

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು ಮತ್ತೆ ಕ್ರಸ್ಟ್ ಗೇಟ್ ಮೂಲಕ ನದಿಗೆ 70 ಸಾವಿರ ಕ್ಯೂಸೆಕ್ ವರೆಗೆ ನೀರು ಹರಿಸಲಾಗುತ್ತದೆ. ನದಿ ಪಾತ್ರದ ಜನರು ಜಾಗೃತರಾಗಬೇಕು ಎಂದು ಟಿಬಿಬಿ ಅಧಿಕಾರಿಗಳು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಬೆಳಗ್ಗೆ 8ರ ವರದಿಯಂತೆ 1633 ಅಡಿ ಎತ್ತರದ ಜಲಾಶಯದಲ್ಲಿ 1626 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಸಧ್ಯ 39 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ತುಂಗ ಜಲಾಶಯದಿಂದ 32 ಸಾವಿರ ಕ್ಯೂಸೆಕ್, ಭದ್ರಾ ಜಲಾಶಯದಿಂದ 11 ಸಾವಿರ ಕ್ಯೂಸೆಕ್ ಹಾಗೂ ವರದಾ ನದಿಯಿಂದ 10 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿದೆ. ಆದ್ದರಿಂದ ಮಧ್ಯಾಹ್ನ 12ಕ್ಕೆ ತುಂಗಭದ್ರಾ ಜಲಾಶಯದಿಂದ ನದಿಗೆ 40 ಸಾವಿರದಿಂದ 70 ಸಾವಿರ ಕ್ಯೂಸೆಕ್ ವರಿಗೆ ನೀರು ಹರಿಸಲಾಗುವುದು. ನದಿ ಪಾತ್ರದ ಜನರು ಜಾಗೃತರಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ತುಂಗಭದ್ರಾ ಜಲಾಶಯ ನದಿಗೆ ಅಪಾರ ಪ್ರಮಾಣದ ನೀರು ಹರಿಯುದರಿಂದ ವಿಶ್ವವಿಖ್ಯಾತ ಹಂಪಿಯ ನದಿ ಪಾತ್ರದ ಹಂಪಿಯ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಸ್ನಾನಘಟ್ಟ, ಜನಿವಾರ ಮಂಟಪ, ಚಕ್ರತೀರ್ಥ ಸೇರಿದಂತೆ ಹಲವು ಸ್ಮಾರಕಗಳಿಗೆ ಮತ್ತೆ ಮುಳುಗಡೆಯಾಗಲಿವೆ. ಇನ್ನು ಕಂಪ್ಲಿ ಸೇತುವೆ ಸೇರಿದಂತೆ ಬಳ್ಳಾರಿ, ಕೊಪ್ಪಳ, ರಾಯಚೂರು, ಆಂದ್ರ, ತೆಲಂಗಾಣದ ನದಿ ಪಾತ್ರದ ಕೃಷಿ ಹಾಗೂ ಇತರೆ ಪ್ರದೇಶಗಳು ಜಲಾವೃತ್ತ ಆಗಲಿವೆ.