ಒಳ ಮೀಸಲಾತಿಗಾಗಿ ಉಗ್ರ ಹೋರಾಟ

30 MANJU 01
Published on

ಹೊಸಪೇಟೆ : ಪೌರ ಕಾರ್ಮಿಕರನ್ನು ಜೀತದಾಳಿಂತೆ ಕಾಣುತಿದ್ದರು. ಅವರ ಭದ್ರತೆಗೆ ಹೋರಾಟ ಮಾಡಿ ಗೌರವಸಿಗುಂತೆ ಮಾಡಿದ್ದೇವೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಇಲ್ಲಿನ ಸಿದ್ದಿಪ್ರಿಯ ಕಲ್ಯಾಣಮಂಟಪದಲ್ಲಿ ನಗರಸಭೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.

ಪೌರ ಕಾರ್ಮಿಕರು ಸಮಾಜದ ಆಸ್ತಿ. ನಾವು ಎದ್ದೇಳುವ ಮುನ್ನ ನಗರ, ಪಟ್ಟಣವನ್ನು ಸ್ವಚ್ಛ ಮಾಡಿ, ನಮಗೆ ಹೊರಗೆ ಬರಲು ಸ್ವಾಗತ ನೀಡುತ್ತಾರೆ. ಈ ಹಿಂದೆ ಮಲ ಹೋರುವಂತೆ ಪದ್ಧತಿಯನ್ನು ಅಂದಿನ ಸಿಎಂ ದೇವರಾಜ್ ಅರಸು ಹಾಗೂ ಮಂತ್ರಿಯಾಗಿದ್ದ ಬಸವಲಿಂಪ್ಪ ಅವರು ನಿರ್ಮೂಲನೆ ಮಾಡಿದರು. 70 ರ ದಶಕದಲ್ಲಿ ಮುಕ್ತಿ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಪ್ರೌರಕಾರ್ಮಿಕರಿಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ನೀಡಿ ಸುವರ್ಣ ಯುಗ ಮಾಡಿದ್ದರೆ. ಪೌರಾಕಾರ್ಮಿಕರಿಗೆ ಸರ್ಕಾರದಿಂದ ಒಂದು ಸಂಬಳ ಇದ್ದರೆ, ಕಾಂಟ್ರಾಕ್ಟ್ರ್ ಹಾಗೂ ಅಧಿಕಾರಿ ಒಪ್ಪಂದಿAದ ಜೀತದಾಳಾಗಿ ಮಾಡಿಕೊಂಡು ಕಡಿಮೆ ವೇತನ ನೀಡುತ್ರಿದ್ದರು. ಆದರೆ ಈಗ ನೇರವಾಗಿ ಸಂಬಳ ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂದು ಆದೇಶ ಮಾಡಿದ್ದಾರೆ ಎಂದರು.

ಸರ್ಕಾರದಿAದ ಹಲವು ಸೌಲಭ್ಯ ಪಡೆದು, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತೇನೆ ಎಂದು ಸಂಕಲ್ಪ ಮಾಡಬೇಕಿದೆ. ಸ್ಪರ್ಧಾ ಜಗತ್ತಿನಲ್ಲಿ ಮಾದಿಗರಿಗೆ ಭಾರಿ ಅನ್ಯಾಯ ಆಗುತ್ತಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಒಳ ಮೀಸಲಾತಿಗೆ ಸೂಚನೆ ನೀಡಿದೆ. ಸಿಎಂ ಯಾವುದೋ ಗೊಂದಲದಲ್ಲಿದ್ದಾರೆ. ಒಂದೆರಡು ತಿಂಗಳು ಕಾಯುತ್ತೇವೆ, ಜಾರಿ ಆಗದಿದ್ದರೆ, ಉಗ್ರಹೋರಾಟ ಮಾಡುತ್ತೆವೆ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಉದ್ಘಾಟಿಸಿ ಮಾತನಾಡಿ, ಸಾಮ್ರಾಜ್ಯ ಸುಖವಾಗಿರಬೇಕು ಎಂದರೆ ಕಾರ್ಮಿಕರ ಸೇವೆ ಅಗತ್ಯವಾಗಿದೆ. ಸೇವೆ ಮಾಡಲು ಅಧಿಕಾರ, ರಾಜಕೀಯ ಬೇಕಾಗಿಲ್ಲ. ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಸೇರಿಲು ವಿದ್ಯಾಭ್ಯಾಸ ಬೇಕಾಗಿಲ್ಲ. ನೇರವಾಗಿ ಸೇರಿಕೊಳ್ಳಬಹುದು. ಒತ್ತಡದ ಬದುಕಿನಲ್ಲಿ ಸುಖದ ನಿದ್ದೆ ಮಾಡುವವನೆ ಆರೋಗ್ಯವಂತ. ಶಿಕ್ಷಣ ಒಂದೆ ನಮ್ಮ ಸಮಸ್ಯೆಗೆ ಪರಿಹಾರ ನೀಡಲು ಸಾದ್ಯ ಎಂದರು.

ಇದಕ್ಕೂ ಮುನ್ಮ ಅಂಬೇಡ್ಕರ್ ವೃತ್ತದಿಂದ ಸಿದ್ದಪ್ರಿಯ ಕಲ್ಯಾಣ ಮಂಟಪದ ವರೆಗೆ ಮೇಳದಿಂದ ಪೌರಕಾರ್ಮಿಕರು ಮೆರವಣಿಗೆ ನಡೆಸಿದರು.

ಆಂಜನೇಯ ಗರಂ

ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮಕ್ಕೆ 11 ಗಂಟೆಗೆ ಆಗಮಿಸಿದ ಮಾಜಿ ಸಚಿವ ಎಚ್.ಆಂಜನೇಯ ಆಯೋಜಕರಿಗೆ ತರಾಟೆಗೆ ತಗೆದುಕೊಂಡರು. ನಗರಸಭೆಯಿಂದ ಅದ್ದೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ಶಾಸಕರು ವರಲಿಲ್ಲ, ಜಿಲ್ಲಾಧಿಕಾರಿ ಮಧ್ಯಾಹ್ನ 1 ಗಂಟೆ ಆಗಮಿಸಿದರು. ಕಾರ್ಯಕ್ರಮ ಸಮಯಕ್ಕೆ ಮಾಡಿ ಎಂದರು ಆಯೋಜಕರು ಡಿಸಿ ದಾರಿ ಕಾದರು. ಇದರಿಂದ ಅತಿಥಿಯಾಗಿ ಕರೆಸು ಈ ರೀತಿ ವೇದಿಕೆಯಲ್ಲಿ ಸುಮ್ಮನೆ ಕೂರಲು ಬಂದಿಲ್ಲ ಎಂದು ವೇಕೆಯಿಂದ ಹೋಗುತ್ತಿದ್ದರು. ನಗರಸಭೆ ಪೌರಾಯುಕ್ತ ಮನವಿ ಮಾಡಿದರು. ಕಾರ್ಯಕ್ರಮ ಉದ್ಘಾಟನೆ ನಂತರ ಕಾರ್ಯಮದಿಂದ ನಿರ್ಗಮಿಸಿದರು.

ಅಧಿಕಾರಿಗಳ ಪವರ್

ಪೌರಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಹಾಕಿದ ಬ್ಯಾನರ್‌ಗಳಲ್ಲಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಪೋಟೋ ಹಾಕಿರಲಿಲ್ಲ. ಇನ್ನೂ ವೇದಿಕೆಯಲ್ಲಿ ಸಾಂಕೇತಿಕವಾಗಿ ಇದ್ದರು. ಎಲ್ಲಾ ಕಾರ್ಯಗಳನ್ನು ಅಧಿಕಾರಿಗಳೆ ನಿರ್ವಹಿಸಿದರು. ಅಧಿಕಾರಿಗಳ ವರ್ತನೆ ನೋಡಿ ಕೆಲ ಸದಸ್ಯರು ಸಮಾರಂಭದಿAದ ವಾಪಾಸಾದರು. ಇನ್ನೂ ಸಮಾರಂಭದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಭೋಜನ ವ್ಯವಸ್ಥೆ ಮಾಡಿದರು. ನಗರದಲ್ಲಿ ಸದಸ್ಯರ ವಿರುದ್ಧ ಅಧಿಕಾರಿಗಳು ಬಲ ಪ್ರದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net