ಡಿಕೆಶಿ ಆಟ ಆಡಿಸೋ ಚಾಣಕ್ಯ: ಆರ್.ಅಶೋಕ್

R Ashok
Published on

ಹೊಸಪೇಟೆ: ಡಿಸಿಎಂ ಡಿ.ಕೆ.ಶಿವಕುಮಾರ್ ಆಡೋ ಹುಡುಗಲ್ಲ. ಎಚ್ಚರಿಕೆಯಿಂದ ಕೆಲಸ ಮಾಡೋ ಚಾಣಕ್ಯ, ಬುದ್ದಿವಂತ ಎಂದು ವಿಪಕ್ಷ ನಾಯಕ ಆರ್.ಆಶೋಕ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್ಚರಿಕೆ ಕೊಡೋರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ಸಮಾಧಾನ ಮಾಡೋರಿಗೆ ಸಮಾಧಾನ ಮಾಡುತ್ತಿದ್ದಾರೆ. ಚದುರಂಗದಾಟದ ಆಟದ ಚಾಣಕ್ಯ. ನವೆಂಬರ್ ಕ್ರಾಂತಿಯಾಗುತ್ತದೆ ನೀವೆ ನೋಡಿ. ಹೀಗಾದರೂ ಈ ದರಿದ್ರ ಸರ್ಕಾರ ತೊಲಗಲಿ ಎಂದು ಹಿಡಿ ಶಾಪ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net