More

    ಕರೊನಾ ಸೋಂಕು ಇದ್ದರೂ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡ, 11 ಜನರಿಗೆ ಸೋಂಕು ಹರಡಿ ಜೈಲು ಸೇರಿದ

    ಬ್ಯೂನಸ್​ ಐರಿಸ್​: ತನಗೆ ಕರೊನಾ ವೈರಸ್​ ಸೋಂಕು ಇರುವುದು ಗೊತ್ತಿದ್ದೂ, ಸಂಬಂಧಿಯೊಬ್ಬರ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡು 11 ಜನರಿಗೆ ಸೋಂಕು ಹಂಚಿದ. ವಿಷಯ ತಿಳಿದ ಅರ್ಜೆಂಟೀನಾ ಪೊಲೀಸರು ಆತನನ್ನು ಬಂಧಿಸಿ, ವಿಚಾರಣಗೆ ಒಳಪಡಿಸಿದ್ದರು. ನ್ಯಾಯಾಲಯ ಆತನಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಎರಿಕ್​ ಟೊರಾಲೆಸ್​ (24) ಶಿಕ್ಷೆಗೆ ಗುರಿಯಾದವ. ಈತ ಅಮೆರಿಕದಿಂದ ಅರ್ಜೆಂಟೀನಾದ ಬ್ಯೂನಸ್​ಐರಿಸ್​ಗೆ ಮರಳಿದ್ದ. ವಿಮಾನ ನಿಲ್ದಾಣದಲ್ಲಿ ಆತನನ್ನು ಪರೀಕ್ಷಿಸಿದ್ದ ಅಧಿಕಾರಿಗಳು 14 ದಿನಗಳ ಕ್ವಾರಂಟೇನ್​ನಲ್ಲಿ ಇರುವಂತೆ ಸೂಚಿಸಿ, ಆತನ ಕೈಗೆ ಸೀಲ್​ ಹಾಕಿದ್ದರು.
    ಆದರೆ, ಕ್ವಾರಂಟೇನ್​ ನಿರ್ಬಂಧವನ್ನು ಉಲ್ಲಂಘಿಸಿದ ಆತ ತನ್ನ ಹತ್ತಿರದ ಸಂಬಂಧಿಯೊಬ್ಬರ 15 ವರ್ಷದ ಪುತ್ರಿಯ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ. ಸಮಾರಂಭದಲ್ಲಿ 100ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದರು.

    ಮರುದಿನ ಈತನಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಈತನನ್ನು ಆಸ್ಪತ್ರೆಗೆ ದಾಖಲಿಸಿ, ಗಂಟಲ ದ್ರವದ ಪರೀಕ್ಷೆ ನಡೆಸಿದಾಗ ಈತನಿಗೆ ಕರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು.

    ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದವರನ್ನು ಪರೀಕ್ಷೆಗೆ ಒಳಪಡಿಸಿದಾಗ, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ 15 ವರ್ಷದ ಬಾಲಕಿ, 75 ಮತ್ತು 76 ವರ್ಷದ ಹಿರಿಯ ನಾಗರಿಕರು ಸೇರಿ ಒಟ್ಟು 11 ಮಂದಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಇನ್ನೂ 20 ಮಂದಿಯನ್ನು ಕ್ವಾರಂಟೇನ್​ನಲ್ಲಿ ಇರಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದ ಅರ್ಜೆಂಟೀನಾ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದರು. ವಿಚಾರಣೆಯಲ್ಲಿ ಆತ ತಪ್ಪು ಮಾಡಿರುವುದು ಖಚಿತಪಟ್ಟಿದೆ. ಸದ್ಯ ಆತನನ್ನು ಗೃಹ ಬಂಧನದಲ್ಲಿರಿಸಲಾಗಿದ್ದು, ಸಂಪೂರ್ಣ ಚೇತರಿಸಿಕೊಂಡ ಬಳಿಕ ಆತನನ್ನು ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ; ಬಳ್ಳಾರಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು

    ಚೀನಾದ ಮೊದಲ ಕರೊನಾ ಸೋಂಕಿತೆಯಿಂದ ಸ್ಫೋಟಕ ಮಾಹಿತಿ: ಜೀವಂತ ಪ್ರಾಣಿ ಮಾರುಕಟ್ಟೆ ವೈರಸ್​ ಹುಟ್ಟಿನ ಕೇಂದ್ರವಾಯಿತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts