ಹಂಪಿಗೆ ಸ್ಥಳೀಯರಲ್ಲದೆ ದೇಶ-ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ವಿಜಯನಗರ ಸಾಮ್ರಾಜ್ಯದ ಇತಿಹಾಸ, ಇಲ್ಲಿನ ಪರಿಸರ ಅರಿಯಲು ಬರುವವರು ಮಾರ್ಗದರ್ಶಿಗಳಿಂದ ಮೊರೆ ಹೋಗುತ್ತಾರೆ. ಹಿಂದೆ 80 ಮಾರ್ಗದರ್ಶಿಗಳಿದ್ದ ಹಂಪಿಯಲ್ಲೀಗ 180 ಜನರಿದ್ದಾರೆ. ತಾಲೂಕಿನ ಕಡ್ಡಿರಾಂಪುರ ಕ್ರಾಸ್, ಕಮಲಾಪುರದ ಹಂಪಿ ರಸ್ತೆ, ಹಂಪಿಯ ಸಾಸಿವೆ ಕಾಳು ಗಣಪತಿ, ವಿರೂಪಾಕ್ಷೇಶ್ವರ ದೇಗುಲ, ವಿಜಯವಿಠಲ ದೇಗುಲ ಸೇರಿದಂತೆ ಇತರೆ ಸ್ಮಾರಕಗಳ ಬಳಿ ಪ್ರವಾಸಿಗರನ್ನು ಮಾರ್ಗದರ್ಶಿಗಳು ಕಾಯುತ್ತಿರುತ್ತಾರೆ. ಕೆಲವೊಮ್ಮೆ ಪ್ರವಾಸಿಗರು ಸಿಗದೆ ಬರಿಗೈಯಲ್ಲಿ ಮನೆಗೆ ಹೋಗುತ್ತಾರೆ.