VIDEO: 'ಇದು ಚಾಕುವಿನ ಮಾಯಾ ಶಕ್ತಿ...!!' ನೆಟ್ಟಿಗರಂತೂ ಸಿಕ್ಕಾಪಟೆ ಕನ್​​ಫ್ಯೂಸ್​ ಆಗಿದ್ದಾರೆ...

Knife
Published on

ಇಲ್ಲೊಂದು ವಿಡಿಯೋ ಇದೆ ನೋಡಿ. ವ್ಯಕ್ತಿಯೋರ್ವ ಚಪ್ಪಲಿ, ಹೂವಿನ ಪಾಟ್​, ಸೋಪು, ಹ್ಯಾಂಡ್​ವಾಶ್​ ಲಿಕ್ವಿಡ್​ ಬಾಟಲಿ, ಚೊಂಬು, ಬಾಳೆಹಣ್ಣು, ಟಿಶ್ಯೂ ಪೇಪರ್​ ರೋಲ್​ ಸೇರಿ ಹಲವು ವಸ್ತುಗಳನ್ನು ಒಂದು ಚಾಕುವಿನಿಂದ ಸುಲಭವಾಗಿ ಕತ್ತರಿಸುತ್ತಾನೆ.

ವಿಡಿಯೋ ನೋಡಿದವರಿಗೆ ಎಂಥವರಿಗಾದರೂ ಇದು ತೀರ ಅಸಹಜ ಎನ್ನಿಸುತ್ತದೆ. ಏನಿದು ಅಷ್ಟು ಸುಲಭವಾಗಿ, ಒಳ್ಳೆ ಕೇಕ್​ ಕಟ್​ ಮಾಡಿದ ತರಹ ಈ ಗಟ್ಟಿ ವಸ್ತುಗಳನ್ನೆಲ್ಲ ಕತ್ತರಿಸುತ್ತಿದ್ದಾರಲ್ಲ ಎಂದೆನಿಸುತ್ತದೆ.

ಆದರೆ ವಾಸ್ತವ ಏನೆಂದರೆ...ಇವೆಲ್ಲ ನಿಜಕ್ಕೂ ಕೇಕ್​​ಗಳೇ....ಚಪ್ಪಲಿ ಕೇಕ್..ಬದನೆಕಾಯಿ ಕೇಕ್​...ಚೊಂಬಿನ ಕೇಕ್​, ಸೋಪಿನ ಕೇಕ್​...ಹೀಗೇ ತರಹೇವಾರಿ ರೂಪದ ಕೇಕ್​​ಗಳು.

ಇಂಥ ಕೇಕ್​​ಗಳನ್ನು ತಯಾರಿಸಿದ್ದು ಶೆಫ್​ ತುಬಾ ಗೆಕಿಲ್​ ಎಂಬುವರು. ಇವರು ಕೇಕ್​ ತಯಾರಿಸುವುದರಲ್ಲಿ ಪರಿಣತರು. ನೈಜ ವಸ್ತುಗಳಂತೆ ಕಾಣಿಸುವ, ಎಂಥವರನ್ನೂ ಯಾಮಾರಿಸಬಲ್ಲ 3 ಡಿ ಕೇಕ್​​ಗಳನ್ನು ಇವರು ಸಿದ್ಧಪಡಿಸುತ್ತಾರೆ. ತಾವು ತಯಾರಿಸಿದ ಕೇಕ್​​ಗಳ ವಿಡಿಯೋಗಳ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಮಾತ್ರ ತುಂಬ ಗೊಂದಲ ಮಾಡಿಕೊಂಡಿದ್ದಾರೆ. ಕತ್ತರಿಸುವ ಚಾಕುವಿನಲ್ಲಿ ಏನೋ ಮಾಯಾ ಶಕ್ತಿ ಇದೆ. ಅದನ್ನು ಯಾವುದೇ ವಸ್ತುವಿನ ಮೇಲಿಟ್ಟರೂ ಅದು ಕೇಕ್​ ಆಗಿ ಬದಲಾಗುತ್ತಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net