More

    ಚೀನಾದ ಮೊದಲ ಕರೊನಾ ಸೋಂಕಿತೆಯಿಂದ ಸ್ಫೋಟಕ ಮಾಹಿತಿ: ಜೀವಂತ ಪ್ರಾಣಿ ಮಾರುಕಟ್ಟೆ ವೈರಸ್​ ಹುಟ್ಟಿನ ಕೇಂದ್ರವಾಯಿತೇ?

    ಬೀಜಿಂಗ್​​: ಕರೊನಾ ವೈರಸ್​ ಸ್ಪೋಟ ಕೇಂದ್ರ ಚೀನಾದ ವುಹಾನ್​ ನಗರದಲ್ಲಿ ಸೀಗಡಿ ಮಾರಾಟ ಮಾಡುತ್ತಿದ್ದ 57 ವರ್ಷದ ಮಹಿಳೆಯನ್ನು ಕೋವಿಡ್​-19 ಸೋಂಕಿಗೆ ಒಳಗಾದ ಮೊದಲ ರೋಗಿ ಎಂದು ನಂಬಲಾಗಿದೆ.

    ಮಹಿಳೆಯನ್ನು ವೀ ಗುಕ್ಸಿಯನ್​ ಎಂದು ಗುರುತಿಸಲಾಗಿದ್ದು, ಸುಮಾರು ಒಂದು ತಿಂಗಳ ಸುದೀರ್ಘ ಚಿಕಿತ್ಸೆಯ ಬಳಿಕ ಜನವರಿಯಲ್ಲಿ ಗುಣಮುಖರಾಗಿದ್ದಾರೆ. ಸೋಂಕು ಹರಡುವಿಕೆಯನ್ನು ಚೀನಾ ಸರ್ಕಾರ ಪತ್ತೆ ಹಚ್ಚಲು ಮೂಲ ಕಾರಣವಾಗಿದ್ದು ಇದೇ ಮಹಿಳೆ ಎಂದು ನಂಬಲಾಗಿದೆ.

    ಹುನಾನ್​ ಸೀಫುಡ್​ ಮಾರುಕಟ್ಟೆಯಲ್ಲಿ ಸೀಗಡಿ ಮಾರುತ್ತಿದ್ದ ಗುಕ್ಸಿಯನ್​ಗೆ ಡಿಸೆಂಬರ್​ 10ರಲ್ಲೇ ಶೀತ ಕಾಣಿಸಿಕೊಂಡಿತು. ಮೊದಲಿಗೆ ಸಾಮಾನ್ಯ ಜ್ವರ ಎಂದು ಭಾವಿಸಿ, ಸ್ಥಳೀಯ ಆಸ್ಪತ್ರೆಗೆ ಹೋಗಿ ಚುಚ್ಚುಮದ್ದು ಪಡೆದು ಬಂದಿದ್ದಳು. ಆದಾಗ್ಯೂ ಆರೋಗ್ಯ ಮತ್ತಷ್ಟು ದುರ್ಬಲವಾಗುತ್ತಿರುವುದನ್ನು ಮನಗಂಡು ವುಹಾನ್​ನಲ್ಲಿರುವ ಇಲೆವೆಂಥ್​ ಹಾಸ್ಪಟಿಲ್​ಗೆ ಭೇಟಿ ನೀಡಿದ್ದರು.

    ಆರೋಗ್ಯದಲ್ಲಿ ಮತ್ತಷ್ಟು ಕ್ಷೀಣತೆ ಕಂಡ ಗುಕ್ಸಿಯನ್​ರನ್ನು ಅತಿದೊಡ್ಡ ವುಹಾನ್​ ಯೂನಿಯನ್​ ಹಾಸ್ಪಿಟಲ್​ಗೆ ಡಿಸೆಂಬರ್​ 16ರಂದು ದಾಖಲಿಸಲಾಯಿತು. ತನ್ನ ಅನಾರೋಗ್ಯದ ಗಂಭೀರತೆ ಬಗ್ಗೆ ಗುಕ್ಸಿಯನ್​ ಹೇಳಿಕೊಂಡಳು. ಇದಾದ ಕೆಲವೇ ದಿನಗಳಲ್ಲಿ ಹುನಾನ್​ ಮಾರುಕಟ್ಟೆಯಿಂದ ಒಂದೇ ರೀತಿಯ ರೋಗ ಲಕ್ಷಣವಿರುವ ಅನೇಕರು ಹಾಸ್ಪಿಟಲ್​​ಗೆ ಭೇಟಿ ಕೊಟ್ಟರು.

    ಯಾವಾಗ ಸೀಫುಡ್​ ಮಾರುಕಟ್ಟೆಯಿಂದ ಕರೊನಾ ವೈರಸ್ ಸ್ಪೋಟಗೊಂಡಿದೆ ಎಂಬುದನ್ನು ಅರಿತ ವೈದ್ಯರು ತಕ್ಷಣ ಡಿಸೆಂಬರ್​ ಅಂತ್ಯದಲ್ಲೇ ಗುಕ್ಸಿಯನ್​ರನ್ನು ಕ್ವಾರಂಟೈನ್​ಗೆ ಒಳಪಡಿಸಿದರು.

    ಕರೊನಾ ವೈರಸ್​ ಜೀವ ಪ್ರಬೇಧಗಳ ಗಡಿಯನ್ನು ದಾಟಿ ಹೊಸ ಅತಿಥೇಯರೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯವಿದೆ ಎಂಬುದು ಸ್ಪಷ್ಟವಾಯಿತು. ಮುಂದಿನ ದಿನಗಳಲ್ಲಿ ಮತ್ತಷ್ಟು ಕರೊನಾ ವೈರಸ್​ ಹುಟ್ಟಿಕೊಳ್ಳುತ್ತವೆ ಎಂಬುದು ಸ್ಪಷ್ಟವಾದ ಬೆನ್ನಲ್ಲೇ, ಅದರ ಕುರಿತಾದ ಅಧ್ಯಯನಗಳು ಆರಂಭವಾಗತೊಡಗಿತು.​

    ತಕ್ಷಣ ಜೀವಂತ ಪ್ರಾಣಿ ಮಾರಾಟ ಮಾರುಕಟ್ಟೆಯನ್ನು ಮುಚ್ಚಲಾಯಿತು. ಗುಕ್ಸಿಯನ್​ ಜನವರಿಯಲ್ಲಿ ಗುಣಮುಖರಾದರು. ಮಾರುಕಟ್ಟೆಯಲ್ಲಿ ಮಾಂಸ ಮಾರಾಟಗಾರರೊಂದಿಗೆ ಹಂಚಿಕೊಂಡ ಶೌಚಗೃಹದಿಂದಲೇ ಸೋಂಕು ಹರಡಿದ್ದಾಗಿ ಗುಕ್ಸಿಯನ್ ಹೇಳಿದ್ದರು. ಅಲ್ಲದೆ, ಅನೇಕ ಮಾರಾಟಗಾರರು ಕೂಡ ಇದೇ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

    ಪ್ರಾರಂಭದಲ್ಲಿ ವುಹಾನ್​ ಮುನ್ಸಿಪಲ್​ ಹೆಲ್ತ್​ ಕಮಿಷನ್,​ ಗುಕ್ಸಿಯನ್​ ಸೇರಿದಂತೆ ಪರೀಕ್ಷೆಗೆ ಒಳಪಡಿಸಿದ 27 ಮಂದಿಯಲ್ಲಿ ಕೋವಿಡ್​ 19 ಪಾಸಿಟಿವ್​ ಫಲಿತಾಂಶ ಬಂದಿತ್ತು. ಇದರಲ್ಲಿ 24 ಮಂದಿ ಮಾರುಕಟ್ಟೆಗೆ ನೇರ ಸಂಪರ್ಕವನ್ನು ಹೊಂದಿದ್ದರು. ಈ ಬಗ್ಗೆ ಸರ್ಕಾರ ಮೊದಲೇ ಎಚ್ಚೆತ್ತುಕೊಂಡಿದ್ದರೆ ಸಾವಿನ ಸಂಖ್ಯೆಯನ್ನು ತಗ್ಗಿಸಬಹುದಾಗಿತ್ತು ಎನ್ನುತ್ತಾರೆ ಗುಕ್ಸಿಯನ್​. (ಏಜೆನ್ಸೀಸ್​)

    ಏಪ್ರಿಲ್​ ಆರಂಭದಿಂದಲೇ ಕರೊನಾದಿಂದ ಭಾರತೀಯರಿಗೆ ಮುಕ್ತಿ: ಭರವಸೆ ತಂದ ಹೊಸ ಸಂಶೋಧನಾ ವರದಿ!

    ವಾವ್​… ನನ್ನ ಟೀ-ಶರ್ಟ್​ ಮೇಲೇಕೆ ನಿಮ್ಮ ಲುಕ್​ : ಸನ್ನಿ ಲಿಯೋನ್​ ಅವರ ಒಗಟಿನ ಮಾತಿಗೂ ಲಾಕ್​ಡೌನ್​ಗೂ ಇದೆ ಲಿಂಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts