪ್ರಿಯರಾದರು.

ಈ ಅವಧಿಯಲ್ಲಿ ನಟಿಯ ಹೆಸರು ಅನೇಕ ನಟರೊಂದಿಗೆ ಥಳಕು ಹಾಕಿಕೊಂಡಿತ್ತು. ನೀಲಂ ಅವರ ಹೆಸರು ಧರ್ಮೇಂದ್ರ ಅವರ ಪುತ್ರ ಮತ್ತು ಬಾಲಿವುಡ್ ನಟ ಬಾಬಿ ಡಿಯೋಲ್ ಜೊತೆ ಸಹ ಸೇರಿಕೊಂಡಿತ್ತು. ಅದು ನಿಜವೂ ಆಯಿತು. ಇಬ್ಬರೂ ಸುಮಾರು 5 ವರ್ಷ ಸಂಬಂಧ ಹೊಂದಿದ್ದರು.

ಹೀಗಿರುವಾಗ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದ್ದಕ್ಕಿದ್ದಂತೆ ನೀಲಂ ಮತ್ತು ಬಾಬಿ ಬೇರ್ಪಟ್ಟ ಸುದ್ದಿ ಬಂದಿತ್ತು. ಇವರಿಬ್ಬರು ಬೇರ್ಪಟ್ಟಿದ್ದಕ್ಕೆ ಪೂಜಾ ಭಟ್ ಕಾರಣ ಎಂಬ ಗುಸುಗುಸು ಸಹ ಕೇಳಿ ಬಂದಿತ್ತು. ಇನ್ನು ಕೆಲವರು ಧರ್ಮೇಂದ್ರನಿ ಅವರಿಗೆ ಇಷ್ಟವಿಲ್ಲದ್ದರಿಂದ ಹೀಗಾಯಿತು ಎಂದಿದ್ದರು.

ಆದರೆ, ಇದರ ಹಿಂದಿನ ಸತ್ಯ ಏನು ಎಂಬುದು ಬಹಿರಂಗವಾಗಿರಲಿಲ್ಲ. ವರ್ಷಗಳ ನಂತರ ಈಗ ನೀಲಮ್ ತನ್ನ ಮತ್ತು ಬಾಬಿ ಡಿಯೋಲ್ ಬೇರ್ಪಟ್ಟಿದ್ದರ ಕುರಿತು ಮೌನ ಮುರಿದಿದ್ದಾರೆ.

ನೀಲಂ ಪ್ರಕಾರ, ಯಾವುದೇ ಮೂರನೇ ವ್ಯಕ್ತಿಯ ಕಾರಣದಿಂದ ಸಂಬಂಧವು ಮುರಿದುಹೋಗಲಿಲ್ಲ, ಬದಲಿಗೆ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದರು. ‘ನನ್ನನ್ನು ನಂಬಿ, ಈ ನಿರ್ಧಾರಕ್ಕೂ ಬೇರೆ ಯಾರಿಗೂ ಸಂಬಂಧವಿಲ್ಲ. ನಾನು ಸ್ಟಾರ್ ಪತ್ನಿಯಾಗಿ ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ಬಯಸಲಿಲ್ಲ. ನನಗೆ ಸುಮ್ಮನೆ ಭಯವಾಗುತ್ತಿತ್ತು. ತುಂಬಾ ಭಯವಾಯಿತು. ಆ ಭಯವನ್ನು ನಾನು ವರ್ಣಿಸಲು ಸಾಧ್ಯವಿಲ್ಲ. ಬಹುಶಃ ಈ ಭಯವು ದೂರವಾಗುವುದರ ಮೂಲಕ ಕೊನೆಗೊಳ್ಳುತ್ತದೆ ಎಂದು ಭಾವಿಸಿದೆ. ನಂತರ ಏನಾದರೂ ತಪ್ಪಾಗುವುದರ ಬಗ್ಗೆ ನಾನು ಯೋಚಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನಿರ್ಧಾರ ತೆಗೆದುಕೊಂಡೆ. ಆದರೆ ಇದು ತಡವಾಗಿಲ್ಲ ಎಂದು ನಾನು ಅರಿತುಕೊಂಡೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net