ಸಮುದಾಯಕ್ಕಾಗಿ ದೇಹ ತ್ಯಾಗಕ್ಕೂ ಸಿದ್ದ

Oplus_131072
Oplus_131072
Published on

ಹೊಸಪೇಟೆ: ಶತಮಾನಗಳಿಂದ ಲಂಬಾಣಿಗರ ವಲಸೆ ಪದ್ದತಿ ಇನ್ನೂ ಬಿಟ್ಟಿಲ್ಲ. ಅತಿ ಕಡು ಬಡತನದಲ್ಲಿ ಜೀವನ ಜಾಗಿಸುತ್ತಿದ್ದಾರೆ. ರಾಜ್ಯ ಸರ್ಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಂಡೂರು ತಾಲೂಕಿನ ಸುಶೀಲನಗರದ ಬಂಜಾರ ಪೀಠದ ಶ್ರೀ ತಿಪ್ಪೇಸ್ವಾಮಿ ಸ್ವಾಮೀಜಿ ಎಂದು ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಸರಿಯಾದ ಜನಗಣತಿ ಮಾಡದೇ ಅಂದಾಜಿನ ಮೇಲೆ ಒಳ ಮೀಸಲಾತಿ ಜಾರಿಗಾಗಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದೆ. ಕಳೆದ ಬಿಜೆಪಿ ಸರ್ಕಾರ ಘೋಷಣೆ ಮಾಡಿದ ಒಳಮೀಸಲಾತಿ ಪ್ರಶ್ನಿಸಿ ಅಂದು ಸಿಎಂ ಸಿದ್ದರಾಮಯ್ಯ ವಿರೋಧಿಸಿದರು. ಆದರೆ, ಈಗ ಮೂರು ಭಾಗಗಳಾಗಿ ಮಾಡಿ ಸಮುದಾಯಗಳಿಗೆ ಮೂರುನಾಮ ಹಾಕಿ ಅನ್ಯಾಯ ಮಾಡಿದ್ದಾರೆ. ಬಂಜಾರ ಸಮಾಜಕ್ಕೆ ನ್ಯಾಯ ದೊರಕಿಸಿಕೊಳ್ಳಲು ಉಪವಾಸ ಸತ್ಯಗ್ರಹ, ದೇಹ ತ್ಯಾಗಕ್ಕೂ ಸಿದ್ದ ನಾನು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net