

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಕಳೆದ ವರ್ಷ ತೀವ್ರ ಬರದಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ರೈತರು ತೀವ್ರ ತೊಂದರೆ ಅನುಭವಿಸಿದ್ದರು. ಈ ಬಾರಿ ಮುಂಗಾರು ಪೂರ್ವದಲ್ಲಿ ಮಳೆ ಸುರಿದ್ದು ಈಗಿಲ್ಲವಾಗಿದೆ. ಕಳೆದ ಎರಡ್ಮೂರು ವಾರದಿಂದ ವಾಡಿಕೆಗಿಂತ ಕಮ್ಮಿ ಮಳೆಯಾಗಿದ್ದು, ರೈತರಿಗೆ ಮರು ಬಿತ್ತನೆ ಚಿಂತೆ ಶುರುವಾಗಿದೆ.
ಮಳೆ ನೆಚ್ಚಿಕೊಂಡು ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಬರ ಸಿಡಿಲು ಬಡಿದಿತ್ತು. ವರುಣ ದೈವ ಕೃಪೆ ತೋರದ ಪರಿಣಾಮ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿತ್ತು. ಸಾಲ ಸೂಲ ಮಾಡಿ ಬಿತ್ತಿದ್ದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಕೆಲವರು ಸಾಲಬಾಧೆ ತಾಳದೆ ಆತ್ಮಹತ್ಯೆಯ ದಾರಿ ಹಿಡಿದಿದ್ದರು. ಈ ವರ್ಷವಾದರೂ ಉತ್ತಮ ಮಳೆಯಿಂದ ಸಮೃದ್ಧ ಫಸಲು ತೆಗೆಯಬೇಕೆಂದಿದ್ದ ರೈತರ ನಿರೀಕ್ಷೆ ಹುಸಿಯಾಗುವ ಆತಂಕ ಎದುರಾಗಿದೆ.
ಜಿಲ್ಲೆಯ ಕೆಲ ವಾರದಗಳಿಂದ ಮೋಡಕವಿದ ವಾತವರಣ ಇದೆ. ಪೂರ್ವ ಮುಂಗಾರು ಹಾಗೂ ಆರಂಭದಲ್ಲಿ ಉತ್ತಮ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು. ನಿರಂತರ ಸುರಿಯದಿದ್ದರೂ ಕೆಲಹೊತ್ತು ಧರೆಗಿಳಿದು ಭೂತಾಯಿ ಮಡಿಲನ್ನು ತಂಪುಗೊಳಿಸಿದೆ. ಹೀಗಾಗಿ ಈ ವರ್ಷದ ಮಳೆಗಳು ಕೈ ಹಿಡಿಯುವ ವಿಶ್ವಾಸದಲ್ಲಿ ರೈತರು ಮಳೆಯಾಶ್ರಿತ ಬೆಳೆಗಳನ್ನು ರೈತರು ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಇದೀಗ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಂಗಲಾಗಿರುವ ರೈತರು ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿಈ ವರ್ಷ ಸಕಾಲಕ್ಕೆ ಮುಂಗಾರು ಪ್ರವೇಶವಾಗಿತ್ತು. ಪೂರ್ವ ಮುಂಗಾರಿನಲ್ಲಿ ಅಶ್ವಿನಿ, ಭರಣಿ ಮಳೆಯಾಗಿದ್ದು, ಮೆಕ್ಕೆಜೋಳ, ಜೋಳ, ರಾಗಿ, ತೊಗರಿ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಬಹುತೇಕ ಪೂರ್ಣಗೊಂಡಿದೆ. ಕೃತ್ತಿಕಾ ಮಳೆ ಸದ್ದಿಲ್ಲದೆ ಬರುವ ಸೂಚನೆ ನೀಡುತ್ತಿದ್ದು, ಉತ್ತಮ ಫಸಲು ಕೈ ಹಿಡಿಯುತ್ತೆ ಎಂಬುದು ರೈತರ ನಿರೀಕ್ಷೆಯಾಗಿತ್ತು. ಸದ್ಯ ಮಳೆಯ ಕೊರತೆಯಿದ್ದು, ವಾರದಲ್ಲಿ ಮಳೆಯಾಗದಿದ್ದರೆ ರೈತರು ಮರು ಬಿತ್ತನೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು.
ಜಿಲ್ಲೆಯಲ್ಲಿಒಟ್ಟು 2.94 ಲಕ್ಷ ಹೆಕ್ಷೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮು ಬಿತ್ತನೆ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ (ಜು.04) 1.75 ಲಕ್ಷ ಹೆಕ್ಷೇರ್‌ನಲ್ಲಿ (ಶೇ.59.64ರಷ್ಟು) ಬಿತ್ತನೆ ಪೂರ್ಣಗೊಂಡಿದೆ. ಇನ್ನೂ ಜುಲೈ ಕೊನೆ ವಾರದ ವರೆಗೆ ಬಿತ್ತನೆ ಮಾಡಲು ಅವಕಾಶವಿದೆ. ಕಳೆದ ವರ್ಷ ಒಟ್ಟು ಶೇ.95 ಬಿತ್ತನೆ ಮಾಡಲಾಗಿತ್ತು.
