ಜೆನ್ನಿ ಮಿಲ್ಕ್ ವಂಚನೆ ಆರೋಪಿಗಳ ಬಂಧನ

07 MANJU 04
Published on

ಹೊಸಪೇಟೆ: ಕತ್ತೆ ಹಾಲಿನ (ಜೆನ್ನಿ ಮಿಲ್ಕ ಕಂಪನಿ) ಹೆಸರಲ್ಲಿ ಕೋಟಿ- ಕೋಟಿ ವಂಚನೆ ಪ್ರಕರಣದ ಮೂವರು ಆರೋಪಿಗಳನ್ನು ಬಂದಿಸಲಾಗಿದೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.

ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಮಾತನಾಡಿದರು. ಜಿನ್ನಿ ಮಿಲ್ಕ್ ಕಂಪನಿಯ ಎಂಡಿ ಆಂದ್ರ ಪ್ರದೇಶದ ನೆಲ್ಲೂರಿನ ನೂತಲಪಾಟಿ ಮುರುಳಿ( 43), ವ್ಯವಸ್ಥಾಪಕ ಕಡಪದ ಉಮಾಶಂಕರ್ ರೆಡ್ಡಿ( 33) , ಕಡಪಾದ ಸಯ್ಯದ್ ಮೊಹಮ್ಮದ್ ಗೌಸ್( 27) ಬಂಧಿತ ಆರೋಪಿಗಳು. ಸೋಮವಾರ ನಗರದಲ್ಲಿ ಬಂಧಿಸಲಾಗಿದೆ ಎಂದರು.

ಕಳೆದ ಮೇ ತಿಂಗಳಿAದ ಜಿನ್ನಿ ಮಿಲ್ಕ್ ಕಂಪನಿಯ ಕಚೇರಿ ಪ್ರಾರಂಭ ಮಾಡಿದ್ದಾರೆ. ಹಲವು ಜಿಲ್ಲೆಗಳಿಗೆ ಮಧ್ಯ ಆಗುತ್ತದೆ ಎಂದು ಹೊಸಪೇಟೆಯಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಕಂಪನಿಗೆ ಸೇರಿದ 5 ಬ್ಯಾಂಕ್ ಅಕೌಂಟ್ ಗಳನ್ನು ಫ್ರೀಜ್ ಮಾಡಲಾಗಿದೆ. ನಗರದಲ್ಲಿ ಎರಡು ಅಕೌಂಟ್ ಗಳು, ಆಂದ್ರ ಪ್ರದೇಶದಲ್ಲಿ ಮೂರು ಅಕೌಂಟ್ ಗಳಿವೆ. ಆರೋಪಿಗಳ ಪತ್ತೆಗೆ ಪ್ರತ್ಯೇಕ ಮೂರು ತಂಡಗಳನ್ನು ಮಾಡಲಾಗಿತ್ತು. ಪ್ರಕರಣ ದಾಖಲಾದ ದಿನದಿಂದ ನಮ್ಮ ಪೊಲೀಸರ ನಿರಂತರ ಪ್ರಯತ್ನದಿಂದ ಬಂಧನ ಮಾಡಲಾಗಿದೆ. ಹೆಚ್ಚಿನ ತನಿಖೆಗೆ ಸಿಐಡಿಗೆ ವಹಿಸಲಾಗುತ್ತದೆ ಎಂದರು.

ಎಎಸ್ಪಿ ಸಲೀಂಪಾಷಾ, ಡಿವೈಎಸ್ಪಿ ಮಂಜುನಾಥ್ ತಳವಾರ್, ಸಿಪಿಐ ಅಶ್ವಥ್ ನಾರಾಯಣ ಸೇರಿದಂತೆ ಪೊಲೀಸ್ ಸಿಬ್ಬಂದಿ ಆರೋಪಿಗಳ ಪತ್ತೆಗೆ ಕೆಲಸ ಮಾಡಿದ್ದಾರೆ. ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರಿಗೆ ಸೂಕ್ತ ಬಹುಮಾನ, ಹಿರಿಯ ಅಧಿಕಾರಿಗಳಿಂದ ಗೌರವ ಸಲ್ಲಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net