

ಹೊಸಪೇಟೆ: ಕನ್ನಡ ಚಿತ್ರರಂಗದಲ್ಲಿ ಹೆಜ್ಜಾರು ಇದು ಮೊಟ್ಟ ಮೊದಲ ಪ್ಯಾರ್ಲಲ್ ಲೈಫ್ ಸಿನಿಮಾ ಆಗಿದ್ದು ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಜು.19. ಜನರಿಗೆ ಆಕರ್ಷಣೆ ಆಗಲಿದೆ ಎಂದು ಚಿತ್ರದ ನಾಯಕ ನಟ ಭಗತ್ ಆಳ್ವಾ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸಪೇಟೆ ಹಾಗೂ ಬಳ್ಳಾರಿಯಲ್ಲಿ ಯಾವ ರೀತಿಯಲ್ಲಿ ಸ್ಪಂದನೆ ಸಿಗುತ್ತದೆಯೋ ಆ ರೀತಿಯಲ್ಲಿ ಸಿನಿಮಗಳು ಯಶಸ್ಸು ಕಾಣುತ್ತವೆ. ಇಲ್ಲಿಯ ಜನರು ಉತ್ತಮ ಸಿನಿಮಗಳು ನೋಡುತ್ತಾರೆ. ಇಲ್ಲವೆಂದರೆ, ಅದರ ಕಡೆ ಮುಖ ಹಾಕಲ್ಲ. ಸಿನಿಮಗಳ ಸೋಲು ಗೆಲವು ಇಲ್ಲೇ ಕಾಣ ಬಹುದು. ಒಳ್ಳೆಯ ವಿಚಾರ ಇರುವ ಕಥೆಯೊಂದಿಗೆ ಕನ್ನಡ ಸಿನಿಮಾರಂಗದಲ್ಲಿ ಪಾದಾರ್ಪಣೆ ಮಾಡುತ್ತಿದ್ದೇನೆ. ಯಶಸ್ಸು ಕಾಣಲಿದ್ದೆವೆ ಎಂಬ ಭರವಸೆಯಿದೆ ಎಂದರು.
ಸಿನಿಮದಲ್ಲಿ ಈ ಹಿಂದೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಆದಂತ ಘಟನೆಗಳು ಕೆಲವೊಮ್ಮೆ ಇನ್ನೋಬ್ಬರ ಜೀವನದಲ್ಲೂ ಸಾಗಿರುತ್ತದೆ. ಹೊಸತನಕ್ಕೆ ಸೇರಿಕೊಳ್ಳೊ ಸಿನಿಮಾ ಹೆಜ್ಜಾರು 3.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಸಿನಿಮಾವನ್ನ ಹರ್ಷಪ್ರಿಯ ನಿರ್ದೇಶನ, ರಾಮ್ ಜಿ ನಿರ್ಮಣ ಮಾಡಿದ್ದಾರೆ. ನಾಯಕ ನಟಿಯಾಗಿ ಲಿಯಾ ನಿಲ್ಲಾ ಶ್ವೇತಾ ಡಿಸೋಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಕೃಷ್ಣ ಅವರು ನೆಗೆಟಿವ್ ರೋಲ್ ಮಾಡಿದ್ದಾರೆ. ಸಿನಿಮದಲ್ಲಿ ನಾಲ್ಕು ಹಾಡುಗಳಿವೆ. ಗಾಯಕರಾದ ವಿಜಯ ಪ್ರಕಾಶ ಹಾಗೂ ಶರಣ್ ಅವರ ಕಂಠಸಿಯಲ್ಲಿ ಹಾಡುಗಳು ಮೂಡಿ ಬಂದಿವೆ ಎಂದರು.
ಸಹಾಯಕ ನಿರ್ದೇಶಕ ಗಿರೀಶ್ ಕನಕಪೂರ ಮಾತನಾಡಿ, ಇನ್ನು ಈ ಚಿತ್ರದ ನಿರ್ದೇಶಕ ಹರ್ಷಪ್ರಿಯ ಖಾಸಗಿ ವಾಹಿನಿಯಲ್ಲಿ ಫಿಕ್ಷನ್ ಹೆಡ್ ಆಗಿ ಕೆಲಸ ನಿರ್ವಹಿಸಿದ ಅನುಭವ. ಈಗಾಗಲೇ ಜನರ ಮನಸ್ಸು ಗೆದ್ದಿರೋ ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಡಾ ಬಿ ಆರ್ ಅಂಬೇಡ್ಕರ್ , ಪುಟ್ಟಗೌರಿ ಮದುವೆ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ಬರೆದಿದ್ದಾರೆ. ಸಾಕಷ್ಟು ಧಾರಾವಾಹಿಗಳ ಸ್ಕ್ರೀನ್ ಪ್ಲೇ ಕೂಡ ಬರೆದಿದ್ದಾರೆ ಎಂದರು.
ನಾಯಕ ನಟಿ ಲಿಯಾ ನಿಲ್ಲಾ ಶ್ವೇತಾ ಡಿಸೋಜಾ ಇದ್ದರು.