ಬಹುಕೋಟಿ ವಂಚನೆ ಹೊಸಪೇಟೆಯಲ್ಲಿ ಮತ್ತೊಂದು ಪ್ರಕರಣ

PSX_20250213_212544
Published on

ಹೊಸಪೇಟೆ : ಮನಿ ಡಬ್ಬಿಂಗ್ ಹಾಗೂ ಸಬ್ಸಿಡಿ ಲೋನ್ ಕೊಡಿಸುತ್ತೇನೆಂದು ನಂಬಿಸಿ ಬಹುಕೊಟಿ ರೂ. ವಂಚನೆ ಮಾಡಿದ್ದಾರೆ ಎಂದು ನಗರದ ಪ್ರಿಯಾಂಕ ಮಹಿಳಾ ಪತ್ತಿನ ಸಹಕಾರ ಸಂಘದ ಐದು ಜನರ ವಿರುದ್ಧ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಗರದ ಶೋಭಾ ಎಂಬುವರು ಬುಧವಾರ ದೂರು ನೀಡಿದ್ದಾರೆ. ಮೂರು ಜನರನ್ನು ಪೊಲೀಸರು ಬಂದಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಂಘದ ಅಧ್ಯಕ್ಷೆ ಪ್ರಿಯಾಂಕ ಜೈನ್(33), ಫೀಲ್ಡ್ ವರ್ಕರ್ ವೆಂಕಟೇಶಲು (45), ಕಾರ್ಯದರ್ಶಿ ಎಚ್.ಎಂ.ಅಂದಾನಯ್ಯ (29) ಆರೋಪಿಗಳನ್ನು ಗರುವಾರ ಬಂದಿಸಿದ್ದಾರೆ. ಇನ್ನು ವಸ್ತಿಮಲ್ ಜೈನ್, ಬಳ್ಳಾರಿ ನಿವಾಸಿ ರಹಮಾನ್ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಪ್ರಿಯಾಂಕ ಮಹಿಳಾ ಪತ್ತಿನ ಸಹಕಾರ ಸಂಘದಿಂದ ಹಂತ ಹಂತವಾಗಿ ಹಣವನ್ನು ಕಟ್ಟಿಸಿಕೊಂಡು, ಎರಡು ತಿಂಗಳ ನಂತರ ಸರ್ಕಾರದಿಂದ ಸಬ್ಸಿಡಿ ಲೋನ್ ಕೊಡಿಸುತ್ತೇವೆ ಹಾಗೂ ಮತ್ತೊಂದು ಸ್ಟೀಮ್‌ನಲ್ಲಿ ಕಟ್ಟಿದ ಹಣಕ್ಕೆ 70 ದಿನಗಳಲ್ಲಿ ಹಣವನ್ನು ದ್ವಿಗುಣ ಮಾಡಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ನಗರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಅಂದಾಜು 300 ಜನರಿಂದ 3 ಕೋಟಿ ರೂ. ವಂಚನೆ ಮಾಡಿದ್ದಾರೆಂದು ಎಂದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net