

ಹೊಸಪೇಟೆ: ಟಿಬಿಡ್ಯಾಂ ದುರಂತ ನಡೆದು ವರ್ಷ ಕಳೆದರು, ರಾಜ್ಯ ಸರ್ಕಾರ ಇತ್ತ ಗಮನ ಹರಿಸಿಲ್ಲ. ಈ ಭಾಗದ ರೈತರ ಕಣ್ಣೀರ ಮೇಲೆ ಸಿಎಂ ರಾಜಕೀಯ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ತುಂಗಭದ್ರಾ ಜಲಾಶಯಕ್ಕೆ ಸೋಮವಾರ ಬೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ. ಇದರಿಂದಾಗಿ ರಾಜ್ಯ ಕಾಂಗ್ರೆಸ್ ನಾಯಕರೆಲ್ಲರು ಡೆಲ್ಲಿ, ಬಿಹಾರ ಕಡೆ ಪ್ರವಾಸ ಬೆಳೆಸಿದ್ದಾರೆ. ಆದ್ದರಿಂದ ಟಿಬಿಡ್ಯಾಂ ಗೇಟ್ ಅಳವಡಿಕೆ ಮಾಡದೇ ನವೆಂಬರ್ ಕ್ರಾಂತಿಯಲ್ಲಿ ಎಲ್ಲರು ಬ್ಯುಸಿಯಾಗಿದ್ದಾರೆ. ರೈತರ ಜಮೀನುಗಳಿಗೆ ಹರಿಬೇಕಾಗಿದ್ದ 188 ಟಿಎಂಸಿ ನೀರು ಆಂಧ್ರಕ್ಕೆ ಹರಿದು ಹೋಗಿದೆ ಎಂದು ಆರೋಪಿಸಿದರು.
ಎಲ್ಲ ಗೇಟ್ ಬದಲಾವಣೆಗೆ 52 ಕೋಟಿ ಹಣ ಬಿಡುಗಡೆ ಮಾಡಿದೆ. ಟಿಬಿ ಡ್ಯಾಂ ಗೇಟ್ ಬದಲಾವಣೆಗೆ ಕೇಂದ್ರ ಸರ್ಕಾರ ಸ್ಪಂದಿಸ್ತಿಲ್ಲ ಎಂಬ ಶಿವರಾಜ್ ತಂಗಡಗಿ ಹೇಳಿಕೆ ವಿಚಾರ ಉತ್ತರಿಸಿದ ಆ.ಅಶೋಕ್, ಸರಿಯಾದ ಸಮಯಕ್ಕೆ ಕೆಲಸ ಮಾಡಿದಿದ್ದರೆ ರಾಜ್ಯ ಸರ್ಕಾರ ನಮ್ಮ ಸಾಧನೆ ಎಂದು ಪ್ರಚಾರ ಮಾಡಿಕೊಳ್ಳುತ್ತಿತ್ತು. ಅದು ಆಗದೇ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವರಾದ ಭೈರತಿ ಬಸವರಾಜ್, ಸುನಿಲ್ ಕುಮಾರ್, ಶಾಸಕ ಅರವಿಂದ ಬೆಲ್ಲದ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಶಾಸಕರಾದ ಬಸವರಾಜ್ ದಡೆಸುಗೂರು, ಪರಣ್ಣ ಮನುವಳ್ಳಿ, ಟಿಬಿ ಬೋರ್ಡಿನ ಕಾರ್ಯದರ್ಶಿ ಓ.ಆರ್.ಕೆ ರೆಡ್ಡಿ, ಚೀಪ್ ಇಂಜಿನಿಯರ್ ನಾರಾಯಣ್ ನಾಯ್ಕ, ಉಪವಿಭಾಗಿಯಾಧಿಕಾರಿ ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್ ಇತರರಿದ್ದರು.