ಸಸ್ಯಹಾರಿಯೊಬ್ಬನಿಗೆ ನಾನ್ ವೆಜ್​ ಬಿರಿಯಾನಿ ನೀಡಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಗುಂಡಿಕ್ಕಿ ಹತ್ಯೆ| Shot dead

ವಿಜಯವಾಣಿ (75)
Published on

Ranchi : ಜಾರ್ಖಂಡ್​ನ ರಾಂಚಿಯಲ್ಲಿ ಸಸ್ಯಹಾರಿ ಗ್ರಾಹಕನೊಬ್ಬನಿಗೆ ಮಾಂಸದ ಬಿರಿಯಾನಿ ನೀಡಿದ ಆರೋಪದ ಮೇಲೆ ಹೋಟೆಲ್​ ಮಾಲೀಕನೊಬ್ಬನನ್ನು ಶನಿವಾರ(ಅ. 18) ರಾತ್ರಿ ಗುಂಡಿಕ್ಕಿ (Shot dead) ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಸ್ಟೋರೆಂಟ್ ಮಾಲೀಕ ವಿಜಯ್ ಕುಮಾರ್ ನಾಗ್ (47) ಎಂದು ಮೃತಪಟ್ಟವರು.  ಕಾಂಕೆ ಪೊಲೀಸ್ ಠಾಣೆ ಪ್ರದೇಶದ ಭಿತ್ತ ನಿವಾಸಿಯಾಗಿದ್ದರು. ಅವರು ಮೇಜಿನ ಬಳಿ ಊಟ ಮಾಡುತ್ತಿದ್ದಾಗ ಗುಂಪೊಂದು ವೆಜ್ ಕೇಳಿದ್ರೆ ನಾನ್​ ವೆಜ್ ಬಿರಿಯಾನಿ ಕೊಟ್ಟಿದ್ದೀಯಾ ಎಂದು ದಾಳಿ ನಡೆಸಿ, ಎದೆಗೆ ಗುಂಡು ಹಾರಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ರಾಂಚಿ ಗ್ರಾಮೀಣ ಎಸ್​ಪಿ ಪ್ರವೀಣ್ ಪುಷ್ಕರ್,  ಶನಿವಾರ ರಾತ್ರಿ 11.30 ರ ಸುಮಾರಿಗೆ ಕಾಂಕೆ-ಪಿಥೋರಿಯಾ ರಸ್ತೆಯಲ್ಲಿರುವ ಹೋಟೆಲ್‌ನಿಂದ ಸಸ್ಯಾಹಾರಿ ಬಿರಿಯಾನಿ ಖರೀದಿಸಿದ ಗ್ರಾಹಕನೊಬ್ಬ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾನೆ. ಆದರೆ ಸ್ವಲ್ಪ ಸಮಯದ ಬಳಿಕ ಅವನು ವಾಪಸ್ ಬಂದಿದ್ದು, ಈ ವೇಳೆ ಕೆಲವರು ಅವನಿಗೆ ನಾನ್ ವೆಜ್ ಬಿರಿಯಾನಿ ನೀಡಿದ್ದಾನೆ ಎಂದು ಹೇಳಿದ್ದು, ಇದರಿಂದ ಗಲಾಟೆ ನಡೆದು ಮಾಲೀಕನ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮೃತದೇಹವನ್ನು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS)ಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  ಆರೋಪಿಗಳನ್ನು ಬಂಧಿಸಲು ಪೊಲೀಸರು ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net