

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಶ್ವವಿಖ್ಯಾತ ಹಂಪಿಯಲ್ಲಿ ಪರಿಸರದಲ್ಲಿ ಹದಿನಾಲ್ಕು ವರ್ಷಗಳ ಹಿಂದೆ ಆರಂಭವಾದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದ ಲೋಹದ ತಡೆಹೋಡೆ ನೆಲಸಮವಾಗಿದ್ದು, ಜೂ ಪ್ರಾಣಿಗಳಿಗೆ ಹೊರಗಿನ ಕಾಡು ಪ್ರಾಣಿಗಳ ಹಾವಳಿ ಎದುರಾಗಿದ್ದು ಸಿಬ್ಬಂದಿ, ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.
ಹಂಪಿ ಜೂ ರಾಜ್ಯದ ಅತಿ ದೊಡ್ಡ ಜೈವಿಕ ಉದ್ಯಾನವನ ಇದಾಗಿದೆ. ಕಳೆದ 11 ತಿಂಗಳ ಹಿಂದೆ ಜೂ ರಕ್ಷಣೆಗಾಗಿ ಸುತ್ತ ನಿರ್ಮಿಸಲಾದ ಲೋಹದ ತಡೆಗೋಡೆಯಲ್ಲಿ ಅಂದಾಜು 4 ಕಿಮೀ ನಷ್ಟು ತಡೆಗೋಡೆ ನೆಲಕಚ್ಚಿದೆ. ಇದರಿಂದಾಗಿ ಹೊರಗಿನಿಂದ ಚಿರತೆ, ಕರಡಿ ಸೇರಿದಂತೆ ಕಾಡುಪ್ರಾಣಿಗಳು ಜೂ ಒಳಗಿನ ಪ್ರಾಣಿಗಳ ದಾಳಿ ನಡೆಸಲು ಯತ್ನಿಸುತ್ತಿವೆ. ಕಳೆದ ಒಂದು ವಾರದಿಂದ ರಾತ್ರಿ ವೇಳೆ ಚಿರತೆ ಝೂಲಾಜಿಕಲ್ ಪಾರ್ಕ್ ಒಳಗೆ ಬಂದು ದಾಂಧಲೆ ನಡೆಸುತ್ತಿದೆ. ಅದರಲ್ಲಿ ಜಿಂಕೆ ಸಫಾರಿಗೆ ಕಡೆ ಚಿgಚಿve ಒಡಾಡುತ್ತಿವೆ. ಬೆದರಿಸಿ ಓಡಿಸಲು ರಾತ್ರಿ ವೇಳೆ ಸಿಬ್ಬಂದಿಗಳು ಹೈರಾಣ ಆಗಿದ್ದಾರೆ. ಕೆಲ ದಿನಗಳಿಂದ ಜೂಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಕಣ್ಣತಪ್ಪಿ ಜೂ ಒಳಗಿನ ಅರಣ್ಯದಲ್ಲಿ ಹೊರಗಿನ ಪ್ರಾಣಿಗಳು ಅವಿತುಕೊಂಡರೆ ಮಾನವ ಸಂಘರ್ಷ ಆಗುವ ಸಾಧ್ಯತೆಯಿದೆ ಎಂಬ ಆತಂಕ ಎದುರಾಗಿದೆ.
ಕಮಲಾಪುರ ಬಳಿಯ ಬಿಳಿಕಲ್ಲು ಅರಣ್ಯ ಪ್ರದೇಶದಲ್ಲಿ ಈ ಉದ್ಯಾನ ನಿರ್ಮಾಣವಾಗಿದೆ. 2012ರಲ್ಲಿ ಜನಾರ್ದನ ರೆಡ್ಡಿ ಅವರು ಸುಮಾರು 149 ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಉದ್ಯಾನವನ 30 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಕಾರ್ಯಾರಂಭ ಮಾಡಿದ್ದರು. 2017ರಲ್ಲಿ ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಯಾಗಿದೆ. ಜತೆಗೆ ಸಿಂಹ, ಹುಲಿ ಸಫಾರಿ ಜತೆ ಜೂ ಕೂಡ ಇದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಹಂಪಿಗೆ ಬರುವ ಬಹುತೇಕರು ಇಲ್ಲಿ ಬೇಟಿ ನೀಡುತ್ತಾರೆ.
