ಬೆಂಗಳೂರಲ್ಲಿ ಇಬ್ಬರು ವೈದ್ಯರ ಬಂಧನ

elevated-view-arrested-doctors-hand-260nw-767181181
Published on

ಹೊಸಪೇಟೆ: ವೈದ್ಯಕೀಯ ಸೀಟು ಪಡೆಯಲು ನಕಲಿ ದಾಖಲೆ ಸೃಷ್ಟಿ ಆರೋಪ ವಿಚಾರ ನಗರ್ ಇಬ್ಬರ ವೈದ್ಯರನ್ನು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ನಗರದ ಉಪವಿಭಾಗಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆರ್ ಎಂ ಒ ಡಾ.ಹರಿಪ್ರಸಾದ್, ಕಮಲಾಪುರ ಸರ್ಕಾರಿ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಶ್ರೀನಿವಾಸ್ ಬಂಧನಕ್ಕೊಳಗಾಗಿದ್ದಾರೆ.

ಮೆಡಿಕಲ್ ಸೀಟ್ ಪಡೆಯಲು ಅಂಗವಿಲಕ ವಿಶೇಷ ಕೋಟಾದಡಿಯಲಿ ನಕಲಿ ದಾಖಲೆ ಸೃಷ್ಟಿ ಆರೋಪದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 21 ಅಭ್ಯರ್ಥಿಗಳ ವಿರುದ್ದ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ವರ್ಷದ ಅವಧಿಯಲ್ಲಿ ನಕಲಿ ಹಲವು ಪ್ರಮಾಣ ಪತ್ರ ನೀಡಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಬೆಂಗಳೂರು ಪೊಲೀಸರಿಂದ ಈ ಹಿಂದೆ ನೊಟೀಸ್ ಜಾರಿಯಾಗಿತ್ತು. ಬೆಂಗಳೂರಿಗೆ ವಿಚಾರಣೆಗೆ ಕರೆದು ವೈದ್ಯರನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net