

ಹೊಸಪೇಟೆ: ಧರ್ಮಸ್ಥಳ ವಿಚಾರವಾಗಿ ರಾಜ್ಯ ಸರ್ಕಾರ ಬುರುಡೆ ಬಿಟ್ಟಿದ್ದಾರೆ. ಇದು ಬುರುಡೆ ಸರ್ಕಾರ ಎಂದ ವಿಪಕ್ಷ ನಾಯಕ ಆರ್.ಆಶೋಕ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲವ್ ಜಿಹಾದ್ ಮಾದರಿ ಮತಾಂತರ ಜಿಹಾದ್ ಮಾಡುತ್ತಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥ ದೇಗುಲ ಸೇರಿ ಇತರೆ ದೇಗುಲಗಳನ್ನು ಮುಜರಾಯಿ ಇಲಾಖೆ ಸೇರಿಸಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರ ಚರ್ಚ್ ಹಾಗೂ ಮಸೀದಿ ಕಡೆ ಇವರು ಹೋಗದೇ ಹಿಂದೂ ದೇಗುಲಗಳಿಗೆ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿದರು.
ಯಾವನೋ ಒಬ್ಬ ದಾರಿಯಲ್ಲಿ ಹೋಗುವವನು ಮಾತು ಕೇಳಿ ಎಸ್ ಐಟಿ ರಚನೆ ಮಾಡಿದ್ದಾರೆ. ಎರಡಮೂರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಧರ್ಮಸ್ಥಳದ ಬುರುಡೆ ಮ್ಯಾನ್ ಬಗ್ಗೆ ಸರ್ಕಾರಕ ಆರಂಭದಲ್ಲೇ ಅವನ್ಯಾರು ಎಂದು ವಿಚಾರಣೆ ಮಾಡಬೇಕಿತ್ತು. ಅವರನ ಗ್ರಾಮಸ್ಥರು ಹಾಗೂ ಪತ್ನಿ ಕೂಡ ಆರೋಪಿಸಿದ್ದಾರೆ ಅವನು ಕಳ್ಳಸುಳ್ಳ ಎಂದು. ಬುರುಡೆ ಮಾಸ್ಕ್ ಮ್ಯಾನ್, ಅನನ್ಯ ಭಟ್ ಇವರೆಲ್ಲ ಪಾತ್ರದಾರಿಗಳು. ಮಾಸ್ಕ್ ಹಾಕಿರುವವನ ಹಿಂದೆ ಸರ್ಕಾರ ಇದೆ. ಸಿಎಂ ಸಿದ್ದರಾಮಯ್ಯ ಅವರೇ ಬುರುಡೆ ಮ್ಯಾನ್‌ಗೆ ಮುಸುಕು ಹಾಕಿಸಿದ್ದು. ಪ್ರಗತಿಪರರು ಇದರ ಹಿಂದೆ ಇದ್ದಾರೆ. ಬುರುಡೆ ಕಥೆ ಹೊರಗಡೆ ಬಂದ ಕೂಡಲೇ ಪ್ರಗತಿಪರರು ಕಾಣೆಯಾಗಿದ್ದಾರೆ. ಅವರೆಲ್ಲ ರಾಜ್ಯ ಸರ್ಕಾರದ ನಾಟಕ ಕಂಪನಿ. ಬುರುಡೆ ನಾಟಕ ಕಂಪನಿ ರಾಜ್ಯ ಸರ್ಕಾರದ್ದು. ಸಿಎಂ ಸುತ್ರಧಾರಿ. ಅವರೆಲ್ಲ ಪಾತ್ರಧಾರಿಗಳು ಎಂದು ಆರೋಪಿಸಿದರು.