ಝೂಲಾಜಿಕಲ್ ಪಾರ್ಕ್ನಲ್ಲಿ ಸದ್ಯ ನೀರಿನ ಸಮಾಸ್ಯೆಯಂತು ಇಲ್ಲ. ಆದರೆ, ಪ್ರಾಣಿಗಳಿಗೆ ನಿಗದಿ ಪಡಿಸಿದ ಆಹಾರಕ್ಕಿಂತ ಅರ್ದದಷ್ಟು ಆಹಾರ ನೀಡಲಾಗುತ್ತಿದೆ ಎಂದು ಆರೋಪವಿದೆ. ಇನ್ನೂ ಕಳೆದ 8 ತಿಂಗಳಿAದ 149 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣ ಆಗಿರುವ ಕಬ್ಬಿಣದ ತಡೆಗೋಡೆ ಅಂದಾಜು ನಾಲ್ಕು ಕಿಮೀ ನಷ್ಟು ನೆಲಸಮವಾಗಿದೆ. ಇದರಿಂದ ಹೊರಗಿನ ಕಾಡು ಪ್ರಾಣಿಗಳು ಝೂಲಾಜಿಕಲ್ ಪಾರ್ಕ್ಗೆ ನುಗ್ಗುತ್ತಿವೆ. ಪಾರ್ಕ್ ಪ್ರಾಣಿಗಳಿಗೆ ಹಾಗೂ ಅದರಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಜೀವ ಭಯ ಎದುರಾಗಿದೆ. ಆದ್ದರಿಂದ ಭದ್ರ ಜತೆ ಮತ್ತಷ್ಟು ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯವಿದೆ.
11 ತಿಂಗಳ ಹಿಂದೆ 4 ಕಿ.ಮೀ.ನಷ್ಟು ಕಾಂಪೌAಡ್ ನೆಲಸಮವಾಗಿದೆ. ಟೆಂಡರ್ ಪ್ರಕಿಯೇ ಮುಗಿದು 20 ದಿನಗಳಿಂದ ಕಾಮಗಾರಿ ಆರಂಭವಾಗಿದೆ. ಆದರೆ, ಕಾಮಗಾರಿ ಕಾರ್ಯ ಯಾವಗ ಮುಗಿಯುತ್ತದೋ ತಿಳಯುತ್ತಿಲ್ಲ. ಪೂರ್ಣವಾಗಲು ಕಾಯಬೇಕಿದೆ. ಅಲ್ಲಿಯವರೆಗೆ ಹೊರಗಿನ ಕಾಡು ಪ್ರಾಣಿಗಳ ಹಾವಳಿ ತಪ್ಪಿದ್ದಲ್ಲ ಎನ್ನುತ್ತಾರೆ ಜೂ ಸಿಬ್ಬಂದಿಗಳು. ಗುತ್ತಿಗೆದಾರ ಕಾಮಗಾರಿ ಆದಷ್ಟು ಬೇಗ ಮುಗಿಸಿ ಝೂಲಾಜಿಕಲ್ ಪಾರ್ಕ್ಗೆ ರಕ್ಷಣೆ ಮಾಡಬೇಕಿದೆ ಎಂಬುದು ಪ್ರವಾಸಿಗರ ಆಗ್ರಹವಾಗಿದೆ.
ಝೂಲಾಜಿಕಲ್ ಪಾರ್ಕ್ ಕಾಂಪೌAಡ್ ಹಾನಿಯಾಗಿದೆ. ಕಳೆದ 20ದಿನಗಳಿಂದ ದುರಸ್ತಿ ಕಾರ್ಯ ಕೂಡ ನಡೆಯುತ್ತಿದೆ. ಸುತ್ತಮುತ್ತಲು ಅರಣ್ಯ ಇರುವುದರಿಂದ ಕಾಡು ಪ್ರಾಣಿಗಳ ಒಡಾಟ ಸಾಮಾನ್ಯ. ಅವುಗಳ ತಡೆಗೆ ಕ್ರಮಕೈಗೊಳ್ಳಲಾಗಿದೆ. ರಾಜೇಶ್ ನಾಯ್ಕ, ಡಿಎಫ್‌ಒ, ಹಂಪಿ ಜೂ