ಟಿಬಿಡ್ಯಾಂ ನೌಕರರಿಗೆ ಆರ್ಥಿಕ ಸಂಕಷ್ಟ

TBDAM
ತುಂಗಭದ್ರಾ ಜಲಾಶಯದ 28 ಕ್ರಸ್ಟ್ ಗೇಟ್ಗಳ ಮೂಲಕ ಹೆಚ್ಚುವರಿ ನೀರು ನದಿಗೆ ಹರಿಸಲಾಗಿದೆ.
Published on

ಹೊಸಪೇಟೆ: ತ್ರಿವಳಿ ರಾಜ್ಯಗಳಿಗೆ ನೀರುಣಿಸುವ ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿಯಲ್ಲಿ ಅನುದಾನದ ಕೊರತೆಯಿದೆ ಎಂದು ಸಿ ಮತ್ತು ಡಿ ಗೃಪ್ ನೌಕರರಿಗೆ ವೇತನ ಹಾಗೂ ಪಿಂಚಣಿ ಕಾಲಕಾಲಕ್ಕೆ ಪಾವತಿಯಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟಿಡ್ಯಾಂ ನಿರ್ವಹಣೆಯ ಜವಾಬ್ದಾರಿಯನ್ನು ಕರ್ನಾಟಕ, ಆಂದ್ರ, ತೆಲಂಗಾಣ ರಾಜ್ಯಗಳು ಹೊತ್ತಿಕೊಂಡಿವೆ. ಟಿಬಿಡ್ಯಾಂ ಆಡಳಿತ ಮಂಡಳಿಯಲ್ಲಿ 150 ಖಾಯಂ ನೌಕಕರು, 300ಕ್ಕೂ ಅಧಿಕ ಗುತ್ತಿಗೆ ನೌಕರರು ಹಾಗೂ 150 ಜನರ ನಿವೃತ್ತಿ ನೌಕರರು ಇದ್ದಾರೆ. ಆದರೆ, ವೃತ್ತಿಪರರ ನೌಕರರಿಗೆ ವೇತನ ಹಾಗೂ ನಿವೃತ್ತಿ ಹೊಂದಿದ ನೌಕರರಿಗೆ ಪಿಂಚಣಿ ಪ್ರತಿ ತಿಂಗಳು ಪಾವತಿಯಾಗಬೇಕು. ಆದರೆ, ಕಳೆದ 8 ತಿಂಗಳಿAದ ಟಿ.ಬಿ.ಡ್ಯಾಮ್ ಮಂಡಳಿಯಿAದ ಸಮರ್ಪಕವಾಗಿ ವೇತನ ಹಾಗೂ ಪಿಂಚಣಿ ಪಾವತಿಯಾಗುತ್ತಿಲ್ಲ. ಇದರಿಂದ ತಿಂಗಳ ನಿರ್ವಹಣೆಯಲ್ಲಿ ತೊಡಕಾಗುತ್ತಿದ್ದು, ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.

19 ಗೇಟ್ ಕಳಚಿ ದುರಂತ ನಡೆದಿತ್ತು. ಇದಕ್ಕೆ ತಜ್ಞರ ಹಾಗೂ ಹಲವು ಕಾರ್ಮಿಕರ ಪರಿಶ್ರಮದಿಂದ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ಯಶಸ್ಸು ಕೂಡ ಕಂಡಿದ್ದರು. ಆದರೆ ಶ್ರಮಪಟ್ಟ ತಂಡಕ್ಕೆ ಕೊಡಬೇಕಿದ್ದ ಹಣ ಕೂಡ ಪಾವತಿಯಾಗಿಲ್ಲ. ಇನ್ನೂ ಜಲಾಶಯದ ಸಿ ಮತ್ತು ಡಿ ಗೃಪ್ ನೌಕರರಿಗೆ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಟಿಬಿಬಿಗೆ ಅನುದಾನದ ಕೊರತೆ ಕಾಡುತ್ತಿದೆಯೇ ಇಲ್ಲವೇ ಆಡಳಿತ ಮಂಡಳಿಯ ನಿರ್ಲಕ್ಷö್ಯವೇ ತಿಳಿಯುತ್ತಿಲ್ಲ ಎಂದು ನೌಕರರ ಆರೋಪವಾಗಿದೆ.

ಟಿ.ಎ. ಬರುತ್ತಿಲ್ಲ

ಟಿಬಿಬಿಯಲ್ಲಿ ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುವ ನೌಕರರಿಗೆ ಕಳೆದ ಒಂದು ವರ್ಷದಿಂದ ಟಿ.ಎ. ಬಿಲ್ ಪಾವತಿಯಾಗಿಲ್ಲ. ಕೈಯಿಂದಲೇ ಖರ್ಚು ಭರಿಸುತ್ತಿದ್ದೆವೆ. ತಿಂಗಳಿಗೆ ಅಂದಾಜು ಎಸ್.ಡಬ್ಲೂö್ಯ.ಇ. ಗಳಿಗೆ 3 ಸಾವಿರ ರೂ., ಜೆ.ಡಬ್ಲೂö್ಯ.ಇ.ಗಳಿಗೆ 2.5 ಸಾವಿರ ರೂ. ಹಾಗೂ ಇತರೆ ಡಿ ಗೃಪ್ ನೌಕರರಿಗೆ 2 ಸಾವಿರ ರೂ. ಒಂದು ವರ್ಷದ ಟಿ.ಎ. ಬಿಲ್ ಪಾವತಿಯಾಗಬೇಕು. ಇತ್ತ ವೇತನ ಕೂಡ ವಿಳಂಬ ಮಾಡುತ್ತಾರೆ. ಪ್ರತಿ ತಿಂಗಳು ಸಾಲ ಮಾಡಿ ಕುಟುಂಬ ನಿರ್ವಹಣೆ ಮಾಡುವ ಅನಿರ್ವಯತೆಯಿದೆ ಎಂದು ನೌಕರರ ಅಳಲಾಗಿದೆ.

ಅನುಕಂಪದ ನೌಕರಿ ಇಲ್ಲ

ಬಹುತೇಕ ಸರ್ಕಾರಿ ಸೌಮ್ಯದ ಸಂಸ್ಥೆಗಳಲ್ಲಿ ಕಾರ್ಯನಿರ್ವ ನಿರ್ವಹಿಸುವ ನೌಕರರು ಸೇವೆ ಮುನ್ನ ಮೃತಪಟ್ಟರೆ, ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರೊಬ್ಬರಿಗೆ ನೇಮಕಾತಿಗಾಗಿ 1996ರಲ್ಲಿ ಹೋರಾಟ ಮಾಡಿ ಬೇಡಿಕೆ ಈಡೇರಿಸಿಕೊಂಡಿದ್ದೆವು. ಆದರೆ, ಅನುಕಂಪದ ನೇಮಕಾತಿಯನ್ನು ಟಿಬಿಬಿ 2022ರಿಂದ ರದ್ದು ಪಡಿಸಿದೆ. ಇದರಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 20 ನೌಕರರ ಮೃತಪಟ್ಟಿದ್ದು, ಅವರ ಕುಟುಂಬ ಬೀದಿಗೆ ಬಂದAತಾಗಿದೆ. ಟಿಬಿಬಿ ನಮಗೆ ಹಲವು ಅನ್ಯಾಯ ಮಾಡುತ್ತಿದೆ ಎಂದು ಟಿಬಿಬಿ ವರ್ಕ್ಚಾರ್ಜ್ಡ್ ಎಂಪ್ಲಾಯೀಸ್ ಅಸೋಸಿಯೇಷನ್ ಕಾರ್ಯದರ್ಶಿ ಟಿ.ಕೆ.ಗೋಪಾಲ್ ಕೃಷ್ಣ ಹೇಳಿದರು.

ನಿರ್ವಹಣೆಯಿಲ್ಲದ ಕಾಲೋನಿ

ಟಿಬಿಡ್ಯಾಂ, ನಗರದ ಅಮರಾವತಿ, ಕಮಲಾಪುರ ಸೇರಿದಂತೆ ಹಲವು ಕಡೆ ಟಿಬಿಬಿಯಿಂದ ನಿರ್ವಹಣೆಯಾಗುವ ಕಾಲೋನಿಗಳಿಗೆ. ಜಲಾಶಯ ನಿರ್ಮಾಣದ ವೇಳೆ ನಿರ್ಮಾಣ ಮಾಡಲಾದ 1150ಕ್ಕೂ ಅಧಿಕ ನೀವೆಶನಗಳು ಈ ವರೆಗೆ ದುರಸ್ತಿ ಕಾರ್ಯ ನಡೆದಿಲ್ಲ. ನಿರ್ವಹಣೆ ಕೂಡ ಆಗುತ್ತಿಲ್ಲ. ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಅಮಾರಾವತಿಯಲ್ಲಿನ ಕ್ವಾಟರ್ಸ್ನಲ್ಲಿ ವಿದ್ಯುತ್ ಬಿಲ್ ಕಟ್ಟಿಲ್ಲ ವೆಂದು ಕರೆಂಟ್ ತಗೆದಿದ್ದಾರೆ. ಇದರಿಂದ ಕಾಲೋನಿಗೆ ನೀರು ಕೂಡ ಬರುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.

ಟಿಬಿಬಿಯಲ್ಲಿ ನೌಕರಿ ಮಾಡುವ ಸಿಬ್ಬಂದಿಗೆ ಪ್ರತಿ ತಿಂಗಳು ವೇತನವಾಗುತ್ತಿಲ್ಲ. ನಿವೃತ್ತಿದಾರರಿಗೆ ಪಿಂಚಣಿ ಆಗುತ್ತಿಲ್ಲ. ಇತ್ತ ಟಿಎ ಬಿಲ್ ಕೈಯಿಂದ ಹಾಕಬೇಕು. ಕಾಲೂನಿಗಳ ನಿರ್ವಹಣೆ ಆಗುತ್ತಿಲ್ಲ. ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟಕ್ಕೆ ಸಿದ್ದರಿದ್ದೇವೆ. ಕೆ.ಶ್ರೀನಿವಾಸಲು, ಅಧ್ಯಕ್ಷ, ಟಿಬಿಬಿ ವರ್ಕ್ಚಾರ್ಜ್ಡ್ ಎಂಪ್ಲಾಯೀಸ್ ಅಸೋಸಿಯೇಷನ್, ಹೊಸಪೇಟೆ ಟಿಬಿಬಿಯಲ್ಲಿ ಸಿ ಮತ್ತು ಡಿ ಗೃಪ್ ನೌಕರರ ಪರಿಸ್ಥಿತಿ ಹೀನಾಯವಾಗಿ. ಪ್ರತಿ ತಿಂಗಳು ವೇತನದ ಆಧಾರ ಮೇಲೆ ಕುಟುಂಬ ನಿರ್ವಹಣೆ ಆಗುತ್ತದೆ. ಆದರೆ ಟಬಿಬಿಯಲ್ಲಿ ನಿರ್ಲಕ್ಷö್ಯಧೊರಣೆ ತೊರುತ್ತಿದ್ದಾರೆ. ಇನ್ನೂ ಅನುಕಂಪದ ನೌಕರಿ ಕೂಡ ರದ್ದು ಮಾಡಿದೆ. ಟಿಬಿಬಿ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಟಿ.ಕೆ.ಗೋಪಾಲ ಕೃಷ್ಣ, ಪ್ರಧಾನ ಕಾರ್ಯದರ್ಶಿ, ಟಿಬಿಬಿ ವರ್ಕ್ಚಾರ್ಜ್ಡ್ ಎಂಪ್ಲಾಯೀಸ್ ಅಸೋಸಿಯೇಷನ್, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net