ಜೆನ್ನಿ ಮಿಲ್ಕ್ ವಂಚನೆ ಮತ್ತೆ ಇಬ್ಬರ ಬಂಧನ

16 MANJU 06
Published on

ಹೊಸಪೇಟೆ: ಜೆನ್ನಿ ಮಿಲ್ಕ್ (ಕತ್ತೆ ಹಾಲು) ಮಾರಾಟ ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ ಸ್ಥಳೀಯ ಪಟ್ಟಣ ಠಾಣೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಪಾವಗಡದಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.

ನಗರದ ಪಟ್ಟಣಠಾಣೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಂಧ್ರಪ್ರದೇಶದ ನೆಲ್ಲೂರಿನ ಎನ್.ಹರ್ಷವರ್ಧನರಾಜು (40) ಮತ್ತು ಮೂಲ ಆಂಧ್ರಪ್ರದೇಶದ ನಿವಾಸಿ ಸದ್ಯ ನಂಜನಗೂಡಿನಲ್ಲಿ ವಾಸವಾಗಿರುವ ಜಿ.ಯೋಗಾನಂದ ರೆಡ್ಡಿ (34) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿತರಿAದ 10 ಲಕ್ಷ ರು. ಮೌಲ್ಯದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಜೆನ್ನಿ ಮಿಲ್ಕ್ ಕಂಪನಿಗೆ ಸೇರಿದ 36 ಲಕ್ಷ ರೂ.ಗಳನ್ನು ಇವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ಅಕೌಂಟ್‌ಗಳನ್ನು ಪೊಲೀಸರು ಪ್ರೀಜ್ ಮಾಡಿಸಿದ್ದಾರೆ.

ಜೆನ್ನಿ ಮಿಲ್ಕ್ ಕಂಪನಿ ರೈತರಿಂದ ತಲಾ ಮೂರು ಲಕ್ಷ ರೂ.. ಪಡೆದು ತಲಾ ಮೂರು ಕತ್ತೆಗಳನ್ನು ನೀಡಿತ್ತು. ಜತೆಗೆ ರೈತರಿಗೆ ತಲಾ ಲೀಟರ್‌ಗೆ 2,350 ರು.ನಂತೆ ಖರೀದಿ ಮಾಡುವ ಭರವಸೆ ನೀಡಿ, ವ್ಯವಹಾರ ಮಾಡುತ್ತಿತ್ತು. ಪಟ್ಟಣ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡು ಅ.7ರಂದು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈಗ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ಪ್ರಗತಿ ಹಂತದಲ್ಲಿದ್ದು, ಈಗಾಗಲೇ ರಾಜ್ಯ, ಆಂಧ್ರಪ್ರದೇಶ ಸೇರಿದಂತೆ ಉತ್ತರ ಭಾರತಗಳ ವಿವಿಧ ಬ್ಯಾಂಕ್‌ಗಳಲ್ಲಿ 33 ಖಾತೆಗಳನ್ನು ಪ್ರೀಜ್ ಮಾಡಿಸಲಾಗಿದೆ. ಈ ಪ್ರಕರಣದಲ್ಲಿ 10 ಕೋಟಿ ರೂ.. ಹೆಚ್ಚಿಗೆ ವಂಚನೆ ಆಗಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಕೋರಿ ಮೇಲಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಈ ಪ್ರಕರಣದಲ್ಲಿ 300ಕ್ಕೂ ಅಧಿಕ ಜನರು ದೂರು ಸಲ್ಲಿಸಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಟಿ. ಮಂಜುನಾಥ ಮಾರ್ಗದರ್ಶನದಲ್ಲಿ ಪಿಐಗಳಾದ ಲಖನ್ ಮಸಗುಪ್ಪಿ, ಅಶ್ವತ್ಥ ನಾರಾಯಣಸ್ವಾಮಿ, ಪಿಎಸ್‌ಐ ಕೆ. ರಾಜಶೇಖರ್, ಮುಖ್ಯಪೇದೆಗಳಾದ ಬಿ. ರಾಘವೇಂದ್ರ, ಜಾವೇದ್ ಅಶ್ರಫ್, ಲಿಂಗರಾಜ್, ಕೆ. ಸಿದ್ದಪ್ಪ, ಕೆ.ಶ್ರೀರಾಮರೆಡ್ಡಿ, ಪೇದೆಗಳಾದ ಪರಶು ನಾಯ್ಕ, ಜೆ. ಕೊಟ್ರೇಶ್, ಜೆ. ಫಕ್ಕೀರಪ್ಪ, ಕೊಟ್ರೇಶ್, ಮಲಕಾಜಪ್ಪ, ಶಿವು, ಮಹೇಶ್ ಜೋಳದ್ ಭಾಗವಹಿಸಿದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net