

ಹೊಸಪೇಟೆ : ಭಾರಿ ಸದ್ದು ಮಾಡಿದ್ದ ಕತ್ತೆಗಳ ಮಾರಾಟ ಮಾಡುವ ಜೆನ್ನಿ ಮಿಲ್ಕ್ ಕಂಪನಿ ಟ್ರೇಡ್ ಲೈಸನ್ಸ್ ಪಡೆಯದ ಕಾರಣ ಇಲ್ಲಿನ ನಗರಸಭೆ ಅಧಿಕಾರಿಗಳು ತಾತ್ಕಾಲಿಕ ಬೀಗ ಹಾಕಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ರೈತರಿಂದ ಲಕ್ಷ, ಲಕ್ಷ ಹಣ ಪಡೆದು ಕತ್ತೆಗಳನ್ನು ಮಾರಾಟ ಮಾಡ್ತಿದ್ದ ಕಂಪನಿ ವಿರುದ್ಧ ಕೆಲ ರೈತ ಸಂಘಟನೆಗಳು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಮನವಿ ಸಲ್ಲಿಸಿದರು. ಇದರಿಂದ ಎಚ್ಚೇತ ಜಿಲ್ಲಾಧಿಕಾರಿ ಪರಿಶೀಲಿಸುವಂತೆ ಸಂಬAಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಟ್ರೇಡ್ ಲೈಸನ್ಸ್ ಇಲ್ಲದ ಕಾರಣ ಸಧ್ಯ ಬಿಗ ಹಾಕಲಾಗಿದೆ. ಹೆಚ್ಚಿನ ತನಿಖೆ ಸಂಬAಧಿಸಿದ ಇಲಾಖೆಯಿಂದ ನಡೆಯಲಿದೆ ಎಂದು ಪಿಡಿ ಮನೋಹರ್ ಸುದ್ದಿಗಾರರಿಗೆ ತಿಳಿಸಿದರು.
ಕತ್ತೆ ಕಾದು ಪ್ರತಿ ತಿಂಗಳೂ 80 ಸಾವಿರಕ್ಕಿಂತಲೂ ಹೆಚ್ಚಿನ ಹಣ ಆದಾಯಗಳಿಸುತ್ತಿದ್ದಾರೆ. ಜನಮರಳೋ, ಜಾತ್ರೆ ಮರಳೋ ಅನ್ನುವಂತಿದೆ. ಆಂಧ್ರ ಪ್ರದೇಶದ ಅನಂತಪುರ ಮೂಲದ ಜೆನ್ನಿ ಮಿಲ್ಕ್ ಕಂಪನಿ. ಹೊಸಪೇಟೆ ನಗರದ ರಾಜ್ಯದ ಕೇಂದ್ರ ಕಚೇರಿ ಎಂದು ಆರಂಬಿಸಿದೆ. ಒಬ್ಬರಿಗೆ 3 ಲಕ್ಷ ಪಡೆದು 3 ಹೆಣ್ಣು ಕತ್ತೆ, 3 ಕತ್ತೆ ಮರಿ ನೀಡುತಿತ್ತು. ಕತ್ತೆ ಸಾಕಲು ಮುಂದೆ ಬರುವವರಿಂದ ಹಣ ಪಡೆದು ಬಾಂಡ್ ಮೇಲೆ 3 ವರ್ಷದ ಅಗ್ರಿಮೆಂಟ್ ಮಾಡಿಕೊಳುತ್ತದೆ. ಲಕ್ಷ ಗಟ್ಟಲೆ ವ್ಯವಹಾರ ನಡೆಸುವ ಕಂಪನಿಗೆ ಕನಿಷ್ಠ ಒಂದು ಟ್ರೇಡ್ ಲೈಸೆನ್ಸ್ ಪಡೆಲು ಆಗಲ್ವ? ಜಿಲ್ಲಾಧಿಕಾರಿ ಸೂಚನೆ ಮೆರೆಗೆ ನಗರಸಭೆ ಶಾಕ್ ನೀಡಿ ಬೀಗ ಹಾಕಿ ಮುದ್ರೆ ಜಡಿದಿದೆ. ಇದರಿಂದ ಖರೀದಿ ಮಾಡಿದ ರೈತರಿಗೆ ಬೆಚ್ಚಿ ಬೀಳುವಂತೆ ಮಾಡಿದೆ.
ಟ್ರೇಡ್ ಲೈಸನ್ಸ್ ಇಲ್ಲಾ, ಪರಿಶೀಲನೆ ನಡೆಯುತ್ತಿದೆ ಅಂತಿದ್ದ ವಿಜಯನಗರ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಿ ಎಂದು ರೈತರಿಗೆ ಮನವಿ ಕೂಡ ಮಾಡಿತ್ತು. ಕತ್ತೆ ಸಾಕಾಣಿಕೆ ಬ್ಯುಸಿನೆಸ್ ಮಾತ್ರ ಸಾಕಷ್ಟು ಸದ್ದು ಮಾಡಿತ್ತು. ಜನಮರಳೋ ಜಾತ್ರೆ ಮರಳೋ ಎನ್ನುವಂತಾಗಿದ್ದ ಪರಿಸ್ಥಿತಿಗೆ ಸದ್ಯ ಬ್ರೇಕ್ ಬಿದ್ದಿದ್ದು, ಲಕ್ಷ ಲಕ್ಷ ಹಣ ಕೊಟ್ಟ ರೈತರ ಹಣ ವಾಪಾಸ್ ಬರುತ್ತಾ, ಜಿಲ್ಲಾಡಳಿತ ಈ ಬಗ್ಗೆ ಗಂಭೀರ ಯೋಚನೆ ಮಾಡಬೇಕಿದೆ.
ಯಾವುದೇ ಕಂಪನಿಗಳು ವ್ಯವಹರಿಸಬೇಕು ಎಂದರೆ ಟ್ರೇಡ್ ಲೈಸನ್ಸ್ ಮುಖ್ಯ. ಆದರೆ ಜೆನ್ನಿ ಮಿಲ್ಕ್ ಕಂಪನಿ ಟ್ರೇಡ್ ಲೈಸನ್ಸ್ ಪಡೆಯದ ಕಾರಣ ಬೀಗ ಹಾಕಲಾಗಿದೆ. ಟ್ರೇಡ್ ಲೈಸನ್ಸ್ಗೆ ಅನುಮತಿ ಕೇಳಿದರೆ, ದಾಖಲಾತಿ ಪರಿಶೀಲಿಸಿ ನೀಡಲಾಗುತ್ತದೆ. ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