

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತುಂಗಭದ್ರ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ 20 ಟಿಎಂಸಿ ಟಿಎಂಸಿ ನೀರು ಸಂಗ್ರಹವಾಗಿದೆ.
ನೀರಿಲ್ಲದೆ ತಳಕಂಡಿದ್ದ ರ‍್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿ ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಮುಂಗಾರಿಗೂ ಮುನ್ನವೇ ಒಳಹರಿವು ಬರಲು ಆರಂಭಿಸಿತ್ತು. ಇನ್ನೂ ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಜಲಾನಯನ ಪ್ರದೇಶದಲ್ಲಿಯೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದೇ ರೀತಿ ಮುಂದುವರೆದಲ್ಲಿ ಇದೇ ತಿಂಗಳಾಂತ್ಯದ ಒಳಗಾಗಿ ಡ್ಯಾಮ್ ಗರಿಷ್ಠ ಸಂಗ್ರಹ ಮಟ್ಟದ ನೀರು ದಾಖಲಾಗುವ ಸಾಧ್ಯತೆ ಇದೆ.
ಮೇ 01ರಂದು ಡ್ಯಾಮ್‌ನಲ್ಲಿ 6.85 ಟಿಎಂಸಿ ನೀರಿನ ಸಂಗ್ರಹವಿತ್ತು. ಅಷ್ಟೊತ್ತಿಗಾಗಲೇ 372 ಕ್ಯುಸೆಕ್ ಒಳಹರಿವು ಆರಂಭವಾಗಿತ್ತು. ಇದು ಕ್ರಮೇಣ ಹೆಚ್ಚಾಗುತ್ತಲೇ ಸಾಗಿದ್ದು, ಕಳೆದ ಶನಿವಾರಕ್ಕೆ 20 ಸಾವಿರ ಕ್ಯುಸೆಕ್ ಒಳಹರಿವು ದಾಖಲಾಗಿತ್ತು. ಮಂಗಳವಾರ 15.16 ಟಿಎಂಸಿ ನೀರಿನ ಸಂಗ್ರಹ ದಾಖಲಾಗಿದೆ. 105.788 ಟಿಎಂಸಿ ಸಂಗ್ರಹ ಸಾರ‍್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಕಳೆದ ರ‍್ಷ ಇದೇ ಸಂರ‍್ಭದಲ್ಲಿ ಕೇವಲ 3.412 ಟಿಎಂಸಿ ನೀರಿತ್ತು. ಆದರೆ, ಡ್ಯಾಮ್‌ನಲ್ಲಿ ಈ ಬಾರಿ ಈಗಾಗಲೇ 20 ಟಿಎಂಸಿ ನೀರು ಸಂಗ್ರಹಗೊಂಡಿದೆ. ಸಧ್ಯ ಡ್ಯಾಮ್ ನಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕಳೆದ ರ‍್ಷ ಜು.07ರ ವೇಳೆಗೆ ಬಂದಿತ್ತು. ಆದರೆ, ಆ ಬಳಿಕ ಎರಡೇ ವಾರದಲ್ಲಿ ಡ್ಯಾಮ್ ರ‍್ತಿಯಾಗಿತ್ತು. ಆದರೆ, ಈ ಸಲ ಇನ್ನೂ ಬೇಗನೆ ರ‍್ತಿಯಾಗುವ ನಿರೀಕ್ಷೆ ಇದೆ.
ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳು ಸೇರಿದಂತೆ ತುಂಗಭದ್ರಾ ಜಲಾಶಯವನ್ನು ನೆಚ್ಚಿಕೊಂಡು ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಕೃಷಿಯನ್ನೇ ನೆಚ್ಚಿಕೊಂಡಿರುವ ಅಚ್ಚುಕಟ್ಟು ಪ್ರದೇಶದ ರೈತರ ಬದುಕು ಹಸನು ಮಾಡುತ್ತಿರುವ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳೆದ ರ‍್ಷ ಆಗಸ್ಟ್ ನಲ್ಲಿ ಕಳಚಿ ಬಿದ್ದ ಬಳಿಕ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೂ ಒಂದೇ ವಾರದಲ್ಲಿ ಸಮಸ್ಯೆಗೆ ಪರಿಹಾರ ಕಂಡು ತಾತ್ಕಾಲಿಕ ಸ್ಟಾಪ್‌ಲಾಗ್ ಅಳವಡಿಸಿ ಎರಡೂ ಬೆಳೆಗಳಿಗೆ ನೀರು ಪೂರೈಸಲಾಗಿತ್ತು. ಆದರೆ, ಈ ಬಾರಿ ಇನ್ನೂ ಕ್ರೆಸ್ಟ್ ಗೇಟ್ ಅಳವಡಿಕೆ ಆರಂಭವಾಗದ ಕಾರಣ ಡ್ಯಾಮ್ ಗರಿಷ್ಟ ಸಂಗ್ರಹ ಮಟ್ಟದವರೆಗೆ ನೀರು ಸಂಗ್ರಹಣೆ ಮಾಡುವುದು ಅನುಮಾನ ಎನ್ನಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಮೇ ಆರಂಭದಲ್ಲಿಯೇ ಒಳಹರಿವು ಆರಂಭವಾಗಿದ್ದು, ಕಳೆದ ರ‍್ಷ 2024ರಂದು ಜೂನ್ 01ರಂದು 270 ಕ್ಯುಸೆಕ್ಸ್ ಒಳಹರಿವು ಆರಂಭವಾಗಿತ್ತು. 2023ರಂದು ಮೇ 05ರಂದು 366 ಕ್ಯುಸೆಕ್ಸ್, 2022ರಲ್ಲಿ ಏಪ್ರಿಲ್ 4ರಿಂದಲೇ ಅವಧಿಗೂ ಮುನ್ನವೇ ಒಳಹರಿವು 3,572ರೊಂದಿಗೆ ಆರಂಭವಾಗಿ ಒಟ್ಟು ಅತ್ಯಧಿಕ 604 ಟಿಎಂಸಿ ನೀರು ಬಂದಿತ್ತು. 2021ರಲ್ಲಿ ಮೇ 1ರಿಂದ 981 ಕ್ಯುಸೆಕ್ಸ್ ಒಳಹರಿವಿನೊಂದಿಗೆ ಒಟ್ಟು 377 ಟಿಎಂಸಿ ಹಾಗೂ 2020ರಲ್ಲಿ ಮೇ 08ರಿಂದ 2,408 ಕ್ಯುಸೆಕ್ಸ್ ನಿಂದ ಆರಂಭವಾಗಿ ಒಟ್ಟು 298 ಟಿಎಂಸಿ ಹಾಗೂ 2019ರಲ್ಲಿ 415 ಟಿಎಂಸಿ ನೀರು ಹರಿದು ಬಂದಿತ್ತು.