

ರಾಣೆಬೆನ್ನೂರ: ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಸಹ ಸಸಿಯನ್ನು ನೆಟ್ಟು ಅವುಗಳನ್ನು ಹೆಮ್ಮರವಾಗಿ ಬೆಳೆಯುವಂತೆ ನೋಡಿಕೊಂಡಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹೇಳಿದರು.
ತಾಲೂಕಿನ ಹೊಸಚಂದಾಪುರ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಂಡ ಗೋಕಟ್ಟೆ ಕೆರೆಯ ಆವರಣದಲ್ಲಿ ಸಸಿ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಸಾಲವನ್ನು ನೀಡುವುದಷ್ಟೆಯಲ್ಲದೆ ರೈತರ, ಮಹಿಳೆಯರ ಹಾಗೂ ಶಿಣ ೇತ್ರ ಸೇರಿ ಎಲ್ಲ ರಂಗದಲ್ಲೂ ಶ್ರೀ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ನೆರವಾಗುತ್ತಿದೆ. ಹೊಸ ಚಂದಾಪುರ ಗ್ರಾಮದಲ್ಲಿ 644ನೇ ಕೆರೆಯನ್ನು ಯೋಜನೆಯ ಅನುದಾನದ ಮೂಲಕ 6 ಎಕರೆ ಕೆರೆಯನ್ನು ಹೂಳೆತ್ತಿ ಸುಮಾರು 200 ರೈತರ ಹೊಲಗಳಿಗೆ ಅನುಕೂಲವಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಯೋಜನಾಧಿಕಾರಿ ಮಂಜುನಾಥ ಎಂ., ಕೆರೆ ಸಮಿತಿ ಉಪಾಧ್ಯ ಸಿದ್ದಪ್ಪ ದುಂಡಿಯವರ, ರವಿ ಜಾಧವ, ಹೊನ್ನಪ್ಪ ಕರೆತಿಮ್ಮಣ್ಣನವರ, ಈರಣ್ಣ ಕಂಬಳಿ, ಒಕ್ಕೂಟದ ಅಧ್ಯೆ ರತ್ನಮ್ಮ ಬಣಕಾರ, ಹನುಮಂತ ದೀಪಾವಳಿ, ಮಂಜುನಾಥ ಶಿವಪ್ಪನವರ, ಗಣೇಶ ಎನ್.ಡಿ., ಹನುಮಂತ ಎರೇಶೀಮಿ ಮತ್ತಿತರರು ಉಪಸ್ಥಿತರಿದ್ದರು.