ಆ್ಯಂಬ್ಯುಲೆನ್ಸ್‌ನಲ್ಲೇ ಹೆರಿಗೆ

HSD AMBULANCE 30 (1)
Published on

ಹೊಸದುರ್ಗ: ತಾಲೂಕಿನ ಬುಕ್ಕಸಾಗರದ ಮಹಿಳೆ ಸೋಮವಾರ ಬೆಳಗ್ಗೆ ದೊಡ್ಡತೆಕ್ಕಲವಟ್ಟಿ ಬಳಿ ಆ್ಯಂಬುಲೆನ್ಸ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ತಾಲೂಕಿನ ಬುಕ್ಕಸಾಗರ ಗ್ರಾಮದ ತ್ಯಾಗರಾಜು ಪತ್ನಿ ರಾಧಾಮಣಿಗೆ ಸೋಮವಾರ ಮುಂಜಾನೆ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೆ ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಲಾಗಿದೆ.

ಸ್ಥಳಕ್ಕೆ ಧಾವಿಸಿದ ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯನ್ನು ಹೊಸದುರ್ಗದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ದೊಡ್ಡತೆಕ್ಕಲವಟ್ಟಿ ಬಳಿ ಹೆರಿಗೆ ನೋವು ಹೆಚ್ಚಾಗಿದೆ.

ಪರಿಸ್ಥಿತಿಯನ್ನು ಅರಿತ ಆರೋಗ್ಯ ಸಹಾಯಕಿ ಪವಿತ್ರಾ, ಚಾಲಕ ಮಂಜುನಾಥಸ್ವಾಮಿ ವಾಹನದಲ್ಲೇ ಸುಸೂತ್ರವಾಗಿ ಹೆರಿಗೆ ಮಾಡಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಬಳಿಕ ತಾಯಿ ಮತ್ತು ಮಗುವನ್ನು ಹೊಸದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net