ಕೋಟಿಗೂ ಅಧಿಕ ಕುಟುಂಬ ಬಡ ರೇಖೆಗಿಂತ ಮುಕ್ತಿ

IMG-20241109-WA0040
Published on

ಹೊಸಪೇಟೆ: ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತವಾಗಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಕನ್ನಡ ವಿವಿಯ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದ ಒಂದು ಕೋಟಿಗೂ ಅಧಿಕ ಕುಟುಂಬಗಳನ್ನು ಬಡ ರೇಖೆಗಿಂತ ಮುಕ್ತಿಯಾಗಿದ್ದು, ಇದು ಕ್ರಾಂತಿಕಾರ ಯೋಜನೆಯಾಗಿದೆ. ಸಾಮಾಜಿಕ ನ್ಯಾಯಾದ ಬಗ್ಗೆ ಸರ್ಕಾರ ತನ್ನ ನಿಲುವುಗಳನ್ನು ತೆಗೆದುಕೊಳ್ಳುವ ಜತೆಗೆ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಜನಸಾಮಾನ್ಯರು ಖುಷಿಯಾಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ಅಲೆಯಿದ್ದು, ರಾಜ್ಯದ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಖಚಿತವಾಗಿದೆ. ಆದರೆ ಬಿಜೆಪಿ ಹಣ ಬಲದಿಂದ ಗೆಲವು ಕಾಣಲು ದಾರಿ ಹುಡುಕುತ್ತಿದ್ದು, ಇದು ಸಾಧ್ಯವಿಲ್ಲ ಎಂದರು.

ಮಾದ್ಯಮಗಳು ಬೆಂಗಳೂರನ್ನು ಕೇಂದ್ರೀಕೃತ ಮಾಡಿ ವರದಿ ಮಾಡುವ ಸುದ್ದಿಗಳನ್ನು ನೋಡಿ ಕೇಳುವ ಪ್ರಶ್ನೆಗಿಂತ ಈ ನೆಲದಲ್ಲಿ ಆಗುವ ಬೆಳವಣಿಯ ಮೇಲೆ ಗಮನ ಹರಿಸಬೇಕು. ಎಂಪಿ ಚುನಾವಣೆಯಲ್ಲಿ ಒಂದು ಸ್ಥಾನ ಇದ್ದ ನಾವು 9 ಸ್ಥಾನಕ್ಕೆ ಏರಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಪ್ರತಿಫಲಿಸಿದ್ದರಿಂದ ಎಲ್ಲ ಸ್ಥಾನಗಳಲ್ಲಿ ಗೆಲವು ಕಂಡೆವು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net