ತಡರಾತ್ರಿಯಲ್ಲಿ ಬಂದ ಗರ್ಭಿಣಿಯನ್ನು ಅಡ್ಮಿಟ್​ ಮಾಡಿಕೊಳ್ಳಲು ಸತಾಯಿಸಿದ ಆಸ್ಪತ್ರೆಗಳು; ಕಡೆಗೂ ಜಿಲ್ಲಾಧಿಕಾರಿಯೇ ಮಾತನಾಡಬೇಕಾಯ್ತು...

Muslim Woman
Published on

ರಾಯಚೂರು: ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆ ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ತುಂಬು ಗರ್ಭಿಣಿ ರಿಮ್ಸ್​ ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರಿಲ್ಲ, ಬೇರೆ ಕಡೆಗೆ ಹೋಗಿ ಎಂದು ಹೇಳಿದರು. ಹಾಗೇ ಅಲ್ಲಿಂದ ನವೋದಯ ಆಸ್ಪತ್ರೆಗೆ ಹೋದರೆ, ನಮ್ಮಲ್ಲಿ ರಕ್ತದ ಕೊರತೆ ಇದೆ. ರಿಮ್ಸ್​ಗೆ ಕರೆದುಕೊಂಡು ಹೋಗಿ ಎಂದರು. ಹೀಗಾಗಿ ಮಹಿಳೆಯನ್ನು ಕ್ರೂಸರ್​​ನಲ್ಲಿ ಕೂರಿಸಿಕೊಂಡು ಕುಟುಂಬಸ್ಥರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿದ್ದಾರೆ.

ಇನ್ನೇನು ಹೆರಿಗೆಯಾಗುತ್ತದೆ ಎಂಬ ಸ್ಥಿತಿಯಲ್ಲಿ ತಡರಾತ್ರಿ ಆಸ್ಪತ್ರೆಗೆ ಬಂದಿದ್ದ ಸಿರಿವಾರ ಗ್ರಾಮದ ಮೋಹಿನಾ ಬೇಗಂ ಮತ್ತು ಕುಟುಂಬದವರು ಪರದಾಡಬೇಕಾಯಿತು. ನವೋದಯಕ್ಕೆ ಹೋದರೆ ಅಲ್ಲಿಯೂ ದಾಖಲಿಸಿಕೊಳ್ಳಲಿಲ್ಲ. ಬಳಿಕ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಡಿಸಿ ರಿಮ್ಸ್​ನ ಅಧೀಕ್ಷಕರ ಬಳಿ ಮಾತನಾಡಿದ ನಂತರ ಅವರು ಮೋಹಿನಾರನ್ನು ಅಡ್ಮಿಟ್ ಮಾಡಿಕೊಂಡಿದ್ದಾರೆ. ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net