ಹೈ ಪ್ರೊಫೈಲ್ ಕುಖ್ಯಾತ ಕಳ್ಳನಿಗೆ ಮೂವರು ಪತ್ನಿಯರು, ನೇಪಾಳದಲ್ಲಿ ಹೋಟೆಲ್...ಭಾರತದಲ್ಲಿ ಆಸ್ತಿ

Hotel In Nepal Properties In India High Profile Thief Caught In Delhi
Published on

ನವದೆಹಲಿ: 500ಕ್ಕೂ ಹೆಚ್ಚು ಕಳ್ಳತನಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳ ನೇಪಾಳದಲ್ಲಿ ಹೋಟೆಲ್, ಭಾರತದಲ್ಲಿ ತನ್ನ ಹೆಸರಿನಲ್ಲಿ ಹಲವಾರು ಆಸ್ತಿಗಳನ್ನು ಹೊಂದಿರುವ ಹೈ ಪ್ರೊಫೈಲ್ ಕಳ್ಳನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮನೋಜ್ ಚೌಬೆ ಸಾಮಾನ್ಯ ಮನುಷ್ಯನಲ್ಲ, ನೇಪಾಳದಲ್ಲಿ ಹೋಟೆಲ್, ಮೂವರು ಹೆಂಡತಿಯರು.. ಅವರಲ್ಲಿ ಇಬ್ಬರು ಭಾರತದಲ್ಲಿದ್ದಾರೆ ಮತ್ತು ಒಬ್ಬರು ನೇಪಾಳದಲ್ಲಿದ್ದಾರೆ. ಭಾರತದಲ್ಲಿ ಹಲವೆಡೆ ಆಸ್ತಿಗಳಿವೆ..ಮಕ್ಕಳೂ ಒಳ್ಳೆಯ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ, ಅವನು ಏನು ಮಾಡುತ್ತಾನೆ ಎಂಬುದು ಒಬ್ಬ ಹೆಂಡತಿಗೂ ತಿಳಿದಿಲ್ಲ. ಮನೋಜ್ ಚೌಬೆ ಕಳ್ಳತನ ಮಾಡುತ್ತಾನೆ. ಕುಖ್ಯಾತ ಕಳ್ಳನನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಹೈ ಪ್ರೊಫೈಲ್ ಕಳ್ಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಪೊಲೀಸರ ಪ್ರಕಾರ, ನೇಪಾಳದಲ್ಲಿ ಹೋಟೆಲ್ ಹೊಂದಿದ್ದು, ಭಾರತದಲ್ಲಿ ತನ್ನ ಹೆಸರಿನಲ್ಲಿ ಅನೇಕ ಆಸ್ತಿಗಳನ್ನು ಹೊಂದಿರುವ ಹೈಪ್ರೊಫೈಲ್ ಕಳ್ಳನ ಹೆಸರು ಮನೋಜ್ ಚೌಬೆ. ಪೊಲೀಸ್ ತನಿಖೆ ವೇಳೆ ಈತ ಇದುವರೆಗೆ 200ಕ್ಕೂ ಹೆಚ್ಚು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನ ವಿರುದ್ಧ ದೇಶಾದ್ಯಂತ ಸುಮಾರು 500 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

1997ರಲ್ಲಿ ದೆಹಲಿಗೆ ಬಂದಿದ್ದ ಆತ ಮೊದಲು ಕ್ಯಾಂಟೀನ್‌ನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದು, ಐಷಾರಾಮಿ ಪ್ರದೇಶಗಳಲ್ಲಿನ ಮನೆಗಳೇ ಆತನ ಪ್ರಮುಖ ಗುರಿಯಾಗಿದ್ದವು. ಚೌಬೆ ಕದ್ದ ಹಣದಿಂದ ನೇಪಾಳದಲ್ಲಿ ಹೋಟೆಲ್ ನಿರ್ಮಿಸಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ ಅವರ ಪತ್ನಿಯೊಬ್ಬರಿಗೆ ಮನೆ ಖರೀದಿಸಿದ್ದಾನೆ. ಕೆಲವು ನಿವೇಶನವನ್ನೂ ಖರೀದಿಸಿದ್ದಾನೆ. ಮಾಸಿಕ 2 ಲಕ್ಷ ರೂ. ಬಾಡಿಗೆಗೆ ಆಸ್ಪತ್ರೆಗೆ ಬಾಡಿಗೆಗೆ ಬರುತ್ತದೆ. ಲಕ್ನೋದಲ್ಲಿ ಮನೆ ಇದೆ ಎಂದು ಹೇಳಲಾಗಿದೆ. ಕಳ್ಳತನ ಮಾಡಲು ದೆಹಲಿಗೆ ಬರುತ್ತಾನೆ. ಕರವಾಲ್ ನಗರದಲ್ಲಿ ಬಂಧಿಸಲಾಗಿದೆ ಎಂದು ವಾಯುವ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ ಜಿತೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net