ನಗರ ಸೇರಿದಂತೆ ಜಿಲ್ಲೆಯಲ್ಲಿ ಜುನ್ ತಿಂಗಳ ಮೊದಲ ಎರಡು ವಾರದಲ್ಲಿ ಭಾರಿ ಮಳೆಯಾಗಿತ್ತು. ಹಳ್ಳಕೊಳ್ಳಗಳು ಮೈದುಂಬಿಕೊAಡವು. ಜಿಲ್ಲೆಯಲ್ಲಿ ನಂತರ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕಳೆದ ಒಂದು ವಾರದ ವರದಿ ಪ್ರಕಾರ 17 ಮಿಮೀ ಮಳೆಗೆ 6 ಮಿ.ಮೀ ಮಳೆಯಾಗಿದೆ. ಶೇ.70 ರಷ್ಟು ಮಳೆ ಕೊರತೆಯಾಗಿದೆ. ಹೊಸಪೇಟೆ ತಾಲೂಕಿನಲ್ಲಿ ಶೇ.85 ಮಳೆ ಕೊರತೆಯಾಗಿದೆ. ಹೂವಿನಹಡಗಲಿ ಶೇ.64, ಹಗರಿಬೊಮ್ಮನಹಳ್ಳಿ ಶೇ.68, ಹರಪನಹಳ್ಳಿ ಶೇ.68, ಕೊಟ್ಟೂರು 28 ಮಿ.ಮೀ ಮಳೆಯಾಗಿದೆ. ಕೂಡ್ಲಿಗಿ 60 ಮಳೆ ಕೊರತೆಯಾಗಿದೆ ಎಂದು ವರದಿಯಾಗಿದೆ.
ಮಳೆಯದ ಹಿನ್ನೆಲೆ ಮಳೆಯಶ್ರಿತ ಬೆಳೆಗಳನ್ನು ಬೆಳೆಯಲು ರಸಗೊಬ್ಬರ ಬಿತ್ತನೆ ಬೀಜ ಪಡೆದು ಜಮೀನು ಹದಗೊಳಿಸಿ ಬಿತ್ತನೆ ಮಾಡಿರುವ ಪೈರು ಹುಲುಸಾಗಿ ಮೊಳಕೆ ಹೊಡೆಯುತ್ತಿವೆ. ಆದರೆ, ಮಳೆ ಇಲ್ಲದೆ ಮೊಳಗೆ ಒಣಗುವ ಹಂತದಲ್ಲಿದೆ. ಇದರಿಂದ ಕಂಗಲಾಗಿರುವ ರೈತನಿಗೆ ಮಳೆರಾಯನ ಕೃಪೆ ಬೇಕಾಗಿದೆ. ಹೀಗಾಗಿ, ಆಕಾಶದತ್ತ ಮಾಡಿರುವ ಮಳೆಯಾಶ್ರಿತ ಬೆಳೆ ಬೆಳದಿರುವ ರೈತರು ವರುಣನ ಕೃಪೆ ಬೇಕಾಗಿದೆ. ಇಲ್ಲದಿದ್ದರೆ, ಕಷ್ಟಪಟ್ಟು ಬೆಳೆದಿರುವ ಬೆಳೆಗಳು ನನಗೆ ಹಾಳಾಗುವುದರ ಜತೆಗೆ ರೈತ ಸಂಕಷ್ಟಕ್ಕೀಡಾಗುವುದು ರೈತರಲ್ಲೇ ಚಿಂತೆಗೀಡಾಗಿದೆ.
ಜಿಲ್ಲೆಯಲ್ಲಿ ಶೇ.60 ರಷ್ಟು ಬಿತ್ತನೆಯಾಗಿದೆ. ಈ ವಾರವೂ ಮಳೆಯಾಗದಿದ್ದರೂ ರೈತರು ಆತಂಕ ಪಡುವ ಅಗತ್ಯವಿಲ್ಲ. ನಂತರವೂ ಮಳೆಯಾಗದಿದ್ದರೆ ಈಗಾಗಲೇ ಬಿತ್ತನೆ ಮಾಡಿದವರಿಗೆ ಸಮಸ್ಯೆಯಾಗಲಿದೆ. ಜೂಲೈ ಕೊನೆ ವಾರದ ವರೆಗೆ ಮರು ಬಿತ್ತನೆ ಮಾಡಬಹುದು. ಶರಣಪ್ಪ ಮುದುಗಲ್, ಜಂಟಿ ನಿರ್ದೇಶರು, ಕೃಷಿ ಇಲಾಖೆ, ವಿಜಯನಗರ ...ಕೋಟ್...
ಜೂನ್ ತಿಂಗಳ ಮೊದಲ ವಾರದಲ್ಲಿ ಭಾರಿ ಮಳೆಯಾಗಿದ್ದರಿಂದ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಆದರೆ ಕಳೆದ 15 ದಿನಗಳಿಂದ ಮಳೆಯಾಗಿಲ್ಲ. ಮಳೆಆಶ್ರೀತ ಜಮೀನುಗಳಲ್ಲಿ ಮೊಳಕೆ ಹೊಡೆದ ಬೀಜಗಳು ಬಾಡುತ್ತಿವೆ. ಸಧ್ಯ ಮಳೆಯಾದರೆ ಉತ್ತಮ. ಇಲ್ಲವೆಂದರೆ ಹಾಕಿದ ಬಂಡವಾಳ ಹೊಳೆಗೆ ಹೋದಂತೆ. ಗಂಟೆ ಸೋಮಶೇಖರ್, ರೈತ, ಹೊಸಪೇಟೆ