ಸಿಲಿಂಡರ್ ಅವಘಡ ಸ್ಥಳಕ್ಕೆ ಸಚಿವ ಜಮೀರ್ ಭೇಟಿ

IMG-20250927-WA0057
Published on

ಹೊಸಪೇಟೆ: ತಾಲೂಕಿನ ಗಾದಿಗನೂರಿನ ಅಡುಗೆ ಸಿಲಿಂಡರ್ ಅವಘಡ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಿಲಿಂಡರ್ ಸ್ಪೋಟದಲ್ಲಿ ಜಗತ್ತು ನೋಡದ ಎರಡು ವರ್ಷದ ಮಗು ಶೇ.70 ಗಾಯವಾಗಿದೆ. ಆ ಮಗು ತಂದೆನೂ ಜೈಲಲ್ಲಿದ್ದಾರೆಂತೆ. ಕೆಲ ಗಾಯಳುಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಿದೆ. ಬೆಂಗಳೂರಿನಿಂದ ವೈದ್ಯರು ಬರುತ್ತಿದ್ದಾರೆ. ಕೆಲವರನ್ನು ಬೇರೆ, ಬೇರೆ ಕಡೆ, ಇನ್ನು ಕೆಲವರಿಗೆ ಇಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ಕಳಿಸೋದೋ ತೀರ್ಮಾನ ಮಾಡಲಾಗುತ್ತದೆ. ಚಿಕಿತ್ಸೆ ಸರ್ಕಾರದಿಂದಲೇ ಭರಿಸಲಾಗುತ್ತದೆ. ಘಟನೆ ವರದಿ ನೀಡಿದ ನಂತರ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಶಾಸಕ ಎನ್‌.ಟಿ.ಶ್ರೀನಿವಾಸ್, ಹುಡಾ ಅಧ್ಯಕ್ಷ ಎಚ್‌.ಎನ್.ಇಮಾಮ್ ನಿಯಾಜಿ ಇತರರಿದ್ದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಎಸ್ಪಿ ಜಾಹ್ನವಿ, ಎಎಸ್ಪಿ‌ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net