ಹೊಸಪೇಟೆ; ಮನುಷ್ಯನಿಗೆ ಈ ಭೂಮಿಯಲ್ಲಿ ಬದುಕಲು ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ವನ್ಯಜೀವಿಗಳಿಗೂ ಇದೆ ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ತಿಳಿಸಿದರು.
ದರೋಜಿ ಕರಡಿಧಾಮದಿಂದ ತಾಲೂಕಿನ ಕಮಲಾಪುರದ ಪ್ರಕೃತಿ ನಿರೂಪಣ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ 71ನೇ ವನ್ಯಜೀವಿ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿರತೆ, ಕರಡಿ ಸೇರಿದಂತೆ ಅಪಾರ ಸಂಖ್ಯೆಯ ವೈವಿಧ್ಯಮಯ ವನ್ಯಜೀವಿಗಳು ನಮ್ಮ ಪರಿಸರದಲ್ಲಿವೆ. ಇಲ್ಲಿನ ಕಲ್ಲು ಬಂಡೆಗಳು ಹಾಗೂ ಕುರುಚಲ ಕಾಡು ಅವುಗಳಿಗೆ ಆಶ್ರಯ ಮತ್ತು ಆಹಾರವನ್ನು ಒದಗಿಸಿದೆ. ಆದ್ದರಿಂದ ಅವುಗಳ ಆವಾಸಸ್ಥಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ದರೋಜಿ ಕರಡಿ ದಾಮದ ವಲಯ ಅರಣ್ಯ ಅಧಿಕಾರಿ ಬಸವರಾಜ್ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಈಗ ಹೆಚ್ಚು ಪ್ರಚಲಿತದಲ್ಲಿರುವ ವಿಷಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಪರಿಸರ, ವನ್ಯಜೀವಿ ಹಾಗೂ ಅರಣ್ಯದ ಬಗ್ಗೆ ತಿಳಿದುಕೊಂಡು ಅವುಗಳನ್ನು ಸಂರಕ್ಷಿಸಲು ಕರೆ ನೀಡಿದರು.
ಛಾಯಾಗ್ರಾಹಕ ಶಿವಶಂಕರ ಬಣಗಾರ ಕಾರ್ಯಕ್ರಮದಲ್ಲಿ ವನ್ಯಜೀವಿ ಸಂರಕ್ಷಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ವ
ಛಾಯಾಗ್ರಾಹಕ ಪಂಪಯ್ಯ ಮಳೆಮಠ, ಛಾಯಾಗ್ರಾಹಕ ಇತರರಿದ್ದರು.