ಭರವಸೆ ಮೂಡಿಸಿದ ಒಳಹರಿವು
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಕಳೆದ ಬಾರಿ ಎರಡನೇ ಬೆಳೆಯಿಂದ ವಂಚಿತರಾದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಭರವಸೆ ಮೂಡಿದೆ. ಮೊದಲನೇ ಬೆಳೆ ಭತ್ತದ ನಾಟಿ ಚುರುಕುಗೊಂಡಿದೆ.
ಕಳೆದ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ಈ ಬಾರಿ ತುಂಗಭದ್ರಾ ಜಲಾಶಯ ತುಂಬುತ್ತಾ-ಇಲ್ಲವೋ ಎಂಬ ಅನುಮಾನದಲ್ಲಿದ್ದ ರೈತರಿಗೆ ಕೊಂಚ ಆಸೆ ಚಿಗುರಿದೆ. ಮಲೆನಾಡು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿ ಜಲಾಯನ ಪ್ರದೇಶದಲ್ಲಿ ಕೆಲದಿನಗಳಿಂದ ටි ಮಳೆಯಾಗುತ್ತಿದೆ. ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅದ್ದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಾಟಿ ಸೇರಿದಂತೆ ಇತರ ಬೆಳೆಗಳ ಬಿತ್ತನೆಗೆ ಭರದ ಸಿದ್ಧತೆ ನಡೆದಿದೆ. ಈಗಾಗಲೇ ಕೊಳವೆ ಬಾವಿ ಇರುವ ಜಮೀನುಗಳಲ್ಲಿ ಭತ್ತದ ಸಸಿ ಮಡಿಗಳು ಹಾಕಿಕೊಂಡಿರುವ ರೈತರು, ನಾಟಿ ಕಾರ್ಯ ಆರಂಭ ಮಾಡಿದ್ದಾರೆ.
ರಾಜ್ಯದ ಅಚ್ಚುಕಟ್ಟು ಪ್ರದೇಶದಲ್ಲಿ 9.26 ಲಕ್ಷ ಎಕರೆ, ಆಂಧ್ರಪ್ರದೇಶದ 6.61 ಲಕ್ಷ ಎಕರೆ, ತೆಲಂಗಾಣದಲ್ಲಿ 87 ಸಾವಿರ ಎಕರೆ ಪ್ರದೇಶ ಸೇರಿ 16.29 ಲಕ್ಷ ಹೆಕ್ಟೇರ್ ಪ್ರದೇಶದ ರೈತರು ತುಂಗಭದ್ರಾ ಜಲಾಶಯವನ್ನೇ ನಂಬಿದ್ದಾರೆ. ಈ ಪೈಕಿ ಅಂದಾಜು 12 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದ್ದರಿಂದ ಮೊದಲನೇ ಬೆಳೆಗೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ರೈತರು ಮಾಡಿಕೊಂಡಿದ್ದಾರೆ. ಕಳೆದ ಬಾರಿ ಮಳೆಯಾಗದೆ ಜಲಾಶಯ ತುಂಬಿರಲಿಲ್ಲ. ಈ ಬಾರಿ ಮುಂಗಾರು ಶುಭ ಆರಂಭ ಮಾಡಿದೆ. ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಜಲಾಶಯಕ್ಕೂ ಒಳಹರಿವು ಹರಿದು ಬರುತ್ತಿದೆ.
ಜಲಾಶಯಕ್ಕೆ ಜೂ.1ರಂದು ಒಳಹರಿವು ಆರಂಭವಾಗಿದ್ದು, ಮೊದಲ ದಿನ 270 ಕ್ಯೂಸೆಕ್ ದಾಖಲಾಗಿತ್ತು. ಒಂದು ವಾರದಲ್ಲಿ 500 ಕ್ಯೂಸೆಕ್‌ನಿಂದ 2.5 ಸಾವಿರ ಕ್ಯೂಸೆಕ್‌ವರೆಗೆ ಏರಿಳಿತದಲ್ಲಿದ್ದ ಒಳಹರಿವು ಜು.1ಕ್ಕೆ 11 ಸಾವಿರ ಕ್ಯೂಸೆಕ್ ಹರಿದು ಬಂತು. ಅಂದು 6.788 టిఎంసి ఆడె నీరు ಸಂಗ್ರಹವಿತ್ತು. ಶನಿವಾರ 25 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದೆ. 46 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ಐದು ದಿನದಲ್ಲಿ 7.119 ಟಿಎಂಸಿ ನೀರು ಬಂದಿದೆ. ಸದ್ಯ 13.901 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳಹರಿವು ಏರಿಕೆ ಕಾಣುವ ಸಾಧ್ಯತೆಯಿದೆ. ಇದರಿಂದ ರೈತರಲ್ಲಿ ಜಲಾಶಯ ತುಂಬುವ ಆಶಾಭಾವ ಮೂಡಿದೆ.
ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ ಉತ್ತಮ ಒಳಹರಿವು ದಾಖಲಾಗಿದೆ. ಐದು ದಿನದಲ್ಲಿ ಏಳು ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಶೇ.40 ಟಿಎಂಸಿ ಸಂಗ್ರಹವಾಗಿ, ಒಳಹರಿವು ಮುಂದುವರಿದರೆ ಐಸಿಸಿ ಸಭೆ ಕರೆದು ನಂತರ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಇದೇ ರೀತಿ ಜಲಾಶಯಕ್ಕೆ ಒಳಹರಿವು ನಿರಂತರವಾಗಿದ್ದರೆ ಒಂದೆರಡು ವಾರದಲ್ಲಿ ಶೇ.40 ಭರ್ತಿಯಾಗಲಿದೆ. ಕಳೆದ ಬಾರಿ ಜಲಾಶಯ ಕೇವಲ ಶೇ.75 ಭರ್ತಿಯಾಗಿತ್ತು. ರೈತರಿಗೆ ಎರಡನೇ ಬೆಳೆಗೆ ನೀರು ಸಿಗಲಿಲ್ಲ. ಈ ಬಾರಿ ಒಳಹರಿವು ಹೆಚ್ಚಿದೆ.
ತುಂಗಭದ್ರಾ ಜಲಾಶಯಕ್ಕೆ ಕಳೆದ 10 ವರ್ಷದಲ್ಲಿ ಈ ವೇಳೆಗೆ ಮೂರು ವರ್ಷ ಭಾರಿ ಒಳಹರಿವು ದಾಖಲಾದ ಇತಿಹಾಸವಿದೆ. 2016 2.60 31 2 ಕ್ಯೂಸೆಕ್, 2022ರ ಇದೇ ದಿನ 34 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಈ ವರ್ಷ ಕಳೆದ ಶನಿವಾರ 25 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಕಳೆದ ಬಾರಿ ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಈ ಬಾರಿ ಉತ್ತಮ ಮಳೆಯಾಗಿ ಭರವಸೆ ಮೂಡಿಸಿದೆ. ಜಲಾಶಯದಲ್ಲಿ ಒಳಹರಿವು ಹೆಚ್ಚಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ಭತ್ತ ಸೇರಿ ಇತರ ಬೆಳೆ ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ.| ಪುರುಷೋತ್ತಮಗೌಡ ಅಧ್ಯಕ್ಷ, ತುಂಗಭದ್ರಾ ರೈತ ಸಂಘ, ಬಳ್ಳಾರಿ