

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಭಾಷೆಗಾಗಿ ಸ್ಥಾಪನೆಗೊಂಡ ಏಕೈಕ ವಿಶ್ವ ವಿದ್ಯಾಲಯ ಎಂಬ ಹೆಗ್ಗಳಿಕೆಯ ಹಂಪಿ ಕನ್ನಡ ವಿಶ್ವ ವಿದ್ಯಾಲಯ, ತೀವ್ರ ಅನುದಾನದ ಕೊರತೆ ಎದುರಿಸುತ್ತಿದೆ. ಹಲವು ವರ್ಷಗಳಿಂರ ಗುತ್ತಿಗೆ ಆಧರಿತ ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಪಾವತಿಗೂ ಕೈಯೊಡ್ಡುವ ಸ್ಥಿತಿಯಿದೆ. ಅನುದಾನ ಬರುತ್ತಿಲ್ಲ ಎಂದು ಹೊರಗುತ್ತಿಗೆ ವ್ಯವಸ್ಥೆ ವಿವಿ ಸಿಂಡಿಕೇಟ್ ರದ್ದು ಪಡಿಸಿದೆ. ಇದರಿಂದ 47 ಜನ ಸೆಕ್ಯೂರಿಟಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಬೀದಿಗೆ ಬಂದAತಾಗಿದೆ.
ಹೊಸಪೇಟೆ, ಕಮಲಾಪುರ ಸೇರಿ ಸುತ್ತಲಿನ ಗ್ರಾಮಗಳ ತಾತ್ಕಾಲಿಕ, ಗುತ್ತಿಗೆ ನೂರಾರು ನೌಕರರು ಕನ್ನಡ ವಿವಿಯಲ್ಲಿ ಕಳೆದ 25ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅನುದಾನ ಕೊರತೆ ಎದುರಿಸುತ್ತಿರುವ ವಿವಿ ಪ್ರಸ್ತುತ ಗುತ್ತಿಗೆ ನೌಕರರನ್ನು ಹೊರತು ಪಡೆಸಿ, ತಾತ್ಕಾಲಿಕ ಸಿಬ್ಬಂದಿಗಳು ಹಾಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡುವ ವ್ಯವಸ್ಥೆ ಮಾಡುತ್ತಿದೆ. ಆದರೆ, ಗುತ್ತಿಗೆ ನೌಕರರು ಏಳೆಂಟು ತಿಂಗಳಿAದ ವೇತನವಿಲ್ಲದೆ ಪರದಾಡುವಂತಾಗಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ವೇತನ ಪಾವತಿಯಾಗದಿರುವುದು ನೌಕರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೂ ಮೇಲಾಗಿ ಅನುದಾನ ಕೊರತೆ ನೆಪವೊಡ್ಡುವ ಕನ್ನಡ ವಿವಿಯ ಸಿಂಡಿಕೇಟ್ ಮಂಡಳಿ, ಗುತ್ತಿಗೆ ವ್ಯವಸ್ಥೆ ರದ್ದು ಪಡಿಸಿದೆ. ಇದರಿಂದ 47 ಗುತ್ತಿಗೆ ಸಿಬ್ಬಂದಿಗಳಿಗೆ ಮನೆಗೆ ಹೋಗುವಂತಾಗಿದೆ. ವಿವಿಯಲ್ಲಿ ಅನುದಾನ ಇಲ್ಲವೆಂದು ಗುತ್ತಿಗೆ ರದ್ದು ಪಡಿಸಲಾಗಿದೆ. ಆದ್ದರಿಂದ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡ ನಿಮ್ಮನ್ನು ಬಿಡುಗಡೆ ಮಾಡಲಾಗುತ್ತಿದೆ. ಅಕ್ಟೋಬರ್ ಕೊನೆಯ ತಿಂಗಳಾಗಿದೆ ಎಂದು ಗುತ್ತಿಗೆ ಕಂಪನಿಯಿAದ ಆದೇಶ ಬಂದಿದೆ. ಮುಂದೆ ನಾವು ಎಲ್ಲಿ ಕೆಲಸ ಹುಡುಕಿಕೊಂಡು ಹೋಗಬೇಕು? ಮಕ್ಕಳ ಭವಿಷ್ಯ ಹೇಗೆ ಕಟ್ಟಬೇಕು? ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ. ಅಂದಾಜು 25 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೆಕ್ಯೂರಿಟಿ ಹಾಗೂ ಸ್ವಚ್ಛತೆಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ದಿಕ್ಕು ತೋಚದಂತಾಗಿದೆ.
ಹAಪಿ ಕನ್ನಡ ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಪ್ರತಿ ವರ್ಷ ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಬಿಡುಗಡೆಯಾಗುತ್ತಿತ್ತು. ಈ ಹಿಂದೆ ಕೊರೊನಾ ನೆಪವೊಡ್ಡಿ ಅನುದಾನ ಕಡಿತ ಮಾಡಲಾಗಿತ್ತು. ಅಂದಿನಿAದ ಇಲ್ಲಿಯ ವರೆಗೆ ಸರ್ಕಾರದಿಂದ ಅನುದಾನ ಬಿಡುಗಡೆಗೆ ವಿವಿ ಕೈ ಚಾಚಬೇಕು. ನೀಡುವ ಅಲ್ಪ ಅನುದಾನವನ್ನು ವಿವಿಯ ಅಭಿವೃದ್ಧಿ ಜತೆಗೆ ಗುತ್ತಿಗೆ, ತಾತ್ಕಾಲಿಕ ಸಿಬ್ಬಂದಿ ವೇತನ ಪಾವತಿ, ನಿರ್ವಹಣೆ ಸೇರಿ ನಾನಾ ಕಾರ್ಯಗಳಿಗೆ ಸರಿದೂಗಿಸಲೂ ಹೆಣಗಾಡುವಂತಾಗಿದೆ. ಈಗ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಸರಿದೂಗಿಸಲು ಸರ್ಕಾರ ಕನ್ನಡ ವಿವಿಗೂ ಅನುದಾನ ನೀಡುತ್ತಿಲ್ಲ. ವಿದ್ಯಾದಾನ ಮಾಡುವ ವಿವಿ ಅನುದಾನಕ್ಕೂ ತಡೆಯಾಗಿದೆ.
ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಜನ್ಮ ತಳೆದಿರುವ ಹಂಪಿ ಕನ್ನಡ ವಿವಿಗೆ ವರ್ಷಕ್ಕೆ ವಿವಿ ನಿರ್ವಹಣೆಗೆ 5 ರಿಂದ 6 ಕೋಟಿ ರೂ. ಅನುದಾನ ಬೇಕು. ಆದರೆ, ವರ್ಷಕ್ಕೆ 1.5 ಯಿಂದ 2 ಕೋಟಿ ರೂ.ವರೆಗೆ ಮಾತ್ರ ಸರ್ಕಾರ ಅನುದಾನ ನೀಡುತ್ತಿದೆ. ಉಳಿದ ಹಣ ಬಾಕಿಯಾಗುತ್ತಿದೆ. ವಿದ್ಯುತ್ ಬಿಲ್ ಕಟ್ಟಲಾಗದೆ ಹಲವು ಭಾರಿ ಜೆಸ್ಕಾಂ ವಿವಿಗೆ ನೋಟಿಸ್ ನೀಡಿದೆ. ಸಧ್ಯ ಇಲ್ಲಿಯವರೆಗೆ ಅಂದಾಜು 3.75 ಕೋಟಿ ರೂ. ಬಾಕಿಯಿದೆ. ಕಳೆದ ಎರಡು ಬಜೆಟ್ ಹಾಗೂ ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುದಾನ ಬರು7ವ ಅನುದಾನದ ನಿರೀಕ್ಷೆ ಹುಸಿಯಾಗಿದೆ. ಕನ್ನಡದ ಏಕೈಕ ವಿವಿಗೆ ಅನುದಾನದ ಕೊರತೆಯಾಗದಂತೆ ಸರ್ಕಾರ ನೋಡಿಕೊಳ್ಳುವುದು ಆದ್ಯ ಕರ್ತವ್ಯವೆ ಎಂದು ಪ್ರಜ್ಞಾವಂತರ ಮಾತಾಗಿದೆ.
ಅನುದಾನ ಮೀಸಲಿರಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ, ತಾತ್ಕಾಲಿಕ ನೌಕರರ ವೇತನ ಪಾವತಿ ವಿಳಂಬವಾಗಿದೆ. ಈ ಬಗ್ಗೆಯೂ ಸರ್ಕಾರದ ಗಮನಸೆಳೆಯಲಾಗಿದೆ. ಸಧ್ಯ ವಿವಿಯ ಸಿಂಡಿಕೇಟ್ ಸಭೆಯಲ್ಲಿ ಗುತ್ತಿಗೆ ರದ್ದುಪಡಿಸಲಾಗಿದೆ. ಡಾ.ಪರಮಶಿವಮೂರ್ತಿ, ಕುಲಪತಿ, ಕನ್ನಡ ವಿವಿ
ಕನ್ನಡ ವಿವಿಯಲ್ಲಿ ಅನುದಾನದ ಕೊರತೆಯಿಂದ ಗುತ್ತಿಗೆ ವ್ಯವಸ್ಥೆ ರದ್ದುಪಡಿಸಲಾಗಿದೆ. ಎಲ್ಲಾ ಸರ್ಕಾರದಲ್ಲಿಯೂ ಯಥಾಸ್ಥಿತಿಯಾಗಿ ಮುಂದುವರೆಯುತ್ತಿದೆ. ಅನುದಾನ ನೀಡುವಂತೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಬಣ್ಣದಮನೆ ಸೋಮಶೇಖರ್, ಸಿಂಡಿಕೇಟ್ ಸದಸ್ಯ, ಕನ್ನಡ ವಿವಿ