

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಕನ್ನಡ ವಿವಿಗೆ 30ರ ವಸಂತ ಕಳೆದಿದ್ದು, ಆರ್ಥಿಕ ಸಂಕಷ್ಟದ ಜತೆಗೆ ಕಾಡು ಪ್ರಾಣಿಗಳ ಕಾಟವು ಹೆಚ್ಚಾಗಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪ್ರಾಣ ಭಯದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.
ವಿಶ್ವವಿಖ್ಯಾತ ಹಂಪಿಯಿAದ 8 ಕಿಮೀ ದೂರದಲ್ಲಿ ದರೋಜಿ ಕರಡಿ ಧಾಮ ಅರಣ್ಯಕ್ಕೆ ಹೊಂದಿಕೊAಡಿರುವ ವಿವಿ ಆವರಣಕ್ಕೆ ಕಾಂಪೌAಡ್ ಇಲ್ಲದೇ ಕಾಡು ಪ್ರಾಣಿಗಳು ಮುಕ್ತವಾಗಿ ಒಡಾಡುವುವು ಸಹಾಜವಾಗಿದೆ. ಈಗ ಪ್ರತ್ಯೇಕವಾಗಿ ವಿವಿಯ ವಿದ್ಯಾರಣ್ಯ ಆವರಣದ ಅನನ್ಯ ವಿದ್ಯಾರ್ಥಿನಿಯರ ವಸತಿನಿಲಯ ಹಾಗೂ ಡಾರ್ಮೆಟರಿ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ಚಿರತೆ ಓಡಾಡುತ್ತಿರುವುದು ಕಂಡುಬAದಿದೆ. ಈ ಹಿನ್ನೆಲೆಯಲ್ಲಿ ವಿವಿಯ ಎಲ್ಲ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಲು ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ. ಅಂದಾಜು 700 ಎಕರೆ ವಿಶಾಲ ಹಸಿರು ಹೊದಿಕೆಯಿಂದ ಆವೃತವಾಗಿರುವ ಕನ್ನಡ ವಿವಿಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಭೋಧಕ ಹಾಗೂ ಭೋಧಕೇತರಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಕಾಡು ಪ್ರಾಣಿಗಳಿಂದ ಮಾತ್ರವಲ್ಲದೇ ಮರಗಳ್ಳರಿಂದ ಹಾಗೂ ಇತರೆ ಕಾರಣಗಳಿಂದ ವಿವಿಯನ್ನು ರಕ್ಷಣೆ ನೀಡಬೇಕಿದೆ. ಆದ್ದರಿಂದ ವಿವಿಯ ಆರಂಭದಿAದ ಕಾಂಪೌAಡ್‌ಗಾಗಿ ಪ್ರಸ್ತಾವನೆ ಕಳಿಸಿದರು ಸರ್ಕಾರಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂಬುದು ವಿಪಾರ್ಯಸವೇ ಸರಿ.
ವಿವಿಯ ಪಕ್ಕದಲ್ಲೇ ದರೋಜಿ ಕರಡಿ ಧಾಮ ಇರುವುದರಿಂದ ಕಾಂಪೌAಡ್ ಇಲ್ಲದ ವಿವಿಯ ಆವರಣದಲ್ಲಿ ಕರಡಿ, ಚಿರತೆ ಮಾತ್ರವಲ್ಲ ಪ್ರಾಣ ಹಾನಿ ಮಾಡುವ ಕಾಡು ಪ್ರಾಣಿಗಳು ನಿರಂತರವಾಗಿ ಓಡಾಡುತ್ತವೆ. ಚಿರತೆಯಂತು ವಿವಿಯ ಆವರಣದಲ್ಲೆ ಪ್ರತಿದಿನ ಓಡಾಡುತ್ತಿದೆ. ವಿವಿಯಲ್ಲಿ ಮನುಷ್ಯರ ಮೇಲೆ ಸಧ್ಯದ ವರೆಗೆ ದಾಳಿಯಂತು ಆಗಿಲ್ಲ. ಆದರೆ, ನಾಯಿಗಳು ಕಾಣೆಯಾಗುವುದು ಇಲ್ಲಿ ಸಾಮಾನ್ಯವಾಗಿದೆ. ಆದ್ದರಿಂದ ಕಾಂಪೌAಡ್ ನಿರ್ಮಾಣ ಮಾಡಿ ವಿವಿಗೆ ರಕ್ಷಣೆ ನೀಡಬೇಕಿದೆ ಎಂಬುದು ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ಅಳಲಾಗಿದೆ.
ವಿವಿಯಲ್ಲಿ 250 ವಿದ್ಯಾರ್ಥಿಗಳು, 300 ಜನ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳಿದ್ದಾರೆ. ಆವರಣದ ಒಳಗಡೆ ಎಸ್ಸಿ-ಎಸ್ಟಿ ವಿದ್ಯಾರ್ಥಿನಿ ನಿಲಯ ಹಾಗೂ ಒಬಿಸಿ ವಿದ್ಯಾರ್ಥಿನಿಲಯ, ಆವರಣದ ಹೊರಗಡೆ ಎಸ್ಸಿ ಎಸ್ಟಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಲಯಗಳಿವೆ. ಅಧ್ಯಾಪಕರ ಹಾಗೂ ಸಿಬ್ಬಂದಿಗಳ ವಸತಿ ನಿಲಯಗಳಿವೆ. ಹಾಗೂ 32 ಕಟ್ಟಡಗಳಿವೆ. 30 ವರ್ಷದಲ್ಲಿ ದಟ್ಟವಾದ ಅರಣ್ಯ ಬೆಳೆದಿದೆ. ಶ್ರೀಗಂಧ, ಆಯುವೇಧ, ಅಪರೂಪದ ಹಾಗೂ ನೈಸರ್ಗಿಕ ಗಿಡ ಮರಗಳಿವೆ. ವಿವಿ ಅವರಣದಲ್ಲಿ ಅತ್ಯುತ್ತಮವಾದ ಜೀವ ವೈವಿದ್ಯಾಮಯವಿದೆ. ಇವುಗಳ ರಕ್ಷಣೆಗಾದರೂ ಕಾಂಪೌAಡ್ ನಿರ್ಮಾಣ ಅನಿವಾರ್ಯವಾಗಿದೆ. ವಿವಿಯ ಎಲ್ಲಾ ಕುಲಪತಿಗಳು ಸರ್ಕರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ, ಸ್ಪಂಧನೆಯೂ ಇಲ್ಲ ಉತ್ತರ ಕೂಡ ಇಲ್ಲ.
ವಿವಿಯೂ ಅಂದಾಜು 700 ಎಕರೆ ಪ್ರದೇಶದಲ್ಲಿ ಸುತ್ತಲು ಅಂದಾಜು 19 ಕಿಮೀ ಕಾಂಪೌAಡ್ ನಿರ್ಮಾಣ ಆಗಬೇಕಿದೆ. ಈ ಹಿಂದಿನ ಕುಲಪತಿಗಳು ಕೂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನೂ ಸರ್ಕಾರ ಸ್ಪಂಧನೆ ನೀಡದಿದ್ದಾಗ ಜಿಂದಾಲ್ ಸೇರಿದಂತೆ ಇತರೆ ಕಂಪನಿಗಳಿಗೆ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಆದರೆ, ಕೆಲ ಕಾರಣಂತರಗಳಿAದ ಅದು ಕೂಡ ವಿಫಲವಾಗಿದೆ. ಈಗಿನ ಕುಲಪತಿ ಡಾ.ಪರಮಶಿವಮೂರ್ತಿ ಅವರು ಕೆಕೆಆರ್‌ಡಿಬಿ, ಕೆಎಂಆರ್‌ಸಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಎರಡು ರೀತಿಯ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮೊದಲು 30 ಕೋಟಿ ರೂ. ವೆಚ್ಚದಲ್ಲಿ 8 ಅಡಿ ಎತ್ತರದ ಕಲ್ಲಿನ ಗೋಡೆ ಪ್ರಸ್ತಾವನೆ ನೀಡಿತು. ಆದರೆ, ವೆಚ್ಚ ಹೆಚ್ಚಾಯಿತು ಎಂದಾಗ 15 ಕೋಟಿ ರೂ. ವೆಚ್ಚದಲ್ಲಿ ಮೂರು ಅಡಿ ಎತ್ತರದ ಕಲ್ಲಿನ ಹಾಗೂ ಕಾಂಕ್ರೀಟ್ ಗೋಡೆಯ ಮೇಲೆ ಕಬ್ಬಿಣದ ಜಾಲರಿಯ ತಡೆ ಗೋಡೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕಳೆದ 30 ವರ್ಷಗಳಿಂದ ವಿವಿಗೆ ಅವರಣದಲ್ಲಿ ಕಾಡು ಪ್ರಾಣಿಗಳ ಒಡಾಟ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳಿಗೆ ಹಾಘೂ ಸಿಬ್ಬಂಧಿಗೆ ಎಚ್ಚರಿಕೆ ನೀಡಲಾಇದೆ. ವಿವಿ ರಕ್ಷಣೆಗೆ ಕಾಂಪೌAಡ್ ನಿರ್ಮಾಣದ ಪ್ರಸ್ತಾವನೆ ಹಿಂದಿನ ಕುಲಪತಿಗಳು ಕೂಡ ಸಲ್ಲಿಸಿದ್ದಾರೆ. ಸಧ್ಯ ನಾವು ಕೂಡ ಎರಡು ರೀತಿಯ ಪ್ರಸ್ತಾವನೆ ಸರ್ಕಾರಕ್ಕೆ ಕಳಿಸಲಾಗಿದೆ. ಸರ್ಕಾರ ಅನುದಾನ ನೀಡಿದರೆ ಕಾಂಪೌAಡ್ ನಿರ್ಮಾಣ ಆಗಲಿದೆ. - ಡಾ.ಪರಮಶಿವಮೂರ್ತಿ, ಕನ್ನಡ ವಿವಿ ಕುಲಪತಿ