ಕರ್ತವ್ಯ ನಿರಾಕರಿಸಿದ ಇಬ್ಬರು ಶಿಕ್ಷಕಿಯರ ಅಮಾನತು

Published on

ಹೊಸಪೇಟೆ: ಚುನಾವಣಾ ಕರ್ತವ್ಯ ನಿರ್ವಹಿಸಲು ನಿರಾಕರಿಸಿದ ಇಬ್ಬರು ಶಾಲಾ ಶಿಕ್ಷಕಿಯರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್‌.ದಿವಾಕರ್ ಆದೇಶ ಹೊರಡಿಸಿದ್ದಾರೆ.

ಮತಗಟ್ಟೆ 120ರ ಬಿಎಲ್‌ಒ ಆಗಿ ನೇಮಕವಾಗಿದ್ದ ಕೂಡ್ಲಿಗಿ ತಾಲೂಕಿನ ಗುಂಡುಮಣುಗು ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮಮತಾ ಹಾಗೂ ಗುಡೇಗೋಟೆಯ ಮತಗಟ್ಟೆ ಸಂಖ್ಯೆ 119ರ ಬಿಎಲ್‌ಒ ಆಗಿ ನೇಮಕವಾಗಿದ್ದ ಸಿದ್ದಾಪುರ ವಡ್ಡರಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುನಂದಾ ನ್ಯಾಮತಿ ಇಬ್ಬರು ಅಮಾನತಾಗಿದ್ದರೆ.

ಈ ಇಬ್ಬರೂ ಶಿಕ್ಷಕಿಯರನ್ನು ವರ್ಗಾವಣೆಗೊಂಡ ಇತರ ಇಬ್ಬರು ಶಿಕ್ಷಕರ ಜಾಗದಲ್ಲಿ ಬಿಎಲ್ಒ ಆಗಿ ನಿಯುಕ್ತಿಗೊಳಿಸಿ ಆದೇಶ ನೀಡಲಾಗಿತ್ತು. ಆದರೆ ಆದೇಶವನ್ನು ಸ್ವೀಕರಿಸಲು ನಿರಾಕರಿಸಿದ್ದಲ್ಲದೆ, ನೀಡಲಾದ ನೋಟಿಸ್‌ಗೆ ಸಹ ಉತ್ತರ ಕೊಟ್ಟಿಲ್ಲ. ಹೀಗಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಜೀವನಾಧಾರ ಭತ್ತೆ ಪಡೆಯಲು ಅರ್ಹರಾಗಿದ್ದು, ಸಮಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಎಲ್ಲಿಯೂ ಹೊರಗಡೆ ಹೋಗುವಂತಿಲ್ಲ ಎಂದು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net