

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಕೆಲ ವಾರಗಳಿಂದೊ ವಾತಾವರಣದಲ್ಲಿ ಏರುಪೇರಾಗುತ್ತಿರುವುದಕ್ಕೆ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮಿನ ಪ್ರಮಾಣ ಹೆಚ್ಚಳವಾಗಿ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗುತ್ತಿದೆ.
ಜಿಲ್ಲೆಯಲ್ಲೇ ಬಹುತೇಕ ರ‍್ಕಾರಿ, ಖಾಸಗಿ ಆಸ್ಪತ್ರೆಗಳ ಮುಂದೆ ಮಕ್ಕಳೊಂದಿಗೆ ತಾಯಂದಿರು ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿವೆ. ಅನಾರೋಗ್ಯಕ್ಕೀಡಾದ ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ವೇಳೆ ಸಿಗದಂತ ಸ್ಥಿತಿ ನರ‍್ಮಾಣವಾಗಿದೆ. ವೈರಲ್ ಫಿವರ್‌ನಿಂದ ಉಲ್ಬಣಗೊಂಡಿರುವ ಈ ಸಮಸ್ಯೆಗೆ ಸುಸ್ತಾಗುವ ಮಕ್ಕಳನ್ನು ಕಂಡುಪಾಲಕರು ಮರುಗುತ್ತಿದ್ದಾರೆ. ತೀವ್ರ ಜ್ವರ, ಬಳಲುತ್ತಿರುವ ಮಕ್ಕಳು ಉಸಿರಾಟ ಸಮಸ್ಯೆಯನ್ನೂ ಅನುಭವಿಸುತ್ತಿದ್ದಾರೆ.
ಮಕ್ಕಳ ಆರೋಗ್ಯ ಸುಧಾರಣೆಗೆ ಕನಿಷ್ಠ ಒಂದು ವಾರ ಸಮದು ಬೇಕಾಗಿದ್ದರಿಂದ ಪಾಲಕರು ಕೆಲಸ ಬಿಟ್ಟು ಮಕ್ಕಳನ್ನು ನೋಡಿಕೊಳ್ಳುವುದೇ ಒಂದು ಕೆಲಸವಾಗುತ್ತಿದೆ. ಇತ್ತ ಅನಾರೋಗ್ಯಕ್ಕೀಡಾದ ಮಕ್ಕಳು ಶಾಲೆಗೆ ಗೈರಾಗುವುದರಿಂದ ಕ್ಷೀಣಿಸುವ ಹಾಜರಾತಿಗೆ, ಶಿಕ್ಷಣ ಇಲಾಖೆಗೆ ಹಾಜರಾತಿ ಅಂಕಿ-ಸಂಖ್ಯೆ ನೀಡಲು ಶಿಕ್ಷಕರಿಗೂ ಒಂದು ರೀತಿಯ ಪ್ರಾಣಸಂಕಟ ಎದುರಾಗುತ್ತಿದೆ.
ಜ್ವರ ಬಾಧೆಯಿಂದ ಖಾಸಗಿ ಆಸ್ಪತ್ರೆಗೆ ಹೋಗುವ ಮಕ್ಕಳ ರಕ್ತ ಪರೀಕ್ಷೆ ಸೇರಿ ಎಲ್ಲ ಪರೀಕ್ಷೆ ಮುಗಿದು ಮಗು ಗುಣಮುಖವಾಗಿ ಮನೆ ಸೇರುವಷ್ಟರಲ್ಲಿ ಪಾಲಕರು ಹೈರಾಣಾಗುತ್ತಿದ್ದಾರೆ. ಮಕ್ಕಳ ಆರೋಗ್ಯದ ಚಿಂತೆ ಜತೆಯಲ್ಲಿ ಆಸ್ಪತ್ರೆ ರ‍್ಚಿನ ದುಡ್ಡು ಹೊಂದಿಸುವುದು ಸಾಮಾನ್ಯ ಜನರಿಗೆ ಕಷ್ಟದಾದುಕವಾಗಿದೆ. ರಕ್ತ ಸೇರಿದಂತೆ ಇತರ ಪರೀಕ್ಷೆಗೆಂದು ಲ್ಯಾಬ್‌ಗಳಿಗೆ ಬಂದವರು ಅವರು ಕೇಳಿದಷ್ಟು ದುಡ್ಡು ಕೊಡುವಂತಾಗಿದೆ ಎಂಬುದು ಹಲವು ಪಾಲಕರ ಆರೋಪ.
ಮಳೆ ನೀರು ಅಲ್ಲಲ್ಲಿ ರಸ್ತೆ, ತಗ್ಗಿನಲ್ಲಿ ನಿಲ್ಲುವುದು, ಸ್ವಚ್ಛವಿರದ ಚರಂಡಿಗಳಿಂದ ಸೊಳ್ಳೆ ಹೆಚ್ಚಿ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಫಾಗಿಂಗ್ ಮಾಡಿ ಕನಿಷ್ಠ ಸಾಂಕ್ರಾಮಿಕ ರೋಗಗಳ ತಡೆಗೆ ಕ್ರಮವಹಿಸಲಾಗುತಿತ್ತು. ಬಹುತೇಕ ಈಗ ಫಾಗಿಂಗ್ ಮಾಡುವುದನ್ನೇ ನಿಲ್ಲಿಸಿದ್ದರಿಂದ ಮಕ್ಕಳ ಅನಾರೋಗ್ಯದ ಪ್ರಕರಣ ಹೆಚ್ಚಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮಕ್ಕಳಲ್ಲಿ ಹೆಚ್ಚಿದ ಜ್ವರಬಾಧೆ ನಿಯಂತ್ರಣಕ್ಕೆ ಜಿಲ್ಲಾಡಳಿತ ವಿಶೇಷ ಕಾಳಜಿವಹಿಸಬೇಕು ಎಂಬುದು ಪಾಲಕರ ಒತ್ತಾಸೆಯಾಗಿದೆ.
ವೈರಲ್ ಫೀವರ್ ನಿಯಂತ್ರಣದಲ್ಲಿದೆ. ಮಳೆ, ಬಿಸಿಲು ಮಿಶ್ರಣದಿಂದ ವಾತಾವರಣದಲ್ಲಿ ಒಂದಿಷ್ಟು ವ್ಯತ್ಯಾಸವಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹೆಚ್ಚುವ ಸಾಧ್ಯತೆ ಇದೆ. ಮಳೆ ನೀರು ನಿಲ್ಲದಂತೆ ಸೊಳ್ಳೆ ಉತ್ಪತ್ತಿಯಾಗದಂತೆ ಮುಂಜಾಗೃತವಾಗಿ ಸ್ವಚ್ಛತೆಗೆ ಕ್ರಮವಹಿಸುವ ಜತೆಗೆ ಫಾಗಿಂಗ್ ಮಾಡಲು ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಮಾಹಿತಿ ನೀಡಲು ಜಿಲ್ಲೆಯ ಎಲ್ಲ ತಾಲೂಕು ಟಿಎಚ್‌ಒಗಳಿಗೆ ಸೂಚನೆ ನೀಡಲಾಗುವುದು. - ಡಾ.ಶಂಕರ್ ನಾಯ್ಕ, ಡಿಎಚ್ ಒ, ವಿಜಯನಗರ