

ಹೊಸಪೇಟೆ: ತುಂಗಭದ್ರಾ ಜಲಾಶಯದ ನಿರ್ವಹಣೆಯಲ್ಲಿ ಸಮಸ್ಯೆಯಾಗಿದ್ದು, ಸಣ್ಣ ಸಮಸ್ಯೆ ಈಗ ದೊಡ್ಡದಾಗಿದೆ ಎಂದು ಟಿಬಿಬಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಹೇಳಿದರು.
ನಗರದ ಟಿಬಿಡ್ಯಾಂನ ವೈಕುಂಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ಸರ್ವ ಏಜನ್ಸಿ ಕಳೆದ ವರ್ಷ ಪರಿಶೀಲಿಸಿ ಇನ್ನೂ 70 ವರ್ಷ ಗೇಟ್ ಗಳು ಎನು ಆಗಲ್ಲ ಎಂದು ವರದಿ ನೀಡಿತು. ಪ್ರತಿ ವರ್ಷ ಜಲಾಶಯಕ್ಕೆ ಶೇ.75 ರಷ್ಟು ದುರಸ್ತಿ ಕಾರ್ಯ ನಡೆಯುತ್ತದೆ. 5 ವರ್ಷಕ್ಕೊಮ್ಮೆ ಸರ್ವೇ ನಡೆಯುತ್ತದೆ. ಈ ಬಾರಿಯೂ ನಿರ್ವಹಣೆ ಮಾಡಲಾಗಿದೆ. ಶೇ.50 ರಷ್ಟು ಜಲಾಶಯ ಖಾಲಿಯಾಗಲೇ ಬೇಕು. ಆಗ ಜಲಾಶಯದ ಗೇಟ್ ದುರಸ್ತಿ ಕಾರ್ಯ ನಡೆಯಲಿದೆ. ಇನ್ನೂ ಎರಡು ಮೂರು ದಿನಗಳ ವರೆಗೆ ನೀರು ಹೊರಗೆ ಹೋಗಲಿದೆ. ಜಲಾಶಯ ಪರಿಶೀಲನೆಗೆ ತಜ್ಞರ ತಂಡ ಇನ್ನೂ ಬರಬೇಕಿದೆ. ನಂತರ ದುರಸ್ತಿ ಕಾರ್ಯ ನಡೆದಿದೆ.