ಮೊಹರಂಗೆ ಗಗನಕ್ಕೇರಿದ ಹೂವಿನ ಬೆಲೆ

news
ಹೊಸಪೇಟೆಯಲ್ಲಿ ಹೂವಿನ ಮಾರುಕಟ್ಟೆ
Published on
  • ಬೆಳೆಗಾರರಿಗೆ ಸಿಗುತ್ತಿಲ್ಲ ಬೆವರಿನ ಫಲ
  • ಮಧ್ಯವರ್ತಿಗಳು-ಮಾರಾಟಗಾರರಿಗೆ ಲಾಭ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಹಿಂದೂ-ಮುಸ್ಲಿA ಬಾಂಧವರ ಭಾವೈಕ್ಯತೆಯನ್ನು ಬಿಂಬಿಸುವ ಮೊಹರಂ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಹೂಗಳ ಬೆಲೆ ಗಗನಕ್ಕೇರಿದೆ. ಮಧ್ಯವರ್ತಿಗಳು-ಮಾರಾಟಗಾರರಿಗೆ ಇದರ ಲಾಭ ಪಡೆಯುತ್ತಿದ್ದು, ಹೂ ಬೆಳೆದ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೋರೆಯುತತಿಲ್ಲ.

ಕಳೆದ ವರ್ಷ ಮಳೆಯಿಲ್ಲದೇ ಹೂವಿನ ಉಳುವರಿ ಕುಸಿದಿತ್ತು. ಈ ಬಾರಿ ಉತ್ತಮ ಮಳೆಯಾಗಿದೆ. ಫಸಲಿನಲ್ಲಿ ಕೂಡ ಭಾರಿ ಇಳುವರಿ ಬಂದಿದೆ. ಒಂದು ಎಕರೆಗೆ ದಿನಕ್ಕೆ 30 ರಿಂದ 40 ಕೆಜಿ ಬರುತ್ತಿದೆ. ಪ್ರತಿ ಮೊಹರಂ ನಲ್ಲಿ ಹೂವಿನ ಬೆಲೆ ಗಗನಕ್ಕೆ ಏರುತ್ತದೆ. ಈ ಸಲ ಹಬ್ಬಕ್ಕೆ ನಮ್ಮ ಹೂವಿನ ಬೆಲೆ ಕೂಡ ಹೆಚ್ಚಾಗುತ್ತದೆ ಎಂಬ ಆಶಾಭಾವದಲ್ಲಿದ್ದ ರೈತರಿಗೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹೂವಿನ ಬೆಲೆ ಭಾರಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ರೈತನೊರ್ವ ರಸ್ತೆಗೆ ಮಲ್ಲಿಗೆ ಹೊಸವನ್ನು ಹಾಕಿ ಉಚಿತವಾಗಿ ವಿತರಣೆ ಮಾಡಿದ ಘಟನೆ ನಡೆಯಿತು. ಹೂ ಬೆಳೆಗಾರರಿಗೆ ನಷ್ಟವಾಗುವ ಪರಿಸ್ಥಿತಿ ಇದ್ದರೂ, ಮಾರುಕಟ್ಟೆಯಲ್ಲಿ ಮಾತ್ರ ಹೂಗಳು ದರ ಕಾಯ್ದುಕೊಳ್ಳುತ್ತಿದೆ. ರೈತರಿಗೆ ಬೆಲೆ ಸಿಗದಿದ್ದರೂ ಮಧ್ಯವರ್ತಿಗಳಿಗೆ ಲಾಭವಾಗುವಂತಹ ದರ ಮಾರುಕಟ್ಟೆಯಲ್ಲಿ ನಿಗದಿಯಾಗುತ್ತದೆ. ರೈತರಿಂದ ಸಣ್ಣ ಮಲ್ಲಿಗೆ 300 ರೂ.ಯಿಂದ 250 ರೂ. ಖರೀದಿ ಮಾಡಿದರೆ, ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ 1000 ರೂ.ಯಿಂದ 1200 ರೂ.ಗೆ ಮಾರಾಟವಾಗುತ್ತಿದೆ. ಆದರೆ, ರೈತರಿಗೆ ಮಾತ್ರ ಬಿಡಿಗಾಸು ಸಿಗುತ್ತಿದೆ.

ರೈತರಿಗಿಲ್ಲ ಲಾಭ

ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ಕೈಸೇರುವ ಹೂಗಳ ದರ ಹಾಗೂ ರೈತನಿಗೆ ಸಿಗುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮಧ್ಯವರ್ತಿಗಳು ಕಡಿಮೆ ದರದಲ್ಲಿ ಹೂಗಳನ್ನು ಖರೀದಿಸಿ ಹೆಚ್ಚು ಬೆಲೆಗೆ ಮಾರುತ್ತಾರೆ. ಮಾರುಕಟ್ಟೆಯಲ್ಲಿ ವ್ಯಾಪರಸ್ತರಿಗೆ 200 ರೂ.ಇದ್ದ ಕಾಕಡ ಹೂವು 1200 ರೂ. ಭಾರಿ ಏರಿಕೆಯಾಗಿದೆ. ಗ್ರಾಹಕರಿಗೆ 70 ರೂ. ಇದ್ದ ಒಂದು ಮಾರು ಕಾಕಡ ಹೂವು, ಸದ್ಯ 300 ರೂಗೆ ಏರಿಕೆಯಾಗಿದೆ. 40 ರೂ ಬೆಲೆ ಸಾಮಾನ್ಯ ಹಾರ, 200 ರೂ. ಆಗಿದೆ. ಇನ್ನೂ ವ್ಯಾಪರಸ್ತರಿಗೆ ಸಣ್ಣ ಮಲ್ಲಿಗೆ 800 ರಿಂದ 1100 ರೂ. ಇದೆ. ಕನಕಾಂಬರ ಕೆಜಿಗೆ 800-1000 ದರವಿದೆ. ಇನ್ನೂ ಸುಗಂಧರಾಜ 80 ರಿಂದ 100 ರೂ. ಬೆಲೆ ಇದೆ. ಇದಲ್ಲದೆ ಬಹುತೇಕ ಎಲ್ಲಾ ಹೂಗಳ ದರ ಹೆಚ್ಚಳದಲ್ಲಿಯೇ ಮಾರಾಟವಾಗುತ್ತಿದೆ. ಆದರೆ, ಕಳೆದ ಶನಿವಾರ ಮಾರುಕಟ್ಟೆಯಲ್ಲಿ ರೈತರಿಂದ 80 ರೂ. ಬೆಲೆಯಿತ್ತು. ಹೂವು ಬಿಡಿಸುವ ಕಾರ್ಮಿಕರಿಗೆ ಕೆಜಿಗೆ 150 ರೂ. ಕೊಡಬೇಕು. ಮೊಹರಂ ಹಿನ್ನೆಲೆಯಲ್ಲಿ ಸದ್ಯ 250 ರಿಂದ 350 ರೂ.ಗೆ ದರ ಕಾಯ್ದುಕೊಂಡಿದೆ. ಇನ್ನುಳಿದ ಎಲ್ಲಾ ಹೂಗಳ ದರ ಕೂಡ ರೈತನಿಗೆ ಲಾಭದಾಯಕವಾಗಿಲ್ಲ.

ಭಾರಿ ಬೇಡಿಕೆ

ಮೊಹರಂ ನಿಮಿತ್ತ ಪೀರಲ ದೇವರುಗಳಿಗೆ ಹೂವಿನ ಹಾರಗಳಿಂದ ಅಲಂಕಾರ ಮಾಡಲಾಗುತ್ತಿದ್ದು, ಪರಿಣಾಮ ಹೂ ಗಳ ಬೆಲೆ ಏರಿಕೆಯಾಗಿದೆ. ಹಾಗೆಯೇ ದಿನ ನಿತ್ಯದ ವಸ್ತುಗಳು ಗಗನಕ್ಕೇರಿದ್ದು, ಕಿರಾಣಿ ಅಂಗಡಿಗಳಲ್ಲಿ ಸಕ್ಕರೆ, ಗೋಧಿ, ಸೇರಿದಂತೆ ಇನ್ನಿತರ ವಸ್ತುಗಳು ಗಗನಕ್ಕೇರಿದೆ. ಇದರಿಂದ ಸಾರ್ವಜನಿಕರು ಹಬ್ಬ ಮಾಡಲು ಸಂಕಷ್ಟವಾಗಿದ್ದು, ದರ ಹೆಚ್ಚಿದ ಬೆಲೆಯಲ್ಲೂ ಬಡವರು ಹಬ್ಬ ಮಾಡಲು ಸಜ್ಜಾಗುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ದಾವಣಗೆರೆ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆ ಸೇರಿದಂತೆ ನಾನಾ ಜಿಲ್ಲೆಗಳಿಂದ ನಾನಾ ಹೂಗಳು ಮಾರುಕಟ್ಟೆಗೆ ಬರುತ್ತಿದ್ದು, ವ್ಯಾಪಾರ ಜೋರಾಗಿದೆ.

ಈ ಭಾರಿ ಹೂವಿನ ಇಳುವರಿ ಬಂದಿದೆ. ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗುತ್ತದೆ ಎಂಬದ ಕನಸು ಭಗ್ನವಾಗಿದೆ. ಕಳೆದ ಶನಿವಾರ 80 ರೂ. ಕೆಜಿಗೆ ಧರ ಇಳಿದಿತ್ತು. ಮಂಗಳವಾರ ಕೊಂಚ ಏರಿಕೆ ಕಂಡಿದರೂ, ಕಳೆದ ಬಾರಿ ಧರ ಸಿಕ್ಕಿಲ್ಲ. ಸಾಮಾನ್ಯ ಧರ ಸಿಕ್ಕಿದೆ. - ಜೆ.ಎಂ.ರಾಜೇಂದ್ರ ಸ್ವಾಮಿ, ರೈತ, ಪಿಂಜಾರ್ ಹೆಗ್ಡಾಳ್, ಹಗರಿಬೊಮ್ಮನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net