ಹೊಸಪೇಟೆ ನಗರಸಭೆ ಕೈಗೆ ಮುಖಭಂಗ

IMG_20240912_161507
Published on

ಹೊಸಪೇಟೆ : ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ.

ಅಧ್ಯಕ್ಷ ಸ್ಥಾನ ಬಿಸಿಎ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 5ನೇ ವಾರ್ಡ್ ನ ಬಿಜೆಪಿಯ ರೂಪೇಶ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡಿದರು. 19 ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡಿದ್ದ ಅಸ್ಲಾಂ ಮಾಳಗಿ 17 ಮತಗಳು ಪಡೆದಿದ್ದಾರೆ ಸೋಲು ಅನುಭವಿಸಿದರು. ಇನ್ನೂ 29 ನೇ ವಾರ್ಡ್ ನ ಬಿಜೆಪಿ ಸದಸ್ಯ ರಮೇಶ್ ಗುಪ್ತಾಗೆ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡಿದ್ದರು, 19 ಮತಗಳಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಎಚ್‌‌.ರಾಘವೇಂದ್ರಗೆ 17 ಮತಗಳಿಂದ ಪರಾಭವಗೊಂಡರು.

ಕಾಂಗ್ರೆಸ್ ಸಂಸದ ತುಕಾರಾಂ, ಶಾಸಕ ಗವಿಯಪ್ಪ ಬಂದರು ನಡೆಯಲಿಲ್ಲ ಆಟ. ಕಾಂಗ್ರೆಸ್‌ನ 20ನೇ ವಾರ್ಡ್ ಸದಸ್ಯ ಕೆ.ಮಹೇಶ್ ಗೈರುಹಾಜರಾದ್ದರು. ಇನ್ನೂ 9 ಜನ ಪಕ್ಷೇತರರು ರಿಂದ ಬಿಜೆಪಿ ಮತ್ತೆ 2ನೇ ಅವದಿಯ ಅಧಿಕಾರಿದ ಗದ್ದುಗೆ ಹಿಡಿದಿದೆ.

ಕಾಂಗ್ರೆಸ್ ನ ಎಲ್ಲ ಸದಸ್ಯರು ನಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಸದಸ್ಯ ಕಾರ ಪುಡಿ ಮಹೇಶ್ ಗೈರಾದರು. ಶಾಸಕರು ಹಾಗೂ ನಾವು ಪ್ರಯತ್ನ ಮಾಡಿದ್ದೇವೆ. 9 ಜನ ಪಕ್ಷೇತರರು ಬಿಜೆಪಿಗೆ ಬೆಂಬಲಿಸಿದ್ದಾರೆ. ಆದ್ದರಿಂದ ನಗರಸಭೆ ಕೈ ಬಿಟ್ಟು ಹೋಗಿದೆ. ಈ.ತುಕಾರಾಮ್, ಸಂಸದ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net