

ಹೊಸಪೇಟೆ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹಾಗೂ ಮಹಿಳಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಣಿ ಸಂಯುಕ್ತ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ರಾಣಿ ಸಂಯುಕ್ತ ಬರುವ ವೇಳೆ ಅವರ ಬೆಂಬಲಿಗರು ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರನ್ನು ದುಕಾಡಿದ್ದಾರೆ. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಮ್ಮ ಬೆಂಬಲಿಗರಿಗೆ ಹೇಳುವುದಕ್ಕೆ ಆಗಲ್ವ? ಕೈ ಹಾಕಿ ದುಕಾಡುತ್ತಾರೆ ಎಂದು ಪಿಟಿಪಿ ರಾಣಿ ಸಂಯುಕ್ತ ಅವರಿಗೆ ಆಗ್ರಹಿಸಿದರು. ಪ್ರತಿ ಉತ್ತರ ನೀಡಿದ ರಾಣಿ ಸಂಯುಕ್ತ ನಿಮಗೆ ಮಹಿಳೆಯರ ಜತೆ ಹೇಗೆ ಮಾತನಾಡಬೇಕು ಎಂದು ಗೊತ್ತಾಗಲ್ವ? ಎಂದು ಮಾತಿನ ಚಕಮಕಿ ನಡೆಯಿತು. ಹಾಗೂ ಅವರವರ ಬೆಂಬಲಿಗರು ಕೂಡ ತಳಾಟ ದೂಕಾಟ ನಡೆಸಿದರು. ಈ ವೇಳೆ ಪೊಲೀಸದರು ಹಾಗೂ ಜಿಲ್ಲಾಧ್ಯಾಕ್ಷ ಶೀರಾಜ್ ಶೇಕ್ ಮಧ್ಯಪ್ರವೇಶಿಸಿ ಗಲಾಟೆ ತಿಗೊಳಿಸಿದರು.