

ಹೊಸಪೇಟೆ : ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಜೆನ್ನಿ ಮಿಲ್ಕ ಕತ್ತೆ ಮಾರಾಟ ಕಂಪನಿ ವಿರುದ್ಧ ಇಲ್ಲಿಯ ವರೆಗೆ 317 ರೈತರಿಂದ ದೂರು ದಾಖಲಾಗಿದೆ. ತನಿಖಾ ತಂಡ ಕಾರ್ಯ ಪ್ರವೃತ್ತರಾಗಿದ್ದು, ಆಂಧ್ರಪ್ರದೇಶಕ್ಕೆ ತೆರಳಿದ ಎರಡು ತಂಡ ತೆರಳಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕಳೆದ ಮೂರು ದಿನಗಳಲ್ಲಿ 440 ಯುನಿಟ್‌ಗೆ ಅಂದಾಜು 12.35 ಕೋಟಿ ರೂ. ವಂಚನೆಯಾಗಿದೆ ಎಂದು ನಗರದ ಹಂಪಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಜೆನ್ನಿ ಮಿಲ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೂತಲಪತಿ ಮುರಳಿ ಮತ್ತು ಕಂಪನಿ ಮ್ಯಾನೇಜರ್ ಶಂಕರ್ ರೆಡ್ಡಿ ವಿರುದ್ಧ 317 ರೈತರಿಂದ ದೂರು ದಾಖಲಾಗಿದೆ. ಇನ್ನೂ ರಾಜ್ಯದ ನಾನಾ ಕಡೆಯಿಂದ ರೈತರು ಆಗಮಿಸುತ್ತಿದ್ದು, ಭಾನುವಾರ ಕೂಡ ದುರು ದಾಖಲಾಗುವ ಸಾಧ್ಯತೆಯಿದೆ